ನೌಕರರ ಸೇವೆ ಎಲ್ಲಾ ವರ್ಗದವರಿಗೂ ಪೂರಕವಾಗಿರಲಿ : ಶಾಸಕ ಬಿ.ಜಿ.ಗೋವಿಂದಪ್ಪ

 

ಹೊಸದುರ್ಗ : ತಾಲ್ಲೂಕಿನ ಕೆಲ ಸರ್ಕಾರಿ ಕಚೇರಿಗಳಲ್ಲಿ, ನೌಕರರು ಕಾರ್ಯನಿರ್ವಹಿಸುವುದರಲ್ಲಿ ಲೋಪದೋಷಗಳು ಕಂಡು ಬಂದರೆ, ತಕ್ಷಣವೇ ಸರಿಪಡಿಸಿಕೊಳ್ಳಿ. ಕಚೇರಿಗೆ ಸಮಯಕ್ಕೆ ಸರಿಯಾಗಿ ಬರಬೇಕು. ನೌಕರರ ಸೇವೆ ಬಡವರು ಮತ್ತು ಎಲ್ಲಾ ವರ್ಗದವರಿಗೂ  ಪೂರಕವಾಗಿರಬೇಕು ಎಂದು ಶಾಸಕ ಬಿ ಜಿ ಗೋವಿಂದಪ್ಪ ನೌಕರರಿಗೆ ಕಿವಿಮಾತು ಹೇಳಿದರು.
  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸುವರ್ಣ ಮಹೋತ್ಸವ ಅಂಗವಾಗಿ ಪಟ್ಟಣದ ಹೇಮಾವತಿ ಸಮುದಾಯ ಭವನ ಆವರಣದಲ್ಲಿ ಆಯೋಜಿಸಿದ್ದ ‘ಕ.ರಾ.ಸ.ನೌ ಸಂಘದ ಸಭಾಭವನ ಶಂಕುಸ್ಥಾಪನೆ ಮತ್ತು ಸರ್ವಸದಸ್ಯರ ಮಹಾಸಭೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ಸಂಘಗಳು ನಿಮ್ಮ ಹಾಗೂ ತಾಲ್ಲೂಕಿನ ಶ್ರೇಯೋಭಿವೃದ್ಧಿಗೆ ಪೂರಕವಾಗಿರಬೇಕು. ನೌಕರರ ಸೇವೆ ಬಡವರಿಗೆ ತಲುಪಬೇಕು. ಕಚೇರಿಗಳಲ್ಲಿ ಬಡವರ ಕೆಲಸ ಕಾರ್ಯ ತುರ್ತಾಗಿ ಮಾಡಿಕೊಡಬೇಕು.

ಓದಿ:ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

 ಪಟ್ಟಣದಲ್ಲಿ ನಿರ್ಮಿಸುತ್ತಿದ್ದಾರೆ ಸಭಾಭವನವನ್ನು 3-4 ತಿಂಗಳಲ್ಲಿ ಮುಗಿಸಿ, ಸಾರ್ವಜನಿಕ ಸೇವೆಗೆ ಅವಕಾಶ ಕಲ್ಪಿಸಲಾಗುವುದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಒಂದು ಸಿಇಟಿ ಕೇಂದ್ರ ತೆರೆಯಿರಿ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಿ, ಅಗತ್ಯ ನೆರವು ನೀಡುವುದಾಗಿ ಶಾಸಕರು ತಿಳಿಸಿದರು.

ಓದಿ: ತೋಟಗಾರಿಕೆ ಇಲಾಖೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಮಾತನಾಡಿ, ಶಾಸಕರು ಮತ್ತು ಕಾರ್ಯಾಂಗ ಒಟ್ಟಾಗಿ ಹೋದರೆ ಪ್ರಗತಿ ಕಾಣಬಹುದು. ನಿಕಟ ಸಂಬಂಧ ಸಂಪರ್ಕ. ರಾಜ್ಯದಲ್ಲಿ ಸಂಕಷ್ಟದ ಸಮಯದಲ್ಲಿ  ಸರ್ಕಾರಿ ನೌಕರರು ಅಪಾರ ಸಹಕಾರ ನೀಡಿದ್ದಾರೆ.
 ಏಳನೇ ವೇತನ ಆಯೋಗ ನವೆಂಬರ್ ತಿಂಗಳಲ್ಲಿ ವರದಿ ಸಲ್ಲಿಸಲಿದೆ. ಸರ್ಕಾರದ ತೀರ್ಮಾನ ಆದರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ವೇತನವನ್ನು ಶೇ. 30-40 ಕ್ಕೆ ಹೆಚ್ಚಿಸುವುದು, ಎನ್.ಪಿ.ಎಸ್ ಜಾರಿ, ನೌಕರರ ಕುಟುಂಬದವರಿಗೆ ಉಚಿತ ಚಿಕಿತ್ಸೆ ನೀಡಲು ಹೆಲ್ತ್ ಕೇರ್, ವರ್ಗಾವಣೆ ಸಮಸ್ಯೆ ನಿವಾರಣೆ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯಲು ಸರ್ಕಾರಕ್ಕೆ ಒತ್ತಡ ತರಲಾಗುವುದು. ಹೊಸದುರ್ಗದಲ್ಲಿ ಪ್ರತಿ ವರ್ಷ ಒಬ್ಬರು ಅಧ್ಯಕ್ಷರು ಆಗುವ ಪದ್ಧತಿ ಇದೆ. ಇದರಿಂದ ಅಭಿವೃದ್ಧಿ ಕುಂಠಿತವಾಗಬಹುದು. ಹೀಗಾಗಿ ಮುಂದಿನ ದಿನಗಳಲ್ಲಿ ಐದು ವರ್ಷದ ಅವಧಿವರೆಗೂ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದರು.
 ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್ ಲಕ್ಷ್ಮಯ್ಯ ಮಾತನಾಡಿ, ಹೊಸದುರ್ಗದಲ್ಲಿ ಸರ್ಕಾರಿ ನೌಕರರ ಸಂಘ 1972 ರಲ್ಲಿ ಆರಂಭವಾಗಿದ್ದು, 50 ವರ್ಷ ಪೂರೈಸಿದೆ. ಕ್ರೀಡಾಕೂಟಕ್ಕೆ ಸಹಕಾರ, ಕೋವಿಡ್ ಸಂದರ್ಭದಲ್ಲಿ ಆಹಾರ ಕಿಟ್ ನೀಡುವುದು ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿದೆ ಎಂದರು.(BG Govindappa)
 ಈ ವೇಳೆ ರಾಜ್ಯ ಉಪಾಧ್ಯಕ್ಷ ಮೋಹನ್ ಕುಮಾರ್, ಜಿಲ್ಲಾಧ್ಯಕ್ಷ ಕೆ.ಟಿ ತಿಮ್ಮಾರೆಡ್ಡಿ, ರಾಜ್ಯ ಗೌರವಾಧ್ಯಕ್ಷ ಲೋಕೇಶ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಂಘದ ಪದಾಧಿಕಾರಿಗಳು, ನೌಕರರು, ನಿವೃತ್ತ ನೌಕರರು ಸೇರಿದಂತೆ ಹಲವರಿದ್ದರು.
[t4b-ticker]

You May Also Like

More From Author

+ There are no comments

Add yours