ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ, ಕೈ ಹಿಡಿದ ಸಿ.ಟಿ ರವಿ ಅಪ್ತ

 

ಬೆಂಗಳೂರು, ಫೆ.19:  ರಾಜ್ಯವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿರುವಂತೆಯೇ ಪಕ್ಷಾಂತರ ಪರ್ವ ಆರಂಭವಾಗಿದ್ದು, ಬಿಜೆಪಿಯ ಮಾಜಿ ಶಾಸಕರುಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಸೇರ್ಪಡೆಯಾಗುತ್ತಿದ್ದಾರೆ.
ತುಮಕೂರಿನ ಬಿಜೆಪಿಯ ಮಾಜಿ ಶಾಸಕ ಕಿರಣ್‌ಕುಮಾರ್ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಚಿಕ್ಕಮಗಳೂರಿನ ಬಿಜೆಪಿ ಮುಖಂಡರುಗಳು ಇಂದು ಕಾಂಗ್ರೆಸ್ ಸೇರ್ಪಡೆಯಾದರು. ಹಾಗೆಯೇ ಬಿಜೆಪಿಯ ಮಾಜಿ ಶಾಸಕರುಗಳಾದ ವೀರಭದ್ರಪ್ಪ ಹಾಲರವಿ, ಎಸ್.ಎಸ್. ಗೋಟ್ನೇಕರ್ ಹಾಗೂ ಬಂಗಾರಪೇಟೆ ಕ್ಷೇತ್ರದ ಹರೀಶ್‌ಗೌಡ ಇಂದು ಜೆಡಿಎಸ್‌ಗೆ ಸೇರ್ಪಡೆಯಾದರು.
ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರಿನ ಬಿಜೆಪಿಯ ಪ್ರಭಾವಿ ಮುಖಂಡ ಹೆಚ್.ಡಿ. ತಮ್ಮಯ್ಯ ಮತ್ತು ಬೆಂಬಲಿಗರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಬಿ.ಎಲ್ ಶಂಕರ್ ಮಾತನಾಡಿ, ಬಿಜೆಪಿಯ ಸಿ.ಟಿ. ರವಿ ನಿರಂತರವಾಗಿ ಗೆಲ್ಲಲು ತಮ್ಮಯ್ಯ ಕಾರಣರಾಗಿದ್ದರು. ಹಣ, ಯೌವ್ವನ, ಅಧಿಕಾರ ಸೇರಿದಾಗ ದುರಂಹಕಾರ ಬರುತ್ತದೆ. ಅದು ಚಿಕ್ಕಮಗಳೂರಿನ ಶಾಸಕರದ ಸಿ.ಟಿ ರವಿಯವರನ್ನೂ ಕಾಣುತ್ತಿದೆ. ಚಿಕ್ಕಮಗಳೂರು ಕ್ಷೇತ್ರ ಬೇಧಿಸಲು ಆಗದ ಕೋಟೆ ಏನೂ ಅಲ್ಲ. ನಾವು ಪದೇ ಪದೇ ಅಭ್ಯರ್ಥಿ ಮಾಡಿದ ತಪ್ಪಿನಿಂದ ಸೋಲುತ್ತ ಇದ್ದೆವು. ಈ ಬಾರಿ ಹಾಗೆ ಆಗಲ್ಲ ಕರ್ನಾಟಕದ ರಾಜಕೀಯ ಬದಲಾವಣೆ ದತ್ತಪೀಠದ ಬಾಬಾಬುಡನ್‌ಗಿರಿಯಿಂದಲೇ ಆರಂಭವಾಗಲಿದೆ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಯಲ್ಲಿ ತಮ್ಮಯ್ಯ ಕಾಂಗ್ರೆಸ್ ಅಭ್ಯರ್ಥಿ ಎಂಬ ಸುಳಿವು ನೀಡಿದರು.
ಜೆಡಿಎಸ್ ಸೇರ್ಪಡೆ
ಬಿಜೆಪಿಯ ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ, ಎಸ್.ಎಸ್. ಗೋಟ್ನೇಕರ್ ಮತ್ತು ಬಂಗಾರಪೇಟೆಯ ಹರೀಶ್‌ಗೌಡ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲ ಜೆಡಿಎಸ್ ಸೇರಿದ್ದು, ಇವರುಗಳಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

[t4b-ticker]

You May Also Like

More From Author

+ There are no comments

Add yours