ನಿಗಮ‌ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಪರಿಗಣಿಸಬೇಡಿ| ಸಿಎಂಗೆ ಟಿ.ರಘುಮೂರ್ತಿ ಪತ್ರ

 

 

 

 

ಚಿತ್ರದುರ್ಗ:ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಪರಿಗಣಿಸದಂತೆ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ      ( T. Raghumurthy)  ಅವರು ಮುಖ್ಯಮಂತ್ರಿ  (Chief minister) ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಕಾಂಗ್ರೆಸ್ ಸರ್ಕಾರದಲ್ಲಿ ನಿಗಮ ಮಂಡಳಿ  (Corporation Board)ಪಡೆಯಲು, ಪೈಪೋಟಿ ನಡೆಯುತ್ತಿರುವ ನಡುವೆ ಚಿತ್ರದುರ್ಗ (chitradurga) ಜಿಲ್ಲೆಯ ಚಳ್ಳಕೆರೆ  (challakere)   ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವರು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಮಾಡುವ ಸಂದರ್ಭದಲ್ಲಿ ನನ್ನನ್ನು ಪರಿಗಣಿಸಬೇಡಿ ಎಂದು ಪತ್ರ ಬರೆದಿದ್ದು ಪತ್ರದಲ್ಲಿ

ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಮೂರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಅವಕಾಶ ಕಲ್ಪಿಸಿದ್ದು ಕ್ಷೇತ್ರದ ಮತದಾರರು ನಿರಂತರವಾಗಿ 2013, 2018,ಮತ್ತು 2023ರ ಚುನಾವಣೆಯಲ್ಲಿ ನನ್ನನ್ನು ಅಶೀರ್ವದಿಸಿರುತ್ತಾರೆ. ಇದಕ್ಕೆ ಸಂಬಂದಿಸಿದಂತೆ ತಮಗೂ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಎಲ್ಲಾ ಹಂತದ ವರಿಷ್ಠರಿಗೂ, ಮುಖಂಡರಿಗೂ ಕಾರ್ಯಕರ್ತರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಜೊತೆಗೆ ಪಕ್ಷಕ್ಕೆ ಎಂದಿಗೂ ಸಹ ಋಣಿಯಾಗಿರುತ್ತೇನೆ.

 

 

 

ಪ್ರಸ್ತುತ ನಿಗಮ ಮಂಡಳಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪ್ರಕ್ರಿಯೆಯಲ್ಲಿ ಒಂದು ವೇಳೆ ನನ್ನನ್ನು ಪರಿಗಣಿಸುವ ಸಂಭವ ಏನಾದರು ಇದ್ದಲ್ಲಿ ಅನ್ಯಾತಾ ಭಾವಿಸದೆ ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸದಂತೆ ತಮ್ಮಲ್ಲಿ ವಿನಂತಿಸುತ್ತೇನೆ.

ಇದನ್ನೂ ಓದಿ: ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಹೋದ 14 ವರ್ಷ ಬಾಲಕಿಗೆ ಹೆರಿಗೆ | ಗಂಡು ಮಗು ಜನನ

ಕಾಂಗ್ರೆಸ್ ಪಕ್ಷಕ್ಕೆ ನಾನು ಆರಂಭದಿಂದಲೂ ಇದುವರವಿಗೂ ಯಾವುದೇ ಸಂದರ್ಭದಲ್ಲಿ ಪಕ್ಷಕ್ಕಾಗಲಿ, ವರಿಷ್ಠರಿಗಾಗಲಿ ಹಾಗೂ ಮತದಾರರಿಗಾಗಲಿ ಮುಜಗರವಾಗದೆ ಇರುವ ರೀತಿಯಲ್ಲಿ ನೆಡದುಕೊಳ್ಳಲು ಪ್ರಯತ್ನಿಸಿರುತ್ತೇನೆ. ಎಂದು ಭಾವಿಸುತ್ತಾ ಇನ್ನೂ ಮುಂದೆಯು ಸಹ ಈ ಪರಂಪರೆಯನ್ನು ಮುಂದುವರೆಸುತ್ತೇನೆಂದು ತಿಳಿಸುತ್ತಾ, ನನ್ನ ಮತ ಕ್ಷೇತ್ರ ಚಳ್ಳಕೆರೆ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಸಹಕಾರವನ್ನು ನಿರೀಕ್ಷಿಸುತ್ತೇನೆ ಎಂದು ಸಿಎಂ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

 

ಸಿಎಂ ಅವರಿಗೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ಬರೆದಿರುವ ಪತ್ರರ ಪ್ರತಿಕ್ರಿಯೆ
[t4b-ticker]

You May Also Like

More From Author

+ There are no comments

Add yours