28 ಕೋಟಿ ವೆಚ್ಚದಲ್ಲಿ ಶಾಲೆಗಳ ಕಟ್ಟಡ ನಿರ್ಮಾಣ ಕಾಮಗಾರಿ: ಶಾಸಕ.ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ: 28 ಕೋಟಿ‌ ರೂಪಾಯಿ ವೆಚ್ಚದಲ್ಲಿ ಶಾಲಾ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಶಾಲೆಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು

ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಬರ್ಡ್ ಮತ್ತು ಆರ್ ಐಡಿಫ್, ಡಿಎಂಎಫ್ ಅನುದಾನದಡಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶಾಲಾ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತರೆ ದೇಶಕ್ಕೆ ಆಸ್ತಿಯಾಗುತ್ತಾರೆ. ತಂದೆ ತಾಯಂದಿರು ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದರೆ ಅದಕ್ಕಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ. ಸರ್ಕಾರಿ ಶಾಲೆಗಳಿಗೆ ಮಕ್ಕಳು ಹೆಚ್ಚು ಒಲವು ತೋರಬೇಕೆಂದರೆ ಕೊಠಡಿ ಮತ್ತು ಮೂಲಭೂತ ಸೌಲಭ್ಯಗಳು ಒದಗಿಸಿದರೆ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗಳ ಕಡೆಗೆ ಆಕರ್ಷಣೆ ಆಗುತ್ತಾರೆ. ಒಟ್ಟು ನನ್ನ ಕ್ಷೇತ್ರದಲ್ಲಿ 28 ಕೋಟಿ ವೆಚ್ಚದಲ್ಲಿ ನೂತನ ಕೊಠಡಿಗಳ ಕಾಮಗಾರೊ ನಡೆಯುತ್ತಿದ್ದು ಕೇಲವು ಕಟ್ಟಡ ಈಗಾಗಲೇ ಕಾಮಗಾರಿ ಮುಗಿದು ಉದ್ಘಾಟಿಸಲಾಗಿದೆ. ಇಂದು ಸಹ
ಉಪ್ಪಾನಾಯಕನಹಳ್ಳಿ 11 ಲಕ್ಷ, ಸೊಂಡೇಕೊಳ 22 ಲಕ್ಷ, ಗೊಡಬನಾಳ್22 ಲಕ್ಷ, ಆನ್ಯಾಳ್ 22 ಲಕ್ಷ, ಕಕ್ಕೆರು 22 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕಟ್ಟಡಗಳನ್ನು ಉದ್ಘಾಟಿಸಿದ್ದೇನೆ ಎಂದರು.

ಸೊಂಡೇಕೊಳ , ಉಪ್ಪನಾಯಕನಹಳ್ಳಿ, ನಂದಿಪುರ, ಓಬನಹಳ್ಳಿ ಇನ್ನು ಅನೇಕ ಹಳ್ಳಿಗಳ ವ್ಯಾಪ್ತಿಯಲ್ಲಿ ಸುಮಾರು 4 ಕೋಟಿ ವೆಚ್ಚದಲ್ಲಿ ಚಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ. ಎಲ್ಲಾ ಚಜ್ ಡ್ಯಾಂ ಗಳು ಕೋಡಿ ಬಿದ್ದಿದ್ದು ರೈತರ ಬೋರವೆಲ್ ಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದೆ.
ಈ ಭಾಗದ ರಸ್ತೆ ಕಾಮಗಾರಿಗೆ ಸುಮಾರು 12 ಕೋಟಿ ನೀಡಲಾಗಿದೆ. 8 ರಿಂದ 10 ಹಳ್ಳಿಗಳಿಗೆ ರಸ್ತೆಯ ಅನುಕೂಲವಾಗುತ್ತದೆ. ಇನ್ನು ಚಿಕ್ಕ ಪುಟ್ಟ ಒಳ ರಸ್ತೆಗಳು ಕೇಳಿದ್ದು ಮುಂದಿನ ದಿನಗಳಲ್ಲಿ ಹಣ ನೀಡುತ್ತೇನೆ.
ಸೊಂಡೇಕೊಳಕ್ಕೆ ಇನ್ನು 1 ಅಥವಾ 2 ಚಕ್ ಡ್ಯಾಂ ಹಾಕಿ ಕೊಡುತ್ತೇನೆ ಎಂದು ಭರವಸೆ ನೀಡಿದರು. ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರು ಊರಿನ ಅಭಿವೃದ್ಧಿ ವಿಷಯ ಬಂದಾಗ ಪಕ್ಷಬೇದ ಮರೆತು ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ಗ್ರಾಮ ಪಂಚಾಯತಿಯಲ್ಲಿ ಪಕ್ಷ ಇಲ್ಲ. ಯಾವ ಪಕ್ಷವನ್ನು ತರಬೇಡಿ. ಗ್ರಾಮದ ಸಮಸ್ಯೆ ಒತ್ತು ತಂದರೆ ಸದಾ ಸ್ಪಂದಿಸಲು ಸದಾ ನಾನು ಸಿದ್ದ ಎಂದು ಗ್ರಾಮ ಪಂಚಾಯತಿ ಸದಸ್ಯರಿಗೆ ಕಿತಿಮಾತು ಹೇಳಿದರು.

ರೈತರ ಹರ್ಷ : ಸೊಂಡೇಕೊಳ, ಉಪ್ಪನಾಯಕನಹಳ್ಳಿ, ನಂದಿಪುರ, ಓಬನಹಳ್ಳಿ ರೈತರು ಶಾಸಕರ ಬಳಿ ತಾವು ನಿರ್ಮಿಸಿದ ಚಜ್ ಡ್ಯಾಂ ನಿಂದ ಸಾವಿರಾರು ಬೋರವೆಲ್ ಗಳಿಗೆ ಅನುಕೂಲವಾಗಿದೆ. ನಾವು ಕನಿಷ್ಠ 3-4 ವರ್ಷ ಬೆಳೆ ಬೆಳೆದುಕೊಳ್ಳಲು ಅನುಕೂಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ‌ ಸಂದರ್ಭದಲ್ಲಿ ಸೊಂಡೇಕೊಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಉಷಾ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜಯಪ್ಪ, ಗ್ರಾ.ಪಂ ಸದಸ್ಯರುಗಳಾದ ಉಮೇಶ್, ಶಿವಣ್ಣ, ಯಲ್ಲಕ್ಕ, ಕಲ್ಲಪ್ಪ, ಸಂತೋಷ್ ಕುಮಾರ್, ಭಾರತಿ, ಓಬಮ್ಮ, ವಿಶಾಲಾಕ್ಷಮ್ಮ, ಮಧುಕುಮಾರ್, ಲಕ್ಷಮ್ಮ ಮುಖಂಡರುಗಳಾದ ಓಬೇನಹಳ್ಳಿ ಚಂದ್ರಪ್ರ, ರವಿಶಂಕರ್, ನಂದೀಪುರ ನಾಗರಾಜ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು..

[t4b-ticker]

You May Also Like

More From Author

+ There are no comments

Add yours