ಕಬೀರನಾಂದಾಶ್ರಮದಲ್ಲಿ ಶಿವರಾತ್ರಿ ಮಹೋತ್ಸವ ಯಶಸ್ವಿ ಅಂತ್ಯ

 

ಚಿತ್ರದುರ್ಗ ಫೆ. ೧೯: ನಗರದ ಕಬೀರನಂದಾಶ್ರಮದವತಿಯಿಂದ ನಡೆಯುತ್ತಿರುವ ಶಿವನಾಮ ಸಪ್ತಾಹದ ಶಿವರಾತ್ರಿ ಮಹೋತ್ಸವವದ ಕೂನೆಯ ದಿನವಾದ ಇಂದು ಶ್ರೀ ಮಠದ ಆವರಣದಲ್ಲಿ ಶಿವಲಿಂಗಾನಂದ ಶ್ರೀಗಳು ಕೌದಿ ಉಡುಗೆಯನ್ನು ತೊಟ್ಟು ಭೀಕ್ಷೆಯನ್ನು ಬೇಡುವುದರ ಮೂಲಕ ಮಹೋತ್ಸವಕ್ಕೆ ಮುಕ್ತಾಯ ಹಾಡಿದರು.
ಕಳೆದ ೧೪ ರಿಂದ ಕಬೀರಾನಂದಾಶ್ರಮದಲ್ಲಿ ನಡೆಯುತ್ತಿದ್ದ ಶಿವನಾಮ ಸಪ್ತಾಹ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಕಾರ್ಯಕ್ರಮ ನಡೆಯುತ್ತಿದ್ದು, ವಿವಿಧ ಮಠಾಧೀಶರು, ವಿದ್ವಾಂಸರು, ರಾಜಕೀಯ ವ್ಯಕ್ತಿಗಳು ಭಾಗವಹಿಸಿ ಉಪನ್ಯಾಸವನ್ನು ನೀಡಿದರು. ಇದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಮಕ್ಕಳ ಕಾರ್ಯಕ್ರಮವನ್ನು ನೀಡಲಾಯಿತು.
ಇಂದು ನಡೆದ ಕೌದಿ ಪೂಜೆಯಲ್ಲಿ ಚಿಂದಿಯಿAದ ನಿರ್ಮಾಣ ಮಾಡಿದ ಬಟ್ಟೆಯನ್ನು ಧರಿಸಿ ಕೈಯಲ್ಲಿ ಕಮಂಡಲ, ಮತ್ತು ಮಣ್ಣಿನ ತಟ್ಟೆಯನ್ನು ಹಿಡಿದು, ಶ್ರೀಮಠದ ಆವರಣದಲ್ಲಿ ಮೂರು ಸುತ್ತನ್ನು ಹಾಕುವುದರ ಮೂಲಕ ಭಕ್ತರಿಗೆ ದರ್ಶನಾರ್ಶಿವಾದವನ್ನು ನೀಡಿದರು. ಈ ಸಮಯದಲ್ಲಿ ಭಕ್ತಾಧಿಗಳು ತಮ್ಮ ಕೈಲಾದಷ್ಟು ಧನ ಸಹಾಯವನ್ನು ಮಾಡುವುದರ ಮೂಲಕ ಶ್ರೀಗಳ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಸನ್ಯಾಸಿಯಾದವನು ಯಾವಾಗಲೂ ಭೋಗದ ಜೀವನವÀನ್ನು ಮಾಡದೆ ಸನ್ಯಾಸಿ ವಿಧಿಯಂತೆ ಚಿಂದಿ ಬಟ್ಟೆಯನ್ನು ತೊಟ್ಟು ಕೈಯಲ್ಲಿ ಕಮಂಡಲವನ್ನು ಹಿಡಿದು ಭೀಕ್ಷೆಯನ್ನು ಬೇಡುವುದರ ಮೂಲಕ ತನ್ನ ಜೀವನವನ್ನು ನಡೆಸಬೇಕೆಂದು ಹೇಳುವ ಕಾರ್ಯ ಇದಾಗಿದೆ. ವೈಭೋಗ ಎಲ್ಲವು ಅನಿತ್ಯ ಎಂದು ಭಾವಿಸಿ ಕೌದಿಯನ್ನು ಧರಿಸಿ ಜೀವನವನ್ನು ಮಾಡಬೇಕಿದೆ ಕೌದಿ ಎಂದರೆ ಎಲ್ಲಾ ಚಿಂದಿ ಬಟ್ಟೆಯಿಂದ ತಯಾರು ಮಾಡಿದ ವಸ್ತçವಾಗಿದೆ. ಇದನ್ನು ಧರಿಸಿದ ಸನ್ಯಾಸಿಗೆ ಯಾವುದೇ ರೀತಿಯ ಜಾತಿ ಇಲ್ಲ, ಆತ ಅಜಾತನಾಗಿರುತ್ತಾನೆ. ಇದೇ ರೀತಿಯಾಗಿ ಹುಬ್ಬಳಿಯಲ್ಲಿನ ಸಿದ್ಧಾರೂಢ ಮಠದಲ್ಲಿಯೂ ಸಹಾ ಕೌದಿ ಪೂಜೆಯನ್ನು ಆಚರಿಸುತ್ತದೆ. ಇದನ್ನು ಧರಿಸುವುದರಿಂದ ನಮ್ಮಲ್ಲಿ ಜಾತಿ ಪಂಥ ಇಲ್ಲವೆನ್ನುವುದನ್ನು ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ೯೩ನೇ ಮಹಾಶಿವರಾತ್ರಿ ಮಹೋತ್ಸವದ ಅಧ್ಯಕ್ಷರಾದ ಅನಿತ್ ಕುಮಾರ್, ಕಾರ್ಯದರ್ಶಿ ಪ್ರಶಾಂತ್, ನಾಗರಾಜ್ ಸಗಂ, ಸತೀಶ್, ತಿಪ್ಪೇಸ್ವಾಮಿ, ಶಾಸ್ತಿç, ನಿರಂಜನ ಮೂರ್ತಿ, ಯೋಗಿಶ್, ಗಾಯತ್ರಿ ಶಿವರಾಂ, ಓಂಕಾರ್, ರುದ್ರೇಶ್, ಮಂಜುನಾಥ್ ಗುಪ್ತ, ಪ್ರಭಂಜನ್, ಎಸ್.ಎಂ.ಕೃಷ್ಣಾ, ನಂದಿ ನಾಗರಾಜ್, ಮಲ್ಲಿಕಾರ್ಜನ್, ಸೇರಿದಂತೆ ಇತರರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours