ವಿವಾಹ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದ ದಂಪತಿಗಳು ಕೂಡಿ ಬಾಳೋಣ ಅಂತ ಜೊತೆಯಾಗಿದ್ದು ಹೇಗೆ, ಓದಿ ಈ ಸ್ಟೋರಿ

 

ಹೊಳಲ್ಕೆರೆ  : ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ರಾಷ್ಟಿಯ ಲೋಕಾದಲತ್‌ನಲ್ಲಿ ಬ್ಯಾಂಕ್, ಚಕ್, ವಿಭಾಗ, ಮತ್ತು ವಿವಾಹ ವಿಚ್ಛೇದನ ಕ್ಕೆ ಸಲ್ಲಿಸಿದ್ದ ಹಲವಾರು ಪ್ರಕರಣಗಳು ಇತ್ಯಾರ್ಥಗೊಳಿಸಲಾಗಿದೆ.
ಪ್ರಮುಖವಾಗಿ ಲೋಕಾ ಅದಾಲತ್ ಕಟ್ಟೆಯಲ್ಲಿದ್ದ ಎರಡು ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ದಂಪತಿಗಳನ್ನು ಒಂದು ಗೂಡಿಸಿ ಸುಖ ಜೀವನ ನಡೆಸಲು ಪ್ರೋತ್ಸಾಹ ನೀಡಿ, ಪ್ರಕಣವನ್ನು ಇತ್ಯಾರ್ಥಗೊಳಿಸಿದ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಎಸ್.ಸರವಣನ್  ಇಲ್ಲಿ ಹೊಸ ದಾಖಲೆ ಸೃಷ್ಠಿಸಿದ್ದಾರೆ.

 

ಕುಟುಂಬಗಳಲ್ಲಿ ಉಂಟಾಗುವ ವೈಮನಸ್ಸುಗಳನ್ನು ಕಟ್ಟು ಕೆಲಸ ಸಾಮಾನ್ಯದಲ್ಲ. ಹಲವು ಕಾರಣಗಳಿಂದ ಘಟಾನುಘಟಿ ದಂಪತಿಗಳ ನಡುವೆ ವ್ಯಾಜ್ಯಗಳು ಉಂಟಾಗಿ ಕೊನೆಗೆ ವಿವಾಹ ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಬರುತ್ತಾರೆ. ಎಷ್ಟೋ ಪ್ರಕಣಗಳಲ್ಲಿ ವಿವಾಹ ವಿಚ್ಚೇದನ ಪಡೆದ ಘಟನೆಗಳಿವೆ. ಅದರೇ ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿಗಳನ್ನು ಒಂದು ಮಾಡುವ ಮೂಲಕ ಹೊಸಜೀವನಕ್ಕೆ ಮುನ್ನುಡಿ ಬರೆಯುವಂತ ಹೊಸ ಸಹಾಸದ ಕೆಲಸಗಳನ್ನು ಇಲ್ಲಿನ ನ್ಯಾಯಾಧೀಶರು ಮಾಡಿದ್ದಾರೆ.
ತಾಲ್ಲೂಕಿನ ತಾಳಿಕಟ್ಟಿಯ ಬಸವರಾಜ್ ಹಾಗೂ ವಿಜಯ ಹಾಗೂ ಮಲ್ಲಾಡಿಹಳ್ಳಿ ಶ್ವೇತಾ ನವಿನ್ ದಂಪತಿಗಳು ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ವಿವಾಹ ವಿಚ್ಛೇದನದ ಅರ್ಜಿಯನ್ನು ಶನಿವಾರ ನಡೆದ ಲೋಕದಲತ್‌ನಲ್ಲಿ ನ್ಯಾಯಾಧೀಶ ಎಸ್.ಶರವಣನ್ ನೇತೃತ್ವದಲ್ಲಿ ವಕೀಲರಾದ ಎಸ್.ವೇದಮೂರ್ತಿ, ಎಸ್.ವಿಜಯ, ಎನ್.ಹೆಚ್.ಶಾಂತವೀರಪ್ಪ, ಬಿ.ಎಸ್.ಪ್ರಭಕರ್ ಮಧ್ಯಸ್ಥಿಕೆಯಲ್ಲಿ ಇತ್ಯಾರ್ಥಗೊಳಿಸಿದೆ.
ತಾಲೂಕಿನ ಮಲ್ಲಾಡಿಹಳ್ಳಿ ಅಮೃತ್ ಅಗ್ಯಾನಿಕ್ ಸಂಸ್ಥೆ ಉದ್ಯೋಗಿ ಶ್ವೇತಾ ನವಿನ್ ದಂಪತಿಗಳು ವಿವಾಹ ವಿಚ್ಛೇದನಕ್ಕೆ ನ್ಯಾಯಾಲಯದಲ್ಲಿ ೨೦೨೦ ರಲ್ಲಿ ಅರ್ಜಿ ಸಲ್ಲಿಸಿದ್ದರು. ದಂಪತಿಗಳಿಗೆ ೪ ವರ್ಷದ ಮಗು ಇದೆ. ಇಬ್ಬರ ನಡುವೆ ಕ್ರೀಮಿನಲ್ ಪ್ರಕರಣ ದಾವಣಗೆರೆ ನ್ಯಾಯಾಲಯದಲ್ಲಿ ಇತ್ತು. ಸುಖಸಂಸಾರಕ್ಕಾಗಿ ರಾಜಿ ಮಾಡಿಕೊಂಡು ಪರಸ್ಪರ ಪ್ರೀತಿ ಹೊಂದಾಣಿಕೆ ಯಿಂದ ಜೀವನ ನಡೆಸಬೇಕು ಎನ್ನುವ ತಿಳುವಳಿಕೆ ಹೇಳಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಶರವಣನ್ ನೇತೃತ್ವದಲ್ಲಿ, ವಕೀಲರಾದ ಎಸ್.ವೇದಮೂರ್ತಿ, ಎಸ್.ವಿಜಯ ಹಾಗೂ ಮಧ್ಯಸ್ಥಿಕೆಗಾರಾದ ಪ್ರೇಮಾ ಸಮಷಮ ಲೋಕಾದಲತ್‌ನಲ್ಲಿ ರಾಜಿ ಮಾಡಿಕೊಂಡು ಒಂದುಗೊಡಿ ಸಂತಸಗೊಂಡಿದ್ದಾರೆ. .

ಓದಿ: ಯುವಕ ಯುವತಿಯರಿಗೆ ಉದ್ಯೋಗ ಮೇಳ

ತಾಲೂಕಿನ ತಾಳಿಕಟ್ಟೆ ನಿವಾಸಿ ಬಸವರಾಜ್ ವಿಜಯಮ್ಮ ವಿವಾಹವನ್ನು ವಿಚ್ಛೇದನ ಗೊಳಿಸುವಂತೆ ಕೋರಿ ೨೦೨೩ರಲ್ಲಿ ವಿವಾಹ ವಿಚ್ಛೇದನ ಕ್ಕೆ ಅರ್ಜಿ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ನಡೆದ ಮಧ್ಯಸ್ಥಿಕೆ ಯಿಂದಾಗಿ ಪರಸ್ಪರರು ಜೀವನವನ್ನು ಮುಂದುವರಿಸಬೇಕು ಎನ್ನುವ ತೀರ್ಮಾನಕ್ಕೆ ಬಂದು ಶನಿವಾರ ಲೋಕದಲತ್ ನಲ್ಲಿ ಪುನಃವಿವಾಹವನ್ನು ಸ್ಥಾಪಿಸಿಕೊಳ್ಳುವುದರ ಮೂಲಕ ಹೊಸ ಜೀವನ ಆರಂಭಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದು, ಲೋಕಾದಲತ್ ನಲ್ಲಿ ರಾಜಿ ಮಾಡಿಕೊಂಡಿರುತ್ತಾರೆ. ಇಬ್ಬರನ್ನು ಒಂದುಗೂಡಿಸಿದ ವಕೀಲರಾದ ಎನ್.ಹೆಚ್.ಶಾಂತವೀರಪ್ಪ, ಬಿ.ಎಸ್.ಪ್ರಭಕರ್ ಪ್ರಕರಣಗಳನ್ನು ಇತ್ಯಾರ್ಥಕ್ಕೆ ಶ್ರಮಿಸಿದ್ದಾರೆ. ಇದೆ ಸಮಯದಲ್ಲಿ ಮಧ್ಯಸ್ಥಿಕೆಯ ವಕೀಲರಾದ ಪೇಮಾ, ವಕೀಲರ ಸಂಘದ ಅಧ್ಯಕ್ಷ ಎಲ್.ಕೆ.ಶಿವಕುಮಾರ್. ಹಿರಿಯ ವಕೀಲರಾದ ಹನುಮಂತೆಗೌಡ, ವಿಜಯ್, ಜಿ.ಈ.ರಂಗಸ್ವಾಮಿ, ಜಿ.ಮುನಿಶ್ವರಪ್ಪ, ಎಸ್.ಜಿ.ರಂಗಸ್ವಾಮಿ, ಕೆ.ಎಸ್.ಜಯದೇವ, ಚಂದ್ರಹಾಸ್, ನಟರಾಜ್, ಬುರನ್ ಬೇಗಂ, ರವಿ. ಡಿ.ಜಯಣ್ಣ, ಸಂತೋಷಕುಮಾರ್, ಶಶಿಧರ್, ದಿನಕರ್ ಸೇರಿದಂತೆ ವಕೀಲರ ಸಂಘದ ಸದಸ್ಯರು ಇದ್ದರು.

ಓದಿ:ತೋಟಗಾರಿಕೆ ಇಲಾಖೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

 

[t4b-ticker]

You May Also Like

More From Author

+ There are no comments

Add yours