ಪೂರ್ಣಿಮಾಶ್ರೀನಿವಾಸ್ ಗೆ ಸಚಿವ ಸ್ಥಾನ ನೀಡದಿದ್ದರೇ ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜು.

 

ಪೂರ್ಣಿಮಾಶ್ರೀನಿವಾಸ್ ಗೆ ಸಚಿವ ಸ್ಥಾನ ನೀಡದಿದ್ದರೇ ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜು.

ಚಳ್ಳಕೆರೆ-05 ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿರುವ ಗೊಲ್ಲ ಸಮುದಾಯಕ್ಕೆ ಸಚಿವ ಸ್ಥಾನ ನೀಡದ ರಾಜ್ಯ ಸರ್ಕಾರದ ವಿರುದ್ದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಯಾದವ ಸಂಘದ ಮಾಜಿ ಅಧ್ಯಕ್ಷ, ಮುಖಂಡ ಬಿ.ವಿ..ಸಿರಿಯಣ್ಣ ಹೇಳಿದರು.
ಅವರು ನಗರದ ಯಾದವರ ಹಾಸ್ಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಗೊಲ್ಲ ಸಮುದಾಯದ ಏಕೈಮಹಿಳೆ ಪೂರ್ಣಿಮಾ ಶ್ರೀನಿವಾಸರವರಿಗೆ ಸಚಿವ ಸ್ಥಾನ ನೀಡುವುದಾಗಿ ಕರೆಸಿ, ನೀಡದೆ ಅವಮಾನ ಮಾಡಿದ ಬಿಜೆಪಿ ಸರ್ಕಾರಕ್ಕೆ ಸಮುದಾಯ ತಕ್ಕ ಪಾಠಕಲಿಸಲಿದೆ. ಮುಂದಿನಗಳಲ್ಲಿ ರಾಜ್ಯಾದ್ಯಂತ ಸಮುದಾಯದ ಎಲ್ಲೂರೂ ಬೃಹತ್ ಪ್ರತಿಭಟನೆ ಮೂಲಕ ತಕ್ಕ ಉತ್ತರ ನೀಡುತ್ತೇವೆ. ರಾಜ್ಯ ಸರ್ಕಾರ ಕಳೆದ ಅವಧಿಯಲ್ಲೂ ಸಚಿನ ಸ್ಥಾನ ನೀಡದೆ ಅನ್ಯಾಯ ಮಾಡಿದೆ. ಆದರೆ ಈ ಭಾರಿ ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಪೋನ್ ಮಾಡಿ ಅವರು ಬೆಂಗಳೂರಿನ ವಿಧಾನಸೌದಕ್ಕೆ ಹೋದ ಮೇಲೆ ಬದಲಾವಣೆ ಮಾಡಿರುವುದು ಖಂಡನೀಯ. ಈ ಬಗ್ಗೆ ಸಮುದಾಯಕ್ಕೆ ಅಪಮಾನ ಮಾಡಿದಂತಾಗಿದೆ ಎಂದರು.
ಮುಖಂಡ ಹಟ್ಟಿರುದ್ರಪ್ಪ ಮಾತನಾಡಿ, ಸಮುದಾಯ ರಾಜ್ಯ ಸರ್ಕಾರಕ್ಕೆ ಹಲವಾರು ರೀತಿಯಲ್ಲಿ ಬೆನ್ನ ಹಿಂದೆ ನಿಂತಿದೆ ಇಂತಹ ಸಮುದಾಯವನ್ನು ನಿರ್ಲಕ್ಷಿಸಿದ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ. ಪೂರ್ಣಿಮಾ ಶ್ರೀನಿವಾಸ ಗೆ ಸಚಿವ ಸ್ಥಾನ ನೀಡುವವರೆಗೂ ನಮ್ಮ ಹೋರಾಟ ನಡೆಸುತ್ತೇವೆ. ನಾಳೆಯಿಂದಲೇ ವಿವಿಧ ರೀತಿಯ ಪ್ರತಿಭಟನೆ ಪ್ರಾರಂಭಕ್ಕೆ ಎಲ್ಲಾರೀತಿಯ ಸಿದ್ದತೆ ಮಾಡಿಕೊಳ್ಳಲಾಗುವುದು ಎಂದರು.
ಜಿ.ಕೆ.ವೀರಣ್ಣ, ಬಂಜಿಗೆರೆ ಮಂಜುನಾಥ, ಎಚ್.ಮಹಲಿಂಗಪ್ಪ, ಇಂಡಸ್ ವ್ಯಾಲಿ ಚಿಕ್ಕಣ್ಣ, ಕಾಟಪ್ಪನಹಟ್ಟಿ ವೀರೇಶ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಮಹಲಿಂಗಪ್ಪ, ಶಿವಣ್ಣ , ಹೊಟ್ಟೆಪ್ಪನಹಳ್ಳಿ ಶ್ರೀನಿವಾಸ್, ಗುಂಡಪ್ಪ, ಶೇಖರಪ್ಪ, ಅಜ್ಜಣ್ಣ, ವೀರಭದ್ರಪ್ಪ, ಶಿವಣ್ಣ, ಮೀರಸಾಬಿಹಳ್ಳಿ ಶಶಿಧರ್, ರಂಗನಾಥ್, ಕ್ಯಾತಣ್ಣ, ಮುಂತಾದವರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours