ಮುರುಘಾ ಶರಣರು ಬಿಡುಗಡೆ ಮಾತನಾಡದೇ ಮೌನವಾಗಿ ದಾವಣಗೆರೆ ಪ್ರಯಾಣ

 

chitradurga:ಮಕ್ಕಳ ಮೇಲೆ ಆತ್ಯಾಚಾರ ಆರೋಪದಡಿ ಪೋಕ್ಸೋ ಪ್ರಕರಣದಲ್ಲಿ 14 ತಿಂಗಳ ಹಿಂದೆ ಅರೆಸ್ಟ್ ಆಗಿದ್ದ  ಮುರುಘಾ ಮಠದ ಪೀಠಾದಿಪತಿಗಳಾದ  ಡಾ.ಶಿವಮೂರ್ತಿ ಮುರುಘಾ ಶರಣರಿಗೆ  (Shivamurthy Muruga surrendered)ಇಂದು  ಜೈಲಿನಿಂದ ಬಿಡುಗಡೆ ಭಾಗ್ಯವಾಗಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಶಾಸಕ ಟಿ.ರಘುಮೂರ್ತಿ ಭರ್ಜರಿ ಪ್ರಚಾರ

ಶರಣರಿಗೆ   ಕಳೆದ ವಾರವೇ ಹೈಕೋರ್ಟ್‌ ಜಾಮೀನು ನೀಡಿತ್ತು. ಮತ್ತೊಂದು ಪ್ರಕರಣದಲ್ಲಿ ಚಿತ್ರದುರ್ಗದಲ್ಲಿ ಗುರುವಾರ ವಿಚಾರಣೆ ನಡೆಯುತ್ತಿದೆ. ಅಲ್ಲಿಯೂ ಜಾಮೀನು ದೊರೆಯುವ ನಿರೀಕ್ಷಿಸಲಾಗಿತ್ತು.  ಇದರ   ನಡುವೆ ಹೈಕೋರ್ಟ್ ನೀಡಿದ್ದ ಷರತ್ತು ಬದ್ದ ಜಾಮೀನಿನ ಆದೇಶ ಪ್ರತಿಗಳು ಚಿತ್ರದುರ್ಗ ಜೈಲಿನ ಅಧಿಕಾರಿಗಳಿಗೆ ತಲುಪಿರಲಿಲ್ಲ. ಗುರುವಾರ ಬೆಳಿಗ್ಗೆ ಮುರುಘರಾಜೇಂದ್ರ ಶರಣರ ಪರವಾದ ವಕೀಲರು ಹಸ್ತಾಂತರಿಸಿದ್ದರಿಂದ ಅವರನ್ನು ಬಿಡುಗಡೆ ಮಾಡಲಾಗಿದೆ.

1ನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಷರತ್ತುಬದ್ದ ಜಾಮೀನು ನೀಡಿದ್ದು, ಈ ಪ್ರಕಾರ ಮುರುಘಾ ಶರಣರು  ಚಿತ್ರದುರ್ಗ ಪ್ರವೇಶಿಸುವಂತಿಲ್ಲ. ಇಬ್ಬರು ಶ್ಯೂರಿಟಿ ಒದಗಿಸಬೇಕು. ಮತ್ತೆ ಅಪರಾಧ ಕೃತ್ಯವೆಸಗುವಂತಿಲ್ಲ. ಪಾಸ್ ಪೋರ್ಟ್ ಅನ್ನು ವಶಕ್ಕೆ ನೀಡುವುದೂ ಸೇರಿದಂತೆ ಹಲವಾರು ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ಇವುಗಳನ್ನೆಲ್ಲಾ ಪಾಲಿಸುವುದಾಗಿ ಮುರುಘಾ ಶರಣರ ಪರ ವಕೀಲರು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.

ಕಳೆದ ವರ್ಷದ ಆಗಸ್ಟ್‌ 22ರಂದು ಶರಣರು ಹಾಗೂ ಐದು ಮಂದಿ ವಿರುದ್ದ ಮಠದ ವಿದ್ಯಾರ್ಥಿನಿಯೊಬ್ಬರು ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಮೈಸೂರಿನ ನಜರ್‌ಬಾದ್‌ ಠಾಣೆಯಲ್ಲಿ ದಾಖಲಿಸಿದ್ದರು. ಇದನ್ನು ಚಿತ್ರದುರ್ಗಕ್ಕೆ ವರ್ಗಾಯಿಸಲಾಗಿತ್ತು. ಆನಂತರ ಶರಣರನ್ನು ಬಂಧಿಸಲಾಗಿತ್ತು.

ಧಾರವಾಡ ಜೈಲಿಗೆ ವರ್ಗಾಯಿಸಿ ಕೆಲ ದಿನ ಶಿವಮೊಗ್ಗ ಜೈಲಿನಲ್ಲಿ ಇರಿಸಲಾಗಿತ್ತು. ನಂತರ ಚಿತ್ರದುರ್ಗದಲ್ಲಿಯೇ ಇರಿಸಲಾಗಿತ್ತು. ಇದಾದ ಬಳಿಕ ಮಠಕ್ಕೆ ಆಡಳಿತಾಧಿಕಾರಿಯನ್ನೂ ನೇಮಿಸಿತ್ತು. ಈಗಾಗಲೇ ಇತರರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಶರಣರು ಮಾತ್ರ ಬಿಡುಗಡೆಯಾಗಿರಲಿಲ್ಲ. ನವೆಂಬರ್‌ 8ರಂದು ಹೈಕೋರ್ಟ್‌ ಷರತ್ತು ಬದ್ದ ಜಾಮೀನು ನೀಡಿದ ನಂತರ ಶರಣರ ಬಿಡುಗಡೆ ಕುರಿತು ಚರ್ಚೆಗಳು ನಡೆದಿದ್ದವು. ಈಗ ಮತ್ತೊಂದು ಪ್ರಕರಣದ ಜಾಮೀನು ದೊರೆಯುವ ಮುನ್ನವೇ ಬಿಡುಗಡೆ ಸುಲಭವಾಗಿದೆ.

ಬಿಡುಗಡೆಯಾದ ನಂತರ  ಮುರುಘಾ  ಶರಣರು  ಮಾಧ್ಯಮದವರೊಂದಿಗೆ ಮಾತನಾಡದೇ ಮೌನವಾಗಿ ಹೊರಬಂದು  ದಾವಣಗೆರೆಗೆ ತೆರಳಿದರು. ಅಲ್ಲಿ ಭಕ್ತರ ಮನೆಯಲ್ಲಿರಲಿದ್ದು  ಅಲ್ಲಿಂದಲೇ ನ್ಯಾಯಾಲಯದ ವಿಚಾರಣೆಯನ್ನು ವಿಡಿಯೋ ಕಾನ್ಪರೆನ್ಸ್‌ ಮುಖಾಂತರ ಎದುರಿಸಲಿದ್ದಾರೆ ಎಂದು ತಿಳಿದು ಬಂದಿದೆ.

[t4b-ticker]

You May Also Like

More From Author

+ There are no comments

Add yours