ಹೊಸದುರ್ಗದಿಂದ ಅಯೋಧ್ಯೆಗೆ ಸೈಕಲ್ ಪ್ರಯಾಣ| ಶುಭ ಕೋರಿದ ಸದ್ಗುರು ಡಿ.ಎಸ್. ಪ್ರದೀಪ್

 

ರಾಮಮಂದಿರ ಉದ್ಘಾಟನೆ ದಿನ ಸಂಭ್ರಮದ ಹಬ್ಬವಾಗಲಿ,
 : ಸದ್ಗುರು ಪ್ರದೀಪ್ 
ಹೊಸದುರ್ಗ : ದೇಶದಾದ್ಯಂತ ರಾಮ ಮಂದಿರ ಉದ್ಘಾಟನೆ  ರಾಷ್ಟ್ರೀಯ ಹಬ್ಬವಾಗಿ ಆಚರಣೆಯಾಗಲಿ,ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯುವಕರಲ್ಲಿ ರಾಷ್ಟ್ರಪ್ರೇಮದ ಜಾಗೃತಿಯನ್ನು ಮೂಡಿಸಿದ ಜೈ ಶ್ರೀ ರಾಮ್ ಘೋಷ ವಾಕ್ಯ ಇಂದು ರಾಷ್ಟ್ರಭಕ್ತ ಪೀಳಿಗೆಯ ಉಗಮಕ್ಕೆ ಕಾರಣವಾಗಿದೆ ಎಂದು ಸದ್ಗುರು ಸಂಸ್ಥೆಯ ಮುಖ್ಯಸ್ಥ ಉದ್ಯಮಿ ಡಿ.ಎಸ್.ಪ್ರದೀಪ್ ತಿಳಿಸಿದರು.
ನಗರದ ಗಣಪತಿ ದೇವಸ್ಥಾನದಲ್ಲಿ ಬುಧವಾರ ಅಯೋಧ್ಯಾ ಯಾತ್ರಾರ್ತಿಗಳ  ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅಯೋಧ್ಯಪತಿ ಶ್ರೀ ರಾಮನ  ಹಿಂದೂ ಶ್ರದ್ಧಾಭಕ್ತ ತರುಣರಾದ ದಯಾನಿಧಿ ಹಾಗೂ ಶರಣಪ್ಪನ  ಅಯೋಧ್ಯೆ ಬೈಸಿಕಲ್ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದವರು.
 ರಾಮ ರಾಜ್ಯ ಎಂದರೆ ನೆಮ್ಮದಿಯಿಂದ ಶಾಂತಿಯಿಂದ ಬದುಕುವುದು ರಾಮ ಎಂದರೆ ರಾಷ್ಟ್ರ, ಶ್ರೀರಾಮನ ರಾಷ್ಟ್ರಭಕ್ತ ತರುಣರಿಂದ ಭಾರತಕ್ಕೆ ಉತ್ತಮ ಭವಿಷ್ಯವಿದೆ. ಅಯೋಧ್ಯೆಯ ಪ್ರತಿಯೊಂದು ಮನೆಗಳು ಮಂದಿರಗಳಾಗಿ ಮಾರ್ಪಟ್ಟಿವೆ. 20 ನೇ ಶತಮಾನದ ನಮ್ಮ ಜೀವಿತಾವಧಿಯಲ್ಲಿ ಬರುವ 22 ನೇ ತಾರೀಖಿನಂದು  ಪ್ರಭು ಶ್ರೀ ರಾಮನ ಪುನರ್ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದ್ದು, ಭಾರತೀಯ ಹಿಂದೂ ಶ್ರದ್ಧೆಯ ಭಕ್ತರು ಆ ದಿನದಂದು ನಮ್ಮ ಮನೆಯ ಉತ್ತರ ದಿಕ್ಕಿಗೆ 5 ದೀಪಗಳನ್ನು ಶ್ರೀರಾಮನಿಗೆ  ಹಚ್ಚಿ ಬೆಳಗುವುದರ ಮೂಲಕ ನಮ್ಮ ಧಾರ್ಮಿಕ ನಂಬಿಕೆಯನ್ನು ಗಟ್ಟಿಯಾಗಿಸಿಕೊಳ್ಳೋಣ ಎಂದರು.
ಇದೇ ಸಂದರ್ಭದಲ್ಲಿ ಸದ್ಗುರು ಸಂಸ್ಥೆಯ ವತಿಯಿಂದ ಅಯೋಧ್ಯ ಬೈಸಿಕಲ್ ಯಾತ್ಯಾರ್ತಿಗಳ ಪ್ರಯಾಣಕ್ಕೆ ಬೇಕಾದ ವಿವಿಧ ಪರಿಕರಗಳನ್ನು ನೀಡಲಾಯಿತು.
 ಈ ವೇಳೆ ಸಮಾಜ ಸೇವಕ ತುಂಬಿನಕೆರೆ ಬಸವರಾಜ್, ಪ್ರಕಾಶ್, ಹಿಂದೂ ಕಾರ್ಯಕರ್ತರಾದ  ಸಿದ್ದೇಶ್, ಕಾಶಿ, ಆಕಾಶ್, ಅಕ್ಷಯ್, ಮನು, ಹಾಗೂ ಮುಂತಾದವರಿದ್ದರು.
[t4b-ticker]

You May Also Like

More From Author

+ There are no comments

Add yours