25.ಕೋಟಿ ಅನುದಾನದಲ್ಲಿ 85 ಲಕ್ಷ.ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ:ಬಿ.ಜಿ.ಗೋವಿಂದಪ್ಪ

 

ಹೊಸದುರ್ಗ: (Hosadurga)  ತಾಲ್ಲೂಕಿನ ಬಾಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ 25.ಕೋಟಿ ರೂಪಾಯಿಗಳ ಅನುದಾನದಲ್ಲಿ 85 ಲಕ್ಷ.ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ, ಕರ್ನಾಟಕ ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ನಿಗಮದ ಅಧ್ಯಕ್ಷ ಬಿ.ಜಿ.ಗೋವಿಂದಪ್ಪ ಭೂಮಿ ಪೂಜೆ ನೆರವೇರಿಸಿದರು.

ಬಾಗೂರಿನ ಶ್ರೀಮೈಲಾರಲಿಂಗೇಶ್ವರ  ದೇವಾಲಯದ ಪ್ರಾರ್ಥನಾ ಮಂದಿರಕ್ಕೆ 15.ಲಕ್ಷರೂ, ಶ್ರೀ ಗುರುರೇವಣ ಸಿದ್ದೇಶ್ವರ ದೇವಸ್ಥಾನದ ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ 25.ಲಕ್ಷ ರೂ, ಶ್ರೀರಂಗಪುರ ಗ್ರಾಮದ ಭೂತಪ್ಪನ ದೇವಾಲಯದ ಪ್ರಾರ್ಥನಾ ಮಂದಿರಕ್ಕೆ 6.ಲಕ್ಷ  ರೂ, ಬಾಗೂರಿನ ಪೋಲೀಸ ಸ್ಟೇಷನ್ ಮುಂಭಾಗದ ಸಿಸಿ ರಸ್ತೆಯ ನಿರ್ಮಾಣಕ್ಕೆ 15.ಲಕ್ಷ ರೂ, ಐಲಾಪುರದ ಶಾಲೆಯ ಮುಂಭಾಗದ ಚರಂಡಿಯ ನಿರ್ಮಾಣಕ್ಕೆ 15.ಲಕ್ಷ ರೂ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಬಾಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು , ಉಪಾಧ್ಯಕ್ಷರು, ಸದಸ್ಯರು ಹಾಗೂ ಸುತ್ತಮುತ್ತಲ ಗ್ರಾಮಗಳ ಮುಖಂಡರು ಹಾಜರಿದ್ದರು.
[t4b-ticker]

You May Also Like

More From Author

+ There are no comments

Add yours