ಸೇತುವೆ ಮೇಲಿಂದ ಸರ್ವಿಸ್ ರಸ್ತಗೆ ಬಿದ್ದ VRL ಬಸ್ ಇಬ್ಬರ ಸಾವು

 

ಹಾವೇರಿ(ಫೆ.12): ರಾಜ್ಯದಲ್ಲಿ್್  ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಒಟ್ಟು ಆರು ಮಂದಿ ಸಾವನ್ನಪ್ಪಿ, 17 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ವಿಆರ್‌ಎಲ್‌ ಬಸ್‌ವೊಂದು(VRL Bus) ಬ್ರಿಡ್ಜ್ ಮೇಲಿಂದ ಸರ್ವೀಸ್ ರಸ್ತೆಗೆ ಪಲ್ಟಿಯಾದ ಪರಿಣಾಮ ಬಸ್ ಚಾಲಕ ಸೇರಿ ಇಬ್ಬರು ಮೃತಪಟ್ಟು, ಹದಿನೈದು ಜನರಿಗೆ ಗಾಯಗಳಾದ ಘಟನೆ ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು(ಶನಿವಾರ) ನಡೆದಿದೆ.

ವಿಆರ್‌ಎಲ್‌ ಸ್ಲೀಪರ್ ಕೋಚ್‌ ಬಸ್‌ ಬೆಂಗಳೂರಿನಿಂದ(Bengaluru) ಬೆಳಗಾವಿ ಜಿಲ್ಲೆಯ ಗೋಕಾಕ್‌(Gokak) ನಗರಕ್ಕೆ ಹೊರಟಿತ್ತು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನ ಹಾವೇರಿ ನಗರದ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬ್ರಿಡ್ಜ್ ಮೇಲಿಂದ ಸರ್ವೀಸ್ ರಸ್ತೆ ಮೇಲೆ ಬಿದ್ದ ಬಸ್‌ನ್ನು ಕ್ರೇನ್‌ ಸಹಾಯದಿಂದ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ‌ ಬಸ್ ಮೇಲೆತ್ತಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಂಕರ ಮಾರಿಹಾಳ, ಸಿಪಿಐ ನಾಗಮ್ಮ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹಾವೇರಿ ಗ್ರಾಮೀಣ ಪೊಲೀಸ್(Police) ಠಾಣೆ ಪ್ರಕರಣ ದಾಖಲಾಗಿದೆ.

ಅಪ​ಘಾತ: ಮೂವರ ಸಾವು

ಹೊಸಪೇಟೆ(Hosapete): ಮರಿಯಮ್ಮನಹಳ್ಳಿ ಪಟ್ಟಣದ ಸಮೀಪದ ಹಾರುವನಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ನಡೆದ ಕಾರು ಅಪಘಾತದಲ್ಲಿ(Accident) ಮೂವರು ಸ್ಥಳದಲ್ಲೇ ಶುಕ್ರವಾರ ಮೃತಪಟ್ಟಿದ್ದಾರೆ.
ರಾಜಸ್ಥಾನ ಮೂಲದ ಕುಟುಂಬದ ಸದಸ್ಯರು ಕೇರಳದಲ್ಲಿ ದುಡಿಯಲು ಹೋಗಿದ್ದರು, ಕೇರಳದಿಂದ ಕೋಲ್ಕತ್ತಾಗೆ ತೆರಳುತ್ತಿದ್ದರು. ಕಾರಿನ ತಾಂತ್ರಿಕ ದೋಷದಿಂದ ಕಾರು ಪಲ್ಟಿಯಾಗಿದೆ. ಕಾರಿನಲ್ಲಿದ್ದ ಏಳು ಜನರಲ್ಲಿ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಅಜಮಲ್‌ (35), ಸಲ್ಮಾ (30) ಮತ್ತು ರಹೀಜ್‌ (30) ಎಂದು ಗುರು​ತಿ​ಸ​ಲಾ​ಗಿದೆ.

ಇಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಗರಿಬೊ​ಮ್ಮ​ನಹಳ್ಳಿ ಸಿಪಿಐ, ಮರಿಯಮ್ಮನಹಳ್ಳಿ ಪಟ್ಟಣದ ಪಿಎಸ್‌ಐ ಭೇಟಿ ನೀಡಿ ಪರಿಶೀಲಿಸಿದರು. ಮರಿಯಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[t4b-ticker]

You May Also Like

More From Author

+ There are no comments

Add yours