ಬೆಳೆ ಹಾನಿ:ಜಿಲ್ಲೆಯ 77678 ರೈತ ಫಲಾನುಭವಿಗಳಿಗೆ ಪರಿಹಾರ

 

ಚಿತ್ರದುರ್ಗ,ಡಿಸೆಂಬರ್17:
ಚಿತ್ರದುರ್ಗ ಜಿಲ್ಲೆಯಲ್ಲಿ 2021-22ನೇ ಸಾಲಿನ ನವೆಂಬರ್ ಮಾಹೆಯಲ್ಲಿ ಬಿದ್ದಂತಹ ಹೆಚ್ಚಿನ ಮಳೆಯಿಂದಾಗಿ ಬೆಳೆಹಾನಿ ಆಗಿದ್ದು, ಬೆಳೆ ಹಾನಿಯ ಕುರಿತು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಕಾರ್ಯಯನ್ನು ಮುಗಿದಿದ್ದು ಜಿಲ್ಲೆಯ ರೈತರಿಗೆ 52 ಕೋಟಿಯಷ್ಟು ಹಣ ಅವರ ಖಾತೆಗೆ ಸಂದಾಯವಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ   ಎಸ್.ಮನ್ನಿಕೇರಿ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಶೇಂಗಾ ಬೆಳೆಯಲ್ಲಿ ಒಟ್ಟು 56119 ಹೆಕ್ಟೇರ್, ರಾಗಿ ಬೆಳೆಯಲ್ಲಿ 19030 ಹೆಕ್ಟೇರ್, ಕಡಲೆ ಬೆಳೆಯಲ್ಲಿ 15307 ಹೆಕ್ಟೇರ್, ಮೆಕ್ಕೆಜೋಳದಲ್ಲಿ 1979 ಹೆಕ್ಟೇರ್ ಹಾಗೂ ಇತರೆ ಬೆಳೆಗಳಲ್ಲಿ 870.40 ಹೆಕ್ಟೇರ್‍ಗಳಂತೆ ಒಟ್ಟು 93305.40 ಹೆಕ್ಟೇರ್‍ಗಳಷ್ಟು ಬೆಳೆಹಾನಿಯಾಗಿರುವುದು ವರದಿಯಾಗಿದೆ.
ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 02 ರಿಂದ 16 ರವರೆಗೆ ಒಟ್ಟು 13 ಹಂತಗಳಲ್ಲಿ ಚಿತ್ರದುರ್ಗ ಜಿಲ್ಲೆಯ 77678 ರೈತ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಮುಖಾಂತರ ಒಟ್ಟು ಮೊತ್ತ ರೂ. 520614275 ಹಣ ಬಿಡುಗಡೆಯಾಗಿರುತ್ತದೆ.
ಉಳಿದ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.
=====

[t4b-ticker]

You May Also Like

More From Author

+ There are no comments

Add yours