ಚಿತ್ರದುರ್ಗ|ವಿಜಾಪುರ ಬಳಿ ವಿದ್ಯಾರ್ಥಿ ಸಾವು |Ksrtc ವಿರುದ್ದ ಎಬಿವಿಪಿ ಪ್ರತಿಭಟನೆ

 

ಚಿತ್ರದುರ್ಗ🙁chitradurga) ಗ್ರಾಮೀಣ ಭಾಗಗಳಿಗೆ ಬಸ್ ಸಮಯಕ್ಕೆ ಸರಿಯಾಗಿ ಬಿಡದೇ ಸಾವಿರಾರು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಮುಖ್ಯ ರಸ್ತೆಯಿಂದ ಒಳ ಭಾಗದ ಹಳ್ಳಿಗಳಿಗೆ ಒಂದು ಬಸ್ ಸಹ ಸಂಪರ್ಕ ಇಲ್ಲದೇ ಅನೇಕ ವಿದ್ಯಾರ್ಥಿಗಳು ಪ್ರಾಣವನ್ನು ಕಳೆದುಕೊಂಡು ಇಂದು ಸಹ ವಿಜಾಪುರ ಬಳಿ ಸುಚಿತ್ರಾ ಎಂಬ ವಿದ್ಯಾರ್ಥಿ ಲಾರಿ ಡಿಕ್ಕಿಯಾಗಿ ಸಾವನ್ನಪ್ಪಿರುವುದಕ್ಕೆ ನೇರವಾಗಿ ಸರ್ಕಾರ ಮತ್ತು ಕೆಎಸ್ ಆರ್ಟಿಸಿ ಹೊಣೆ ಎಂದು ವಿದ್ಯಾರ್ಥಿ ಸಾವಿನ ಬೆನ್ನಲೇ ನೂರಾರು ಎಬಿವಿಪಿ ಕಾರ್ಯಕರ್ತರು KSRTC ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ksrtc ಮ್ಯಾನೇಜರ್ ಬಳಿ ಮನವಿ ಪತ್ರ ಸಲ್ಲಿಸಿ ಅಕ್ರೋಶ ಹೊರ ಹಾಕಿದರು.

ಚಿತ್ರದುರ್ಗ ತಾಲೂಕಿನಲ್ಲಿ ಸಿರಿಗೆರೆ, ಹಿರೇಕಬ್ಬಿಗೆರೆ, ವಿಜಾಪುರ, ಚಿಕ್ಕಪುರ, ಪಳಿಕೆಹಳ್ಳಿ ಲಕ್ಷ್ಮಿಸಾಗರ ಸೇರಿ ಅನೇಕ ಹಳ್ಳಿಗಳಿಗೆ ಬಸ್ ಸೌಲಭ್ಯ ಒದಗಿಸಬೇಕು. ಕಂಡಕ್ಟರ್ ಡ್ರೈವರ್ ಕೇಳಿದರೆ ಬಸ್ ಗಳು ಇಲ್ಲ ಎಂದು ಹೇಳುತ್ತಾರೆ. ನಿಮಗೆ ಸರ್ಕಾರ ಕಾರು, ಸಂಬಳ ಎಲ್ಲಾ ಕೊಡುತ್ತದೆ ನಮ್ಮಷ್ಟು ಕಷ್ಟ ನಿಮಗಿಲ್ಲ. ಆಕೆ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡುತ್ತಿರಿ ಮೊದಲು ಬಸ್ ಬಿಡಬೇಕು ಎಂಬ ವಾದವನ್ನು ಕೆಎಸ್ ಆರ್ಟಿಸಿ ಮ್ಯಾನೇಜರ್ ಬಳಿ ಆಗ್ರಹಿಸಿದರು.

ಇದನ್ನೂ ಓದಿ: ವಿಜಾಪುರ ಬಳಿ ಬಸ್ಸಿಗಾಗಿ ಕಾದು ಕುಳಿತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿ|ಸ್ಥಳದಲೇ ವಿದ್ಯಾರ್ಥಿ ಸಾವು

ಕೂಡಲೇ ಹೆಚ್ಚುವರಿ ಬಸ್‌ ಬಿಡಬೇಕು ಮತ್ತು ಪ್ರಸ್ತುತ ಮಾರ್ಗದ ಸಂಚಾರದಲ್ಲಿರಿವ ಬಸ್‌ ಸರಿಯಾದ ಸಮಯಕ್ಕೆ ಬರಬೇಕು. ಶಾಲೆ ಮತ್ತು ಕಾಲೇಜು ನಮಯ 9:00am ಆದರೆ ಬಸ್ 10:30am ಕೆ ತಲುಪುತ್ತದೆ. ಅದಕ್ಕಾಗಿ ಸಮಯಕ್ಕೆ ಸರಿಯಾಗಿ ಬರುವಂತೆ ಮಾಡಬೇಕೆಂದು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಒತ್ತಾಯಿಸಿದರು.

[t4b-ticker]

You May Also Like

More From Author

+ There are no comments

Add yours