ಕೃಷಿ ಉತ್ಪನ್ನ ಮಾರುಕಟ್ಟೆ ಸರ್ವಾಂಗೀಣ ಅಭಿವೃದ್ದಿಗೆ ಸರ್ಕಾರದ ಸಂಕಲ್ಪ: ಟಿ.ರಘುಮೂರ್ತಿ

 

 

ಚಳ್ಳಕೆರೆ🙁challakere)   ಚಳ್ಳಕೆರೆ ಕೃಷಿಉತ್ಪನ್ನ ಮಾರುಕಟ್ಟೆ ನೆರೆಯ ಆಂಧ್ರಪ್ರದೇಶದಿAದಲೂ ಸಹ ವ್ಯವಹಾರ ಹೊಂದಿದ್ದು, ರಾಜ್ಯದಲ್ಲೇ ಉತ್ತಮ ಮಾರುಕಟ್ಟೆಯಾಗಿ ಪರಿವರ್ತನೆಯಾಗಿದೆ. ರಾಜ್ಯದಲ್ಲಿ ಅತಿಹೆಚ್ಚು ವ್ಯವಹಾರ ಹೊಂದಿರುವ ಉತ್ತಮ ಲಾಭದತ್ತಮುನ್ನಡೆದಿರುವ, ರಾಜ್ಯದ ಎರಡನೇ ಮಾರುಕಟ್ಟೆ ಎಂಬ ಹೆಸರು ಗಳಿಸಿರುವ ಈ ಮಾರುಕಟ್ಟೆ ಹೊರಹೊಮ್ಮಿದೆ. ಇನ್ನೂ ಹೆಚ್ಚಿನ ಅಭಿವೃದ್ದಿ ಹೊಂದಲು ಇಲ್ಲಿಗೆ ಬರುವ ಖರೀದಿದಾರರು, ಮಾರುಕಟ್ಟೆದಾರರು, ರೈತರಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಸುಮಾರು ೨.೫೦ ಕೋಟಿ ವೆಚ್ಚದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ರಾಜ್ಯ ಸಣ್ಣಕೈಗಾರಿಕೆಗಳ ಮಂಡಳಿ ಅಧ್ಯಕ್ಷ, ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಅವರು, ಸೋಮವಾರ ಮಾರುಕಟ್ಟೆ ಆವರಣದಲ್ಲಿ ಕೃಷಿ ಮಾರಾಟ ಇಲಾಖೆ, ಕೃಷಿ ಉತ್ಪನ್ನ ಮಾರಾಟ ಸಮಿತಿ ೨೦೨೨-೨೩ನೇ ಸಾಲಿನ ಕ್ರಿಯಾಯೋಜನೆಯಡಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಸುಮಾರು ೨.೫೦ ಕೋಟಿ ವೆಚ್ಚದ ವಾಣಿಜ್ಯಮಳಿಗೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕಳೆದ ಕೆಲವು ದಿನಗಳ ಹಿಂದೆ ಹುಣಸೆಹಣ್ಣು ಮಾರಾಟದ ವಿಚಾರದಲ್ಲಿ ರೈತರು ಮತ್ತು ವರ್ತಕರ ನಡುವೆ ಅಸಮದಾನ ಹೆಚ್ಚಾಗಿ ಮಾರುಕಟ್ಟೆ ವ್ಯವಹಾರಕ್ಕೆ ಅಡಿಯಾಗಿತ್ತು. ಈ ನಿಟ್ಟಿನಲ್ಲಿ ಸಂಬAಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಯಾವುದೇ ಕಾರಣಕ್ಕೂರೈತರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದ್ದು, ಈಗ ಎಲ್ಲವೂ ಮಾಮೂಲಿಯಂತೆ ನಡೆಯುತ್ತಿದೆ ಎಂದರು.

ಇದನ್ನೂ ಓದಿ: ಮಕ್ಕಳ ಎದುರಿನಲ್ಲೇ ನೇಣುಹಾಕಿಕೊಂಡು ಹೆಣವಾದ ಹೆತ್ತ ಅಪ್ಪ

ಆಡಳಿತಾಧಿಕಾರಿ ಶ್ಯಾಮ್, ಕಾರ್ಯದರ್ಶಿ ಸುರೇಶ್, ದಲ್ಲಾಲರ ಸಂಘದ ಅಧ್ಯಕ್ಷ ಕೆ.ಎಂ.ಅರವಿಂದ್, ಉಪಾಧ್ಯಕ್ಷ ಡಿ.ಎಂ.ತಿಪ್ಪೇಸ್ವಾಮಿ, ಕಾರ್ಯದರ್ಶಿ ವೆಂಕಟನಾಗರಾಜು, ಮಾಜಿ ಕಾರ್ಯದರ್ಶಿ ಸುರೇಶ್, ರೆಡ್ಡಿಹಳ್ಳಿ ಶಿವಣ್ಣ, ಸತೀಶ್, ಈಶ್ವರಪ್ಪ, ಪ್ರಕಾಶ್, ವೃಷಬೇಂದ್ರಪ್ಪ, ಮಾರುಕಟ್ಟೆ ಅಧಿಕಾರಿಗಳು ಗೌಸ್‌ಪೀರ್, ಭಾಷ, ಗಂಗಪ್ಪ, ನಗರಸಭಾ ಸದಸ್ಯೆ ಎಂ.ಸಾವಿತ್ರಮ್ಮ, ತಾಲ್ಲೂಕು ಮಾಜಿಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಪಾತಲಿಂಗಪ್ಪ, ಟಿಎಟಿ ಪ್ರಭುದೇವ್, ಸಿ.ಟಿ.ಶ್ರೀನಿವಾಸ್, ಕೋದಂಡರಾಮ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours