ಕುಂಚಿಟಿಗ ಮಠ ಮತ್ತು ವಿವಿಧ ಮಠಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ

 

Hosadurga: ತಾಲೂಕಿನ ಕುಂಚಿಟಿಗ ಮಠ, ಭಗೀರಥ ಮಠ, ಸಾಣೇಹಳ್ಳಿ ಮಠ ಮತ್ತು ಕನಕ ಶಾಖಾಮಠಕ್ಕೆ ಗುರುವಾರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ  (B.Y.Vijayendra)ಭೇಟಿ ನೀಡಿ ಮಠಾಧೀಶರಿಗೆ ಸನ್ಮಾನಿಸಿ ಗೌರವಿಸಿ ಆಶೀರ್ವಾದ ಪಡೆದರು.

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಿ.ವೈ.ವಿಜಯೇಂದ್ರ ಅವರು ತಮ್ಮ ಮೊದಲ ಜಿಲ್ಲಾ ಪ್ರವಾಸವನ್ನು ಕೋಟೆನಾಡಿನಿಂದ ಆರಂಭಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. ಸಾಮಾನ್ಯವಾಗಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತಮ್ಮ ಸ್ವಕ್ಷೇತ್ರಕ್ಕೆ ಹೋಗುವುದು ವಾಡಿಕೆ. ಆದರೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಯಂಗ್ ಸ್ಟಾರ್ ಬಿ.ವೈ.ವಿಜಯೇಂದ್ರ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದಿದ್ದಾರೆ.

ಚಿತ್ರದುರ್ಗದ ಮುರುಘಾ ಮಠ, ಮಡಿವಾಳ ಮಾಚಿದೇವ ಮಠ, ಭೋವಿಗುರುಪೀಠ, ಮಾದರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿ ಹೊಳಲ್ಕೆರೆ ಮಾರ್ಗವಾಗಿ ಹೊಸದುರ್ಗ ತಾಲೂಕಿನ ಬಿವಿ ನಗರದ ಭಗೀರಥಗುರು ಪೀಠಕ್ಕೆ ಭೇಟಿ ನೀಡಿ ಶ್ರೀ ಪುರುಷೋತ್ತಮನಂದಪುರಿ ಸ್ವಾಮೀಜಿ ಆಶೀರ್ವಾದ ಪಡೆದರು. ಅಲ್ಲಿಂದ ಸಾಣೇಹಳ್ಳಿ ಮಠಕ್ಕೆ ಭೇಟಿ ನೀಡಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ಪಡೆದರು. ನಂತರ ಕೆಲ್ಲೋಡು ಕನಕ ಮಠಕ್ಕೆ ಭೇಟಿ ನೀಡಿ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಆಶೀರ್ವಾದ ಪಡೆದರು. ನಂತರ ಕೊನೆಯದಾಗಿ ಕುಂಚಿಟಿಗ ಮಠಕ್ಕೆ ಭೇಟಿ ನೀಡಿ ಶ್ರೀ ಶಾಂತವೀರ ಸ್ವಾಮೀಜಿ ಆಶೀರ್ವಾದ ಪಡೆದರು. ಈ ವೇಳೆ ಕುಂಚಿಟಿಗ ಮಠದ ವತಿಯಿಂದ, ಹೊಸದುರ್ಗ ತಾಲೂಕು ಬಿಜೆಪಿ ಘಟಕದ ವತಿಯಿಂದ, ವೀರಶೈವ ಲಿಂಗಾಯತ ವೇದಿಕೆ ವತಿಯಿಂದ ಹಾಗೂ ವಿಜಯೇಂದ್ರ ಯುವ ಪಡೆ ವತಿಯಿಂದ ನೂತನ ರಾಜ್ಯ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿ ಅಭಿನಂದಿಸಲಾಯಿತು.

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಬಿ.ವೈ. ವಿಜಯೇಂದ್ರ ಮಾತನಾಡಿ, ರಾಜ್ಯದ ೨೮ ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಠಿಸಬೇಕು ಎನ್ನುವುದು ನಮ್ಮ ಗುರಿ. ಒಂದು ದಿನವೂ ಮನೆಯಲ್ಲಿರದೆ, ರಾಜ್ಯ ಪ್ರವಾಸ ಮಾಡುತ್ತೇನೆ. ಲೋಕಸಭೆ ಜೊತೆಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗೂ ಮಹತ್ವ ಕೊಟ್ಟು ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ’ ಎಂದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಕೆ.ಏಸ್.ನವೀನ್, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ಮುರುಳಿ ಮತ್ತು ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿದ್ದರು.

*ಕೋಟ್ ಹಾಕಿ.೧*

‘ಬಿಜೆಪಿ ಸರ್ಕಾರ ಇದ್ದಾಗ ಶೇ೪೦ ಭ್ರಷ್ಟಾಚಾರ ಎಂದು ಕಾಂಗ್ರೆಸ್ ದಿನವೂ ಆರೋಪ ಮಾಡುತ್ತಿತ್ತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಮೊದಲ ದಿನದಿಂದಲೇ ವರ್ಗಾವಣೆ ದಂಧೆ ಮಾಡುತ್ತಿದೆ. ಐಟಿ ದಾಳಿಯಲ್ಲಿ ಕೋಟ್ಯಾಂತರ ಹಣ ಸಿಕ್ಕಿದಾಗ ಕಾಂಗ್ರೆಸ್‌ನವರು ಸ್ವಾಗತ ಮಾಡಲಿಲ್ಲ, ಅವರಿಗೆ ನೋವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ೬ ತಿಂಗಳಾಗಿದೆ. ಒಂದು ಹೊಸ ಯೋಜನೆ ಜಾರಿಗೆ ಬಂದಿಲ್ಲ. ಅರೆಬರೆ ಬೆಂದಿರುವ ಗ್ಯಾರಂಟಿಗಳನ್ನು ನೀಡಿ ಜನರಿಗೆ ವಂಚಿಸುತ್ತಿದ್ದಾರೆ. ರಾಜ್ಯದಲ್ಲಿ ಹಗಲು ದರೋಡೆ ನಡೆಯುತ್ತಿದೆ.

ಬಿ.ವೈ.ವಿಜಯೇಂದ್ರ
ಅಧ್ಯಕ್ಷರು, ರಾಜ್ಯ ಬಿಜೆಪಿ, ಕರ್ನಾಟಕ

[t4b-ticker]

You May Also Like

More From Author

+ There are no comments

Add yours