ಎರಡು ತಿಂಗಳಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಎಲ್ಲಾ ರಸ್ತೆಗಳು ಪೂರ್ಣ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

ಚಿತ್ರದುರ್ಗ: ಎರಡು ತಿಂಗಳಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಎಲ್ಲಾ ರಸ್ತೆಗಳು ಪೂರ್ಣವಾಗಲಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ತಾಲೂಕಿನ ಈರಜ್ಜನಹಟ್ಟಿ , ಸೊಲ್ಲಾಪುರ, ಮೆದೇಹಳ್ಳಿ, ಜಿ.ಆರ್ ಹಳ್ಳಿ ಗ್ರಾಮಗಳಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ 2.90 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಗುಡ್ಡದರಂಗನಹಳ್ಳಿ, ಮೆದೇಹಳ್ಳಿ, ಮೂಲಕ NH13 ರಸ್ತೆವರೆಗೂ ಮತ್ತು ಈರಜನಹಟ್ಟಿ, ಠಾಗರನಹಟ್ಟಿ, ಸೊಲ್ಲಪುರವರೆಗಿನ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ .ನೂರಾರು ರೈತರ ಹೊಲಗಳಿಗೆ ರಸ್ತೆ ಕಲ್ಪಿಸಲಾಗಿದೆ. ರೈತರ ಬೆಳೆಗಳನ್ನು ಸಾಗಿಸಲು ಅನುಕೂಲವಾಗುತ್ತದೆ.
ನರೇಂದ್ರ ಮೋದಿಯವರ ಕನಸಿನಂತೆ ರೈತರ ಹೊಲಗಳಿಗೆ ರಸ್ತೆಗಳನ್ನು ನಿರ್ಮಿಸಲಾಗಿದೆ. ನನ್ನ ಕ್ಷೇತ್ರದಲ್ಲಿ ಪಿಎಂಇಜಿಪಿವೈ ಯೋಜನೆಯಲ್ಲಿ ಒಟ್ಟು 28 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯತ್ತಿದ್ದು ಎಲ್ಲಾ ಕಾಮಗಾರಿಗಳು ಎರಡು ತಿಂಗಳಲ್ಲಿ ಪೂರ್ಣವಾಗಲಿದೆ. ಈ ರಸ್ತೆಗಳಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ನನ್ನ ಕ್ಷೇತ್ರದಲ್ಲಿ ನಗರ ಮತ್ತು ಗ್ರಾಮೀಣ ಭಾಗದ ರಸ್ತೆಗಳಿಗೆ ವಿಶೇಷ ಅನುದಾನ, ಮೂಲಕ ಸಿ.ಸಿ.ರಸ್ತೆಗಳು ಕಾಮಗಾರಿ ಮತ್ತು ಪಿಎಂಇಜಿಪಿವೈ , ಎಸ್ಇಪಿ, ಟಿಎಸ್ಪಿ ಅನುದಾನ ನಮ್ಮ ಗ್ರಾಮ ನಮ್ಮ ರಸ್ತೆಯಡಿಯಲ್ಲಿ ಗ್ರಾಮೀಣ ಭಾಗದ ರಸ್ತೆಗಳಿಗೆ ಹಣ ನೀಡಲಾಗಿದೆ.ಮುಂದಿನ ದಿನಗಳಲ್ಲಿ‌ ಬಿಟ್ಟು ಹೋಗಿರುವ ಕೆಲವೊಂದು ಕಡೆಗೆ ಉಳಿದ ಎಲ್ಲಾ ರಸ್ತೆ ಕಾಮಗಾರಿಗಳಿಗೆ ಹಣ ನೀಡುತ್ತೇನೆ. ಪೂಜೆ ಮಾಡಿರುವ ಎಲ್ಲಾ ಕಾಮಗಾರಿಗಳು ಮುಗಿಯುವ ಹಂತದಲ್ಲಿದೆ ಎಂದು ತಿಳಿಸಿದರು.

ಮಳೆಗಾಲದ ಸಮಯದಲ್ಲಿ ನೀರು ಹೆಚ್ಚು ಬರುವ ಸ್ಥಳಗಳಲ್ಲಿ ರಸ್ತೆಗಳು ಹೆಚ್ಚು ಕಿತ್ತುಕೊಂಡು ಹೋಗುತ್ತಿದ್ದು ಅಂತಹ ಸ್ಥಳಗಳಲ್ಲಿ ಸಿ.ಸಿ.ರಸ್ತೆ ನಿರ್ಮಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪಿಎಂಇಜಿಪಿವೈ ಮುಖ್ಯ ಕಾರ್ಯನಿರ್ವಾಹಣ ಅಭಿಯಂತರ ನಾಗರಾಜ್ ಮತ್ತು ಗ್ರಾಮ ಪಂಚಾಯತಿ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours