ಮಾನವೀಯ ಮೌಲ್ಯಗಳನ್ನು ನೀಡುವಂತ ಧರ್ಮಕ್ಕೆ ಹೆಚ್ಚಿನ ಒತ್ತು:ಶ್ರೀ ಮಾದರ ಚನ್ನಯ್ಯ ಶ್ರೀ

 

ಚಿತ್ರದುರ್ಗ ಫೆ. ೧೯
ಮಾನವೀಯ ಮೌಲ್ಯಗಳನ್ನು ನೀಡುವಂತ ಧರ್ಮಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕಿದೆ, ಕಸುಬಗಳನ್ನಾಧರಿಸಿದ ಜಾತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬಾರದು ಎಂದು ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.

ಚಿತ್ರದುರ್ಗ ನಗರದ ಶ್ರೀ ಕಬೀರಾನಂದಾಶ್ರಮದವತಿಯಿAದ ನಡೆಯುವ ಶಿವನಾಮ ಸಪ್ತಾಹದ ಅಂಗವಾಗಿ ೯೩ನೇ ಮಹಾ ಶಿವರಾತ್ರಿ ಮಹೋತ್ಸವವೂ ೨೦೨೩ರ ಕೊನೆಯ ದಿನದ ಸಾನೀಧ್ಯವಹಿಸಿ ಮಾತನಾಡಿದ ಶ್ರೀಗಳು, ಇಂದಿನ ದಿನಮಾನದಲ್ಲಿ ಮಾನವೀಯ ಮೌಲ್ಯಗಳನ್ನು ಧರ್ಮ ಹೆಚ್ಚಾಗಿ ಹೊಂದಿದೆ, ಇದನ್ನು ಹೆಚ್ಚಾಗಿ ಅನುಸರಿಸಬೇಕಿದೆ ಆದರೆ ಇದನ್ನು ಬಿಟ್ಟು ಜನತೆ ಕಸುಬುಗಳನ್ನಾಧಿರಿಸಿ ಮಾಡಿದ ಜಾತಿಗಳನ್ನು ಹೆಚ್ಚಾಗಿ ನಂಬುತ್ತಿದ್ದಾರೆ. ಇದೊಂದು ದುರಂತ ಎಂದ ಶ್ರೀಗಳು, ಕಬೀರಾನಂದಾಶ್ರಮದಲ್ಲಿ ನಡೆಯುವ ಶಿವರಾತ್ರಿ ಮಹೋತ್ಸವ ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿAದ ನಡೆಯುತ್ತಿದೆ. ಮದ್ಯ ಕರ್ನಾಟಕದ ನಾಡಹಬ್ಬವಾಗಿ ಶಿವರಾತ್ರಿ ಮಹೋತ್ಸವವಾಗಿದೆ. ಶಿವರಾತ್ರಿಯಲ್ಲಿ ಉಪವಾಸ, ಜಾಗರಣೆಯನ್ನು ಮಾಡುವುದು ಜ್ಞಾನಾರ್ಜನೆಗಾಗಿ, ಇದು ಜ್ಞಾನವನ್ನು ಪಡೆಯುವ ದಿನವಾಗಿದೆ ಎಂದು ತಿಳಿಸಿದರು.
ಶಿವರಾತ್ರಿ ಹಿಂದು ಧರ್ಮದಲ್ಲಿ ಎರಡನೇ ಹಬ್ಬವಾಗಿದೆ. ಆಹಾರ ಮತ್ತು ಜೀವನ ಶೈಲಿಯನ್ನು ವೈಜ್ಞಾನಿಕವಾಗಿ ಹೋಗುತ್ತಿದೆ. ಇದರಲ್ಲಿ ವಿಜ್ಞಾನವೂ ಅಹಾ ಅಡಗಿದೆ. ವೈದ್ಯರು ಸಹಾ ವಾರಕ್ಕೆ ಒಮ್ಮೆ ಉಪವಾಸವನ್ನು ಮಾಡುವಂತೆ ಸಲಹೆಯನ್ನು ನೀಡುತ್ತಾರೆ. ಹಿಂದು ಧರ್ಮದಲ್ಲಿ ನಡೆಯುವ ಒಂದೊAದು ಹಬ್ಬಗಳು ಒಂದೊAದು ವೈಶಿಷ್ಟತೆಯನ್ನು ಹೊಂದಿದೆ ನಮ್ಮ ಹಿರಿಯರು ಇವುಗಳ ಆಚರಣೆಯ ಮೂಲಕ ನಮ್ಮ ದೇಹವನ್ನು ನಿಯಂತ್ರಣ ಮಾಡುವ ರೀತಿಯಲ್ಲಿ ಕಲಿಸಿದ್ದಾರೆ. ನಮ್ಮ ಸಹೋದತೆ ಸಹಬಾಳ್ವೆಯನ್ನು ಮೈಗೂಡಿಸಿಕೊಂಡಿದ್ದಾರೆ. ಕೆಲವೂಂದು ಮಠಗಳು ಜಾತಿಯಡಿಯಲ್ಲಿ ಇವೆ. ಜಾತಿಯನ್ನು ಸಿಮೋಲ್ಲಘನ ಮಾಡಲು ಸಾಧ್ಯವಿಲ್ಲ. ಆದರೆ ಕಬೀರಾನಂದಾಶ್ರಮ ಜಾತ್ಯಾತೀತವಾದ ಮಠವಾಗಿದೆ ಇಲ್ಲಿ ಒಂದು ಜಾತಿಯವರೆಲ್ಲಾ ಎಲ್ಲಾ ಜನಾಂಗ, ಧರ್ಮ, ಜಾತಿಯವರು ಸಹಾ ಬರುತ್ತಾರೆ ಅವರೆಲ್ಲರನ್ನು ಶಿವಲಿಂಗಾನAದ ಶ್ರೀಗಳು ಆತ್ಮೀಯವಾಗಿ ಮಾತನಾಡಿಸಿ ಅವರ ಸಮಸ್ಯೆಗಳಿಗೆ ಸ್ಫಂದಿಸುತ್ತಿದ್ದಾರೆ ಎಂದು ಮಾದಾರ ಚನ್ನಯ್ಯ ಶ್ರೀಗಳು ಹೇಳಿದರು.
ಸಮಾರಂಭದ ಸಾನಿದ್ಯವನ್ನು ವಹಿಸಿದ್ದ ಶ್ರೀ ಶಿವಲಿಂಗಾನAದ ಶ್ರೀಗಳು ಮಾತನಾಡಿ, ಶಿವನ ಸ್ಮರಣೆಯನ್ನು ಮಾಡುವುದರ ಮೂಲಕ ಮಾನವನಿಗೆ ಕಾಲದ ಭಯ ಇರುವುದಿಲ್ಲ, ಜೀವನದಲ್ಲಿ ಸುಖ ದುಃಖ ಬರುತ್ತದೆ ಹೋಗುತ್ತದೆ, ಬಂದಿದ್ದು ಇಲ್ಲಿಯೇ ಇರಲು ಸಾಧ್ಯವಿಲ್ಲ, ಭಗವಂತನ ಆಣತಿಯಂತೆ ದೇಹ ನಡೆಯುತ್ತದೆ, ದೇಹದಲ್ಲೂ ಭಗವಂತನಿದ್ದಾನೆ, ಕತ್ತಲೆಯ ವೇಗ ಬೆಳಕಿಂತ ಹೆಚ್ಚಾಗಿದೆ. ಇದಕ್ಕಿಂತ ಮನಸ್ಸಿನ ವೇಗ ಹೆಚ್ಚಾಗಿದೆ. ಸಿವರಾಥ್ರಿ ದಿನದಂದು ನಿದ್ದೆಯನ್ನು ಮಾಡದೇ ಭಗವಂತನ ನಾಮಸ್ಮರಣೆಯನ್ನು ಮಾಡಬೇಕಿದೆ. ಇದರಿಂದ ಮಾತ್ರ ಫಲ ದೂರೆಯಲು ಸಾಧ್ಯವಿದೆ. ಸಾಕಷ್ಟು ವರ್ಷಗಳ ಮೇಲೆ ಸಿಕ್ಕಿರುವ ಬದುಕನ್ನು ಸುಮ್ಮನೆ ವೈರ್ಥ ಮಾಡದೇ ಸಾರ್ಥಕವಾಗುವಂತೆ ಬದುಕಿನ್ನು ನಡೆಸಬೇಕಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಸಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ದೇಶ ಇಂದು ಧಾರ್ಮಿಕವಾಗಿ ಜಾಗೃತಿಯನ್ನು ಹೊಂದಿದೆ. ಪರಕೀಯರ ಧಾಳಿಯಿಂದ ದೇವಾಲಯಗಳು ನಾಶವಾಗಿ ಅಲ್ಲಿ ಮಸೀದಿಯನ್ನು ನಿರ್ಮಾಣ ಮಾಡಲಾಗಿದೆ. ನ್ಯಾಯಾಲಯದ ತೀರ್ಪಿನಂತೆ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ ಇದು ದೇಶದ ಎಲ್ಲಾ ಜನತೆ ಆಶಯವಾಗಿದೆ. ಕಾಶಿಯಲ್ಲಿಯೂ ಸಹಾ ಉತ್ತಮವಾದ ವಾತಾವರಣವನ್ನು ನಿರ್ಮಾಣ ಮಾಡಲಾಗಿದೆ. ಧಾರ್ಮಿಕವಾಗಿ ಜನತೆಯೂ ಸಹಾ ಎಚ್ಚತು ಕೊಂಡಿದ್ದಾರೆ. ಈ ಹಿಂದೆ ನಮ್ಮ ದೇಶದ ಪ್ರಧಾನಿ ವಿದೇಶಕ್ಕೆ ಹೋದರೆ ಏನನ್ನಾದರೂ ಕೇಳುತಾರೆ ಎಂಬ ಅಭಿಪ್ರಾಯವಿತ್ತು ಆದರೆ ಇದು ದೇಶದ ಪ್ರಧಾನಿ ಹೋದರೆ ದೇಶವೇ ಎದ್ದು ನಿಲ್ಲುತ್ತದೆ ಇಂತಹ ಗೌರವವನ್ನು ಭಾರತ ದೇಶ ಪ್ರದಾನ ಮಂತ್ರಿ ಮೋದಿಯಿಂದ ಸಂಪಾದಿಸಿದೆ. ಮಠಾಧೀಶರು ತಮ್ಮ ಬೋಧನೆಯಲ್ಲಿ ಶಾಂತಿಯನ್ನು ಪಠಿಸುತ್ತಿದ್ದಾರೆ, ಇದರಿಂದ ಭಾರತ ದೇಶ ವಿಶ್ವ ಗುರುವಾಗಲಿದೆ ಎಂದರು.
ರಾಜ್ಯ ದೇವಸ್ಥಾನಗಳ ಸಂವರ್ಧನ ಸಮಿತಿಯ ಮನೋಹರ್ ಮಠದ್ ಮಾತನಾಡಿ, ದೇಶದಲ್ಲಿನ ೭೨೦೦೦ ಮಠಗಳು ಸಮಾಜ ಮುಖಿಯಾಗಿ ಕೆಲಸವನ್ನು ಮಾಡುತ್ತಿವೆ. ಇದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಶ್ರೀಗಳು ವಿವಿಧ ರೀತಿಯ ದಾಸೋಹಗಳನ್ನು ಮಾಡುವುದರ ಮೂಲಕ ತ್ರಿವಿಧ ದಾಸೋಹಿಗಳಾಗಿದ್ದಾರೆ. ಮಠಗಳು ಸಂಸ್ಕಾರವನ್ನು ನೀಡುವ ಕೇಂದ್ರಗಳಾಗಿವೆ. ದೇಶದಲ್ಲಿನ ಮಠದ ಸಂತರು ತಮ್ಮ ಬೋಗವನ್ನು ಮೆಟ್ಟಿ ನಿಂತು ಸಮಾಜದ ಕೆಲಸವನ್ನು ಮಾಡುತ್ತಿದ್ದಾರೆ. ಅನ್ನ ಇಲ್ಲದವರು ಉಪವಾಸವನ್ನು ಮಾಡುತ್ತಿದ್ದರೆ ಮತ್ತೇ ಕೆಲವರು ತಿನ್ನುವ ಅನ್ನ ಹೆಚ್ಚಾಗಿ ಬಿಸಾಡುತ್ತಿದ್ದಾರೆ. ಅನ್ನವನ್ನು ಚಲುವ ಬದಲು ದಾನವನ್ನು ಮಾಡುವಂತೆ ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ಇಂದಿನ ದಿನಮಾನದಲ್ಲಿ ಮನೆಯ ಬಾಗಿಲಿಗೆ ಎಲ್ಲವೂ ಸಹಾ ಸಿಗುತ್ತದೆ ಆದರೆ ನೆಮ್ಮದಿ ಮತ್ತು ಶಾಂತಿ ದೊರೆಯುವುದಿಲ್ಲ, ಇದನ್ನು ಪಡೆಯಬೇಕಾದರೆ ಮಠಗಳು ನಡೆಸುವ ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗಿಯಾವುದರ ಮೂಲಕ ಪಡೆಯಬಹುದಾಗಿದೆ. ಕಬೀರಾನಂದಾಶ್ರಮ ಶಿಕ್ಷಣಕ್ಕೆ ಮಾನ್ಯತೆಯನ್ನು ನೀಡುವುದರ ಮೂಲಕ ಮಕ್ಕಳಿಗೆ ದಾರಿ ದೀಪವಾಗಿದ್ದಾರೆ. ಇದರೊಂದಿಗೆ ಗೂವುಗಳ ಸಂರಕ್ಷಣೆಯನ್ನು ಮಾಡುತ್ತಾ ಪ್ರಾಣಿಗಳ ರಕ್ಷಕರಾಗಿದ್ದಾರೆ. ಕಳೆದ ಎರಡು ಚುನಾವಣೆಯಲ್ಲಿ ನಾನು ಸೋತ್ತಾಗ ಶ್ರೀಗಳು ನನಗೆ ದೈರ್ಯವನ್ನು ತುಂಬಿದ್ದಾರೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಹೂಸಪೇಟೆಯ ಶ್ರೀ ಸದ್ಗುರು ಶಿವರಾಮ ಅವದೂತ ಆಶ್ರಮದ ಶ್ರೀ ಸದ್ಗುರು ಶಿವಪ್ರಕಾಶಾನಂದ ಶ್ರೀಗಳು, ಕೊಪ್ಪಳದ ಭಾಗ್ಯನಗರದ ಶ್ರೀ ಶಂಕರಾಚಾರ್ಯ ಮಠದ ಶ್ರೀ ಸದ್ಗುರು ಶಿವರಾಮ ಕೃಷ್ಣಾನಂದ ಭಾರತಿ ಶ್ರೀಗಳು, ಚಿತ್ರದುರ್ಗದ ಸಿಬಾರ ಶ್ರೀ ಕೇತೇಶ್ವರ ಮಠದ ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಶ್ರೀಗಳು ಹಾಗೂ ಹಾವೇರಿಯ ಶ್ರೀ ತಿಪ್ಪಯ್ಯಸ್ವಾಮಿ ಮಠದ ಶ್ರೀ ಜ್ಯೋತಿರ್ಲಿಂಗಾನAದ ಶ್ರೀಗಳು ಮತ್ತು ಜ್ಞಾನನಂದ ಶ್ರೀಗಳು ವಹಿಸಿದ್ದರು.
ವಾಣೀಜ್ಯೋದ್ಯಮಿ ರುದ್ರಮುನಿ, ನಗರಸಭೆ ಅದ್ಯಕ್ಷರಾದ ಶ್ರೀಮತಿ ತಿಪ್ಪಮ್ಮ, ಸದಸ್ಯರಾದ ವೆಂಕಟೇಶ್, ಕರವೇ ಅಧ್ಯಕ್ಷರಾದ ಟಿ.ರಮೇಶ್, ೯೩ನೇ ಮಹಾ ಶಿವರಾತ್ರಿ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಜಿ.ಎಸ್.ಅನಿತ್ ಕುಮಾರ್, ಉದ್ಯಮಿಗಳಾದ ಸಿದ್ದಾರ್ಥ ಗುಂಡಾರ್ಪಿ, ಭದ್ರಾವತಿಯ ಸಿದ್ದಾರೂಢಾಶ್ರಮದ ಉಪಾಧ್ಯಕ್ಷರಾದ ಬೆನಕಪ್ಪ, ಪಿವಿಎಸ್ ಆಸ್ಪತ್ರೆಯ ಡಾ.ಶ್ರೀಧರ ಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು
ಶ್ರೀಮತಿ ನಂದಿನಿ ಶಿವಪ್ರಕಾಶ್ ತಂಡದಿAದ ನೃತ್ಯ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತದ ನಂತರ ತುಮಕೂರಿನ ನಾಟಕ ಮನೆಯಿಂದ ಕೋಮಲ ಗಾಂಧಾರಿ ಪೌರಾಣಿಕ ನಾಟಕ ಪ್ರದರ್ಶನವಾಯಿತು.ಸುಬ್ರಾಯ ಭಟ್‌ರು ವೇದ ಘೋಷವನ್ನು ಮಾಡಿದರೆ ಸ್ಪೂರ್ತಿ ಪ್ರಾರ್ಥಿಸಿದರು ಪ್ರತಾಪ್ ಜೋಗಿ ಸ್ವಾಗತಿದರು ಮುರುಗೇಶ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು

[t4b-ticker]

You May Also Like

More From Author

+ There are no comments

Add yours