ಮಕ್ಕಳ ಎದುರಿನಲ್ಲೇ ನೇಣುಹಾಕಿಕೊಂಡು ಹೆಣವಾದ ಹೆತ್ತ ಅಪ್ಪ

 

chitradurga desk
ಚಳ್ಳಕೆರೆ🙁challakere) ಮಗಳ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಚಿಂತೆಗೀಡಾದ ವ್ಯಕ್ತಿಯೊಬ್ಬ ಮನೆಯಲ್ಲಿ ಮಕ್ಕಳ ಎದುರಲ್ಲೇ ನೇಣುಹಾಕಿಕೊಂಡು ಮೃತಪಟ್ಟ ಘಟನೆ ಚಳ್ಳಕೆರೆ ತಾಲೂಕಿನ  ದೇವರಮರಿಕುಂಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಈರಣ್ಣ(೪೨) ಮೃತಪಟ್ಟ ವ್ಯಕ್ತಿಯಾಗಿದ್ದು, ಮಗಳು ಅಂಕಿತ, ಮಾನಸ, ಮಗ ಮಂಜುನಾಥ, ಪತ್ನಿ ಗೀತಮ್ಮರೊಂದಿಗೆ ಜೀವನ ಸಾಗಿಸುತ್ತಿದ್ದು, ಅಂಕಿತ ಆರೋಗ್ಯ ಸರಿಯಿಲ್ಲದ ಕಾರಣ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಗುಣಮುಖ ಆಗಿರಲಿಲ್ಲ.

ಇದನ್ನೂ ಓದಿ: ಲೋಕಸಭೆಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ‌ ಪಟ್ಟಿ ರೆಡಿ, ಚಿತ್ರದುರ್ಗಕ್ಕೆ ಯಾರು ಅಭ್ಯರ್ಥಿ?

ಈ ಹಿನ್ನೆಲೆಯಲ್ಲಿ ತೀರ್ವವಾಗಿ ಮನನೊಂದಿದ್ದ ಈರಣ್ಣ, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯ ಹಾಲ್‌ನಲ್ಲಿ ನೇಣುಹಾಕಿಕೊಂಡು ಮೃತಪಟ್ಟಿರುತ್ತಾನೆ. ತಂದೆ ನೇಣು ಹಾಕಿಕೊಂಡ ಸಂದರ್ಭದಲ್ಲಿ ಮಕ್ಕಳು ಕಿರುಚಿಗೊಂಡಿದ್ದು, ನೆರೆಹೊರೆಯವರು ದಾವಿಸಿ ಬಂದು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮೃತಪಟ್ಟಿದ್ದ ಎನ್ನಲಾಗಿದೆ. ಪಿಎಸ್‌ಐ ಧರಪ್ಪಬಾಳಪ್ಪದೊಡ್ಡಮನಿ ಪ್ರಕರಣ ದಾಖಲಿಸಿದ್ಧಾರೆ.

ಇದನ್ನೂ ಓದಿ: ಮಕ್ಕಳ ಪಾಲನಾ ಸಂಸ್ಥೆಗಳನ್ನು ನೊಂದಾಯಿಸಿಕೊಳ್ಳಲು ಸೂಚನೆ

[t4b-ticker]

You May Also Like

More From Author

+ There are no comments

Add yours