ಸುಕೋ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಯಶಸ್ವಿ ಹೆಜ್ಜೆ

 

ಚಳ್ಳಕೆರೆ:  ವಾಣಿಜ್ಯನಗರವಾದ ಚಳ್ಳಕೆರೆಯಲ್ಲಿ ಕಳೆದ ಆರು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆನೀಡಿ ಏಳನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಖಾಸಗಿ ವಲಯದ ಸುಕೋ ಬ್ಯಾಂಕ್ (suco bank)ಸೇವೆ ಇಲ್ಲಿನ ಗ್ರಾಹಕರಿಗೆ ತೃಪ್ತಿ ತಂದಿದೆ ಎಂದು ಹಿರಿಯ ಸಹಕಾರಿ ದುರೀಣ ಸಿ.ಬಿ.ಆದಿಭಾಸ್ಕರಶೆಟ್ಟಿ ತಿಳಿಸಿದರು.

ಅವರು, ಶನಿವಾರ ಬ್ಯಾಂಕ್ ಆವರಣದಲ್ಲಿ ೭ನೇ ವಾರ್ಷಿಕೋತ್ಸವವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ನಗರದ ಹಲವಾರು ವಲಯಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಸುಕೋಬ್ಯಾಂಕ್ ತನ್ನ ವ್ಯವಹಾರವನ್ನು ಚುರುಕುಗೊಳಿಸಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.
ಉದ್ಯಮಿ ಬಾಳೆಮಂಡಿರಾಮದಾಸ್ ಮಾತನಾಡಿ, ಸುಕೋಬ್ಯಾಂಕ್‌ನಲ್ಲಿ ಎಲ್ಲಾ ವ್ಯವಹಾರಗಳು ಅಚ್ಚುಕಟ್ಟಾಗಿ ನಡೆಯಲು ಶಾಖೆಯ ವ್ಯವಸ್ಥಾಪಕರೂ ಸೇರಿದಂತೆ ಸಿಬ್ಬಂದಿ ವರ್ಗವೂ ಸಹ ಸಕರಾತ್ಮಕವಾಗಿ ಸ್ಪಂದಿಸುತ್ತಿದೆ. ರಾಜ್ಯದ ಸಹಕಾರಿ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ಹೆಚ್ಚು ಆದ್ಯತೆಯನ್ನು ಗ್ರಾಹಕರು ಸುಕೋಬ್ಯಾಂಕ್‌ಗೆ ನೀಡುತ್ತಿದ್ದಾರೆ ಎಂದರು.
ವ್ಯವಸ್ಥಾಪಕ ಎಸ್.ಶಿವಾನಂದ ಎಲ್ಲರನ್ನೂ ಸ್ವಾಗತಿಸಿ ಮಾತನಾಡಿ, ನಗರದ ಗ್ರಾಹಕರಿಗೆ ಆರು ವರ್ಷಗಳ ಕಾಲ ಉತ್ತಮ ಸೇವೆ ನೀಡಿ ಏಳನೇ ವರ್ಷಕ್ಕೆ ಪಾದಾರ್ಪಣೆ ಮಾಡಲಾಗುತ್ತಿದೆ. ರೈತ, ಕಾರ್ಮಿಕ ವರ್ಗವೂ ಸೇರಿದಂತೆ ಹಲವಾರು ವಲಯಗಳಿಗೆ ಸಹಕಾರಿ ಕ್ಷೇತ್ರದ ನಿಮಗಳಡಿ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಗ್ರಾಹಕರೂ ಸಹ ಬ್ಯಾಂಕ್‌ನ ನಿಯಮಗಳನ್ನು ಪಾಲಿಸುವ ಮೂಲಕ ಬ್ಯಾಂಕ್ ಅಭಿವೃದ್ದಿಗೆ ಸಹಕಾರ ನೀಡಿದ್ಧಾರೆಂದರು.

ಇದನ್ನೂ ಓದಿ: ವಿವಿಧ ನಿಗಮಗಳ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಇದೇ ಸಂದರ್ಭದಲ್ಲಿ ಪ್ರಸ್ತುತ ಕನ್ನಡ ರಾಜ್ಯೋತ್ಸವ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ಹಿರಿಯ ಸಂಗೀತ ನಿರ್ದೇಶಕ, ನಾಟಕಕಾರ ಪಿ.ತಿಪ್ಪೇಸ್ವಾಮಿಯವರನ್ನು ಬ್ಯಾಂಕ್ ಆಡಳಿತ ಮಂಡಳಿ ಪರವಾಗಿ ಬಾಳೆಮಂಡಿ ರಾಮದಾಸ್ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಕ್ಲಸ್ಟರ್ ವ್ಯವಸ್ಥಾಪಕ ಶ್ರೀನಿವಾಸ್‌ಶಂಕಾಪೂರ್, ನಿವೃತ್ತ ಶಿಕ್ಷಕ ಮಂಜುನಾಥ, ಐಡಿಬಿಐ ಬ್ಯಾಂಕ್ ವ್ಯವಸ್ಥಾಪಕ ಶಿವಕುಮಾರ್, ಶರಣಪ್ಪ, ಎಂ.ರAಜಿತ, ಎಂ.ಯಶೋಧಮ್ಮ, ಕೀರ್ತಿ, ನಿವೇದಿತ, ಅನಿಲ್‌ಕುಮಾರ್, ಪಿಗ್ನಿಸಂಗ್ರಾಹಕ ರಮೇಶ್ ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours