ಚಿಗಟೇರಿಯಲ್ಲಿ ಆರೈಕೆ ಸೂಪರ್ ಸ್ಪೆಷಲ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ

 

ಹರಪನಹಳ್ಳಿ:ಸೆ 9: “ಚಿಗಟೇರಿಯಲ್ಲಿ ಆರೈಕೆ ಸೂಪರ್ ಸ್ಪೆಷಲ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ” ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ “ದಾವಣಗೆರೆ ನಗರದ ಪ್ರಸಿದ್ಧ ಆರೈಕೆ ಸೂಪರ್ ಸ್ಪೆಷಲ್ ಆಸ್ಪತ್ರೆ”ಮತ್ತು “ಪ್ರೀತಿ ಆರೈಕೆ ಟ್ರಸ್ಟ್ ” ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರವನ್ನು ಚಿಗಟೇರಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಯುತ ಬಿ ನಾಗರಾಜ್ ರವರು ಆರೈಕೆ ಆಸ್ಪತ್ರೆಯ ಮುಖ್ಯಸ್ಥರಾದ ಶ್ರೀಯುತ ಡಾಕ್ಟರ್…… ಡಿ.ರವಿಕುಮಾರ್ ರವರ ಸಮ್ಮುಖದಲ್ಲಿ.ದೀಪ ಹಚ್ಚುವುದರ ಮೂಲಕ ಉದ್ಘಾಟಿಸಿದರು. ನಂತರ ಡಾಕ್ಟರ್.ರವಿಕುಮಾರ್ ಅವರು ಮಾತನಾಡಿ. ನಮ್ಮ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಈ ವರ್ಷ ವಿಶೇಷವಾಗಿ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಶಿಬಿರ ಹಮ್ಮಿಕೊಂಡಿದ್ದು. ಈ ಭಾಗದ ಜನರು ಆರೋಗ್ಯದ ದೃಷ್ಟಿಯಿಂದ. ಸದುಉಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. ನಂತರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಜಿನಪ್ಪ ಮಾತನಾಡಿ ಆರೈಕೆ ಟ್ರಸ್ಟ್ ಮುಖ್ಯಸ್ಥರನ್ನು ಅಭಿನಂದಿಸಿ ಉಚಿತ ಶಿಬಿರವನ್ನು ಚಿಗಟೇರಿ ಸುತ್ತಮುತ್ತಲ ಗ್ರಾಮದ ನಾಗರಿಕರು ಭಾಗವಹಿಸಿ ಉಚಿತ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ವಿಶೇಷವಾಗಿ ಹೃದಯ ರೋಗ. ಕಣ್ಣು ದೃಷ್ಟಿ. ನರರೋಗ. ಮೂತ್ರಪಿಂಡ ಸಮಸ್ಯೆ. ಕಿಲು ಮೂಳೆ ಸಮಸ್ಯೆ ಕೆಮ್ಮು. ಶೀತಾ. ಜ್ವರ ಮುಂತಾದ ಹಲವಾರು ಕಾಯಿಲೆಗಳಿಗೆ ತಪಾಸಣೆ ನಡೆಸಿ. ಸಂಬಂಧಪಟ್ಟ ಕಾಯಿಲೆಗೆ ಉಚಿತ ಔಷದ ನೀಡಲಾಯಿತು.ಈ ಶಿಬಿರದಲ್ಲಿ ಸುಮಾರು 580 ಕ್ಕೂ ಹೆಚ್ಚು ಜನರಿಗೆ ಹೊರರೋಗಿಗಳಾಗಿ ತಪಾಸಣೆ ನಡೆಸಿದ್ದು ವಿಶೇಷವಾಗಿತ್ತು. ಎಂದು ಶಿಬಿರದ ಆಯೋಜಕರಾದ ಡಾಕ್ಟರ್ ವಿನೋದ್ ಕುಮಾರ್ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಡಾಕ್ಟರ್ ರೂಪ. ಡಾಕ್ಟರ್ ಕೊಟ್ರೇಶ್. ಗ್ರಾಮ ಪಂಚಾಯತ್ ಅಧ್ಯಕ್ಷ.ಬಿ,ನಾಗರಾಜ್ ಉಪಾಧ್ಯಕ್ಷ ಹಾಲಮ್ಮ. ಶಿಬಿರಕ್ಕೆ ಸಹಾಯ ಮಾಡಿದ ಡೋಂಗಿ ರಮೇಶ್. ಸಿದ್ದನಗೌಡರು. ಸಿ ಜಾತಪ್ಪ ವಕೀಲರು. ಪಿ.ಬಸವನ್ ಗೌಡ್ರು ಪಂಚಾಯಿತಿ ಸದಸ್ಯರಾದ ಎ ಸವಿತಮ್ಮ. ಮರಿಯಮ್ಮ. ಬಿ ಶಿವಕುಮಾರ್. ಬಿ ಜಗದೀಶ್.ಎ.ಶಾರದಮ್ಮ. ಕಿರಣ್ ಕುಮಾರ್ ಬಣಕಾರ್. ವಿ ಶಾರದಮ್ಮ. ಕೆ ದುರ್ಗಮ್ಮ. ಪಿಡಿಒ ಅಂಜಿನಪ್ಪ. ಕಾರ್ಯದರ್ಶಿ ಮಂಜುನಾಥ್. ಸುರೇಶ್.ಮುನಿಯಪ್ಪ. ಆರೈಕೆ ಆಸ್ಪತ್ರೆಯ ಸಿಬ್ಬಂದಿಗಳು. ಹಿರಿಯ ನಾಗರಿಕರು. ಸಾರ್ವಜನಿಕರು. ಶಿಬಿರದಲ್ಲಿ ಪಾಲ್ಗೊಂಡಿದ್ದರು.

[t4b-ticker]

You May Also Like

More From Author

+ There are no comments

Add yours