ಬಿಗ್ ಬಾಸ್ ಶೋ ಗೆ ಸಂಭಾವ್ಯ 10 ಜನರ ಪಟ್ಟಿ 

 

ಕನ್ನಡತಿ’ ಧಾರಾವಾಹಿ ಮೂಲಕ ಫೇಮಸ್ ಆದ ರಂಜನಿ ರಾಘವನ್ ದೊಡ್ಮನೆಗೆ ಹೋಗುತ್ತಾರೆ ಎಂದು ಸುದ್ದಿ ಆಗಿದೆ. ಕಲರ್ಸ್ ಜೊತೆ ಅವರಿಗೆ ಒಳ್ಳೆಯ ಒಡನಾಟ ಇದೆ. ಆರ್​ಸಿಬಿ ಪರ ಆಡಿದ್ದ ವಿನಯ್ ಕುಮಾರ್ ಕೂಡ ದೊಡ್ಮನೆಗೆ ಹೋಗಲಿದ್ದಾರಂತೆ.

ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದ ರೂಪಾ ರಾಯಪ್ಪ, ಕಿರುತೆರೆ ನಟ ರಾಜೇಶ್ ಧ್ರುವ, ಮಿಮಿಕ್ರಿ ಗೋಪಿ, ಬುಲೆಟ್ ಪ್ರಕಾಶ್ ಮಗ ರಕ್ಷಕ್ ಕೂಡ ದೊಡ್ಮನೆಯಲ್ಲಿ ಇರಲಿದ್ದಾರೆ. ಅದ್ವಿತಿ ಶೆಟ್ಟಿ ಕೂಡ ಬಿಗ್ ಬಾಸ್​ಗೆ ತೆರಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಹೋಗುತ್ತಿಲ್ಲ. ಈ ಬಗ್ಗೆ ಅವರು ಮಾಧ್ಯಮಕ್ಕೆ  ಸ್ಪಷ್ಟನೆ ನೀಡಿದ್ದಾರೆ. ಡಾಕ್ಟರ್ ಬ್ರೋ ಕೂಡ ದೊಡ್ಮನೆಗೆ ತೆರಳುತ್ತಾರೆ ಎಂದು ಹೇಳಲಾಗುತ್ತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 10’ ಅಕ್ಟೋಬರ್ 08ರಿಂದ ಆರಂಭ ಆಗಲಿದೆ. ಓಪನಿಂಗ್ ದಿನ ಸಂಜೆ ಆರು ಗಂಟೆಗೆ ಶೋ ಪ್ರಾರಂಭ ಆಗಲಿದೆ. ಪ್ರತಿ ನಿತ್ಯ ರಾತ್ರಿ 9:30ಕ್ಕೆ ಈ ಎಪಿಸೋಡ್ ಪ್ರಸಾರ ಕಾಣಲಿದೆ.
[t4b-ticker]

You May Also Like

More From Author

+ There are no comments

Add yours