ಡಿ.20 ರಿಂದ 24ರವರೆಗೆ ಉತ್ತಮ ಆಡಳಿತ ವಾರ ಸಾರ್ವಜನಿಕ ಕುಂದುಕೊರತೆಗಳ ಇತ್ಯರ್ಥಕ್ಕೆ ವಿಶೇಷ ಕಾರ್ಯಕ್ರಮ

 

ಚಿತ್ರದುರ್ಗ, ಡಿಸೆಂಬರ್18:
ರಾಜ್ಯ ಸರ್ಕಾರದ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ನಿರ್ದೇಶನದಂತೆ ಡಿಸೆಂಬರ್ 20 ರಿಂದ 24 ರವರೆಗಿನ ಒಂದು ವಾರದ ಅವಧಿಯನ್ನು Good Governce week  (ಉತ್ತಮ ಆಡಳಿತ ವಾರ) ಎಂದು ಪರಿಗಣಿಸಲಾಗಿದೆ.
ಈ ಅವಧಿಯಲ್ಲಿ ಚಿತ್ರದುರ್ಗ ನಗರಸಭೆಗೆ ಸಂಬಂಧಿಸಿದಂತೆ ಸಾರ್ವಜನಿಕ ಕುಂದು ಕೊರತೆಗಳ ಮನವಿಯನ್ನು ಇತ್ಯರ್ಥ ಪಡಿಸುವ ವಿಶೇಷ ಕಾರ್ಯಕ್ರಮವನ್ನು ಚಿತ್ರದುರ್ಗ ನಗರಸಭಾ ಕಾರ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದೆ.
ವಿಶೇಷ ಕಾರ್ಯಕ್ರಮದ ಅಂಗವಾಗಿ ಆಸ್ತಿ ಮಾಲೀಕತ್ವ ವರ್ಗಾವಣೆ, ಇ-ಸ್ವತ್ತು, ಜನನ ಮರಣ ಪ್ರಮಾಣ ಪತ್ರ, ವ್ಯಾಪಾರ, ಉದ್ದಿಮೆ ಪರವಾನಿಗೆ ಸೇವೆ ಪಡೆಯಬಹುದಾಗಿದೆ. ಡಿಸೆಂಬರ್ 20ರಂದು ವಾರ್ಡ್ ನಂ. 01 ರಿಂದ 5, ಡಿ.21ರಂದು ವಾರ್ಡ್ ನಂ. 06 ರಿಂದ 10, ಡಿ.22ರಂದು ವಾರ್ಡ್ ನಂ. 11 ರಿಂದ 15,. ಡಿ.23ರಂದು ವಾರ್ಡ್ ನಂ.16 ರಿಂದ 25 ಹಾಗೂ ಡಿ.24ರಂದು ವಾರ್ಡ್‍ನಂ. 26 ರಿಂದ 35 ರವರೆಗೆ ಈ ದಿನಾಂಕಗಳಂದು ಸೇವೆಗಳನ್ನು ಪರಿಹರಿಸುವ ಕುರಿತು ನಿಯಮಾನುಸಾರ ಕ್ರಮವಹಿಸಲಾಗುವುದು.
ಸಾರ್ವಜನಿಕರು ಸೇವೆಗಳನ್ನು ಪಡೆಯಲು ನಗರಸಭೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ತಮ್ಮ ಸ್ವತ್ತಿನ ಸೂಕ್ತ ದಾಖಲಾತಿಗಳ ಪರಿಶೀಲನೆಯೊಂದಿಗೆ ಸೇವೆಯನ್ನು ಸ್ಥಳದಲ್ಲಿಯೇ ವಾರ್ಡ್‍ವಾರು ನಿಗಧಿಗೊಳಿಸಿದ ದಿನಾಂಕದಂದು ಹಾಗೂ ಹೊಸದಾಗಿ ಅರ್ಜಿಯನ್ನು ಸಲ್ಲಿಸಿ ಸೇವೆಯನ್ನು ಪಡೆಯಬಹುದಾಗಿದೆ ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
=====

[t4b-ticker]

You May Also Like

More From Author

+ There are no comments

Add yours