ಭದ್ರ ಜಲಾಶಯದಿಂದ ನೀರು ಹರಿಸುವ ಕಾಲುವೆಯಲ್ಲಿ ಅಡ್ಡಲಾಗಿರುವ ಸಿಲ್ಟನ್ನು ತೆರವುಗೊಳಿಸಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

ಚಿತ್ರದುರ್ಗ:   ಭದ್ರ ಜಲಾಶಯದಿಂದ ನೀರು ಹರಿಸುವ ಕಾಲುವೆಯಲ್ಲಿ ಅಡ್ಡಲಾಗಿರುವ ಸಿಲ್ಟನ್ನು ತೆರವುಗೊಳಿಸಿ ಕೂಡಲೇ ಭದ್ರ ಜಲಾಶಯದಿಂದ ನೀರು ಹರಿಸಿ ಎಂದು ಭದ್ರ ಇಂಜಿನಿಯರ್ ರಾಘವನ್ ಅವರಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸೂಚಿಸಿದರು.

ವಾಣಿ ವಿಲಾಸ ಸಾಗರಕ್ಕೆ ಭದ್ರ ಡ್ಯಾಂ ನೀರನ್ನು ಪಂಪ್ ಮಾಡುವ ಕುರಿತು ಇಂಜಿನಿಯರ್ ರಾಘವನ್ ಅವರಿಗೆ ಕರೆ ಮಾಡಿ ಮಾತನಾಡಿದ್ದೇನೆ.ಕಳೆದ 20 ದಿನಗಳ ಕೆಳಗೆ ಜಿಲ್ಲೆಯಾದ್ಯಂತ ಸುರಿದ ಮಳೆಗೆ ವಿವಿಸಾಗರ 125.15 ಅಡಿ ತುಂಬಿದ್ದು ಇನ್ನು 5 ಅಡಿ ನೀರು ತುಂಬಲು ಭದ್ರ ಜಲಾಶಯದಿಂದ ನೀರು ಹರಿಸಲು ಕಾಲುವೆಯಲ್ಲಿ ಸಿಲ್ಟ್ ತೆಗೆಯರಿ ಎಂದು ತಿಳಿಸಿದ್ದೇನೆ

ವಿವಿ ಸಾಗರ ಕಳೆದ 80-90 ವರ್ಷಗಳ ಹಿಂದೆ
ಭರ್ತಿಯಾಗಿ ಕೋಡಿ ಬಿದ್ದಿತ್ತು.
ರೈತ ಸಂಘಗಳ ಹೋರಟ ಫಲವಾಗಿ ಭದ್ರ ನೀರನ್ನು ವಾಣಿ ವಿಲಾಸ ಸಾಗರಕ್ಕೆ ಹರಿಸಲಾಗುತ್ತಿದೆ. ಆದರೆ ವಾಣಿ ವಿಲಾಸ ಸಾಗರದ ಇತಿಹಾಸ ಮರುಕಳಿಸಬೇಕೆಂಬ ಆಸೆ ಜಿಲ್ಲೆಯ ಎಲ್ಲಾ ರೈತ ಸಂಘಗಳು, ಸಂಘ ಸಂಸ್ಥೆಗಳ ಆಸೆಯಾಗಿದೆ. ಈಗ ಭದ್ರ ಜಲಾಶಯ ಸಹ ತುಂಬಿದ್ದು ನಿತ್ಯ 1200 ಕ್ಯೂಸೆಕ್ಸ್ ನೀರು ಹೊರ ಬಿಡಲಾಗುತ್ತಿದೆ. ಆದರೆ ಸರ್ಕಾರ ಆದೇಶ ಪ್ರಕಾರ ಜನವರಿ ತಿಂಗಳವರೆಗೂ ಸಹ ನೀರು ಹಾಯಿಸಬೇಕು ಎಂಬ ಆದೇಶವಿದ್ದು ಭದ್ರ ಇಂಜಿನಿಯರ್ ಅವರಿಗೆ ಮಾತನಾಡಿದಾಗ ಅವರು ವಿ.ವಿ. ಸಾಗರಕ್ಕೆ ನೀರು ಹಾಯಿಸುವ ಸಿಲ್ಟ್ ತುಂಬಿಕೊಂಡಿದ್ದು ಜೆಸಿಪಿಯಲ್ಲಿ ತೆಗೆಸಲು ಆಗಿಲ್ಲ. ಆದ್ದರಿಂದ ಜನರ ಮೂಲಕ ಸಿಲ್ಟ್ ಮಣ್ಣು ತೆಗೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಆದರು ಸಹ ದಾರಿ ಅಡ್ಡಲಾಗಿರುವ ಸಿಲ್ಟ್ ತೆಗೆಯುವ ಕಾರ್ಯ ತ್ವರಿತಗತಿಯಲ್ಲಿ ಆಗಬೇಕು. ಎಲ್ಲಾ ಅಧಿಕಾರಿಗಳು ಸಹ ಇದನ್ನು ಮೊದಲ ಆದ್ಯತೆಯಾಗಿ ತೆಗೆದುಕೊಂಡು ಕೆಲಸವನ್ನು ಮುಗಿಸಿ ಅದಷ್ಟು ಶೀಘ್ರದಲ್ಲಿ ನೀರು ಹರಿಸುವ ಮುಖಾಂತರ ಮತ್ತೊಮ್ಮೆ ಜಿಲ್ಲೆಯ ಐತಿಹಾಸಿಕ ಕ್ಷಣ ಮರುಕಳಿಸುವಂತೆ ಮಾಡಿ ಎಂದರು. ಈ ವಿಷಯವಾಗಿ ವಿಶೇಷವಾಗಿ ರೈತ ಸಂಘಗಳು , ಸಂಘ ಸಂಸ್ಥೆಗಳು ಕಳೆದ ಒಂದು ವಾರಗಳ ಹಿಂದೆ ಸರ್ಕಾರಕ್ಕೆ ಒತ್ತಾಯಿಸಿದ್ದರು. ಜಿಲ್ಲೆಯ ರೈತರ ಆಶಯದಂತೆ ನೀರು ಹರಿದು ರೈತ ಮೊಗದಲ್ಲಿ ಸಂತಸ ಮನೆ ಮಾಡಲಿ ಎಂಬ ಉದ್ದೇಶದಿಂದ ಅಧಿಕಾರಿಗಳಿಗೆ ತಿಳಿಸಿದ್ದೇನೆ.

[t4b-ticker]

You May Also Like

More From Author

+ There are no comments

Add yours