ವಿಜಾಪುರ ಬಳಿ ಬಸ್ಸಿಗಾಗಿ ಕಾದು ಕುಳಿತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿ|ಸ್ಥಳದಲೇ ವಿದ್ಯಾರ್ಥಿ ಸಾವು

 

ಚಿತ್ರದುರ್ಗ: (chitradurga) ಗ್ರಾಮೀಣ ಭಾಗದಲ್ಲಿ  ಹಳ್ಳಿಗಳಿಗೆ ಬಸ್ ಸೇವೆ ಇಲ್ಲದೇ ತಮ್ಮ ಊರಿನಿಂದ ಮುಖ್ಯ ರಸ್ತೆಗಳಿಗೆ ಬಂದು ಬಸ್ ಗೆ ಕಾಯುವುದು ಸಾಮಾನ್ಯವಾಗಿದ್ದು ರಸ್ತೆ ಬದಿಯಲ್ಲಿ ಬಸ್ ದಾವಂತದಲ್ಲಿ ಅನೇಕರು ಪ್ರಾಣಗಳು ಬಲಿಯಾಗಿವೆ. ಅದರ ಸಾಲಿಗೆ ಇಂದು  ಬಸ್ಸಿಗಾಗಿ ಕಾದು ಕುಳಿತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿಯಾಗಿ ಮೃತಪಟ್ಟಿರುವ ಘಟನೆ ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಲ್ಲಿ ಒಬ್ಬ ವಿದ್ಯಾರ್ಥಿ ಗಾಯಗೊಂಡಿದ್ದಾನೆ.

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ವಿಜಾಪುರ ಗ್ರಾಮದ ಬಳಿ ಘಟನೆ ನಡೆದಿದ್ದು, ಹಿರೇಕಂದವಾಡಿ ಗ್ರಾಮದ ಪಿಯುಸಿ ವಿದ್ಯಾರ್ಥಿನಿ ಸುಚಿತ್ರಾ(18) ಮೃತಪಟ್ಟಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಲಾರಿ ಅಪಘಾತದಿಂದ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಾಪುರದಿಂದ ಚಿತ್ರದುರ್ಗಕ್ಕೆ ಕಾಲೇಜಿಗೆ ಬರಲು ಹೆದ್ದಾರಿಯಲ್ಲಿ ಬಸ್ಸಿಗಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದಾಗ ಲಾರಿ ಡಿಕ್ಕಿಯಾಗಿದೆ.

ಇದನ್ನೂ ಓದಿ: ಇಂದಿನ ರಾಶಿ ಭವಿಷ್ಯ ಯಾವ ರಾಶಿಗೆ ಹೇಗಿದೆ ಫಲ

ಅಪಘಾತದಿಂದ ಆಕ್ರೋಶಗೊಂಡಿರುವ ಸಾರ್ವಜನಿಕರು ವಿಜಾಪುರ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

ಸರ್ವೀಸ್ ರಸ್ತೆ ಮೂಲಕ ಬಸ್ಸುಗಳು ಬಾರದ ಕಾರಣ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಪ್ರಯಾಣಿಕರು ಹೆದ್ದಾರಿಯಲ್ಲಿ ಬಂದು ಬಸ್ಸು ಹಿಡಿದು ನಗರಕ್ಕೆ ಸಾವಾಲಾಗಿರುವ ಪರಿಸ್ಥಿತಿ ಇರುವುದರಿಂದ ಈ ಅಪಘಾತ ನಡೆದಿದೆ. ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ  ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಭರಮಸಾಗರ ಠಾಣೆಯ ಪೊಲೀಸರು ಆಗಮಿಸಿದ್ದು, ಸಾರ್ವಜನಿಕರನ್ನು ಸಮಾಧಾನಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಜನ ವಾಗ್ವಾದಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ದಶರಥರಾಮೇಶ್ವರಕ್ಕೂ ಮತ್ತು ಅಯೋಧ್ಯೆಗಿದೆ ಐತಿಹಾಸಿಕ ನಂಟು!

[t4b-ticker]

You May Also Like

More From Author

+ There are no comments

Add yours