ನಾಯಕ ಜನಾಂಗದ ಮತ ಮಾತ್ರ ಬಿಜೆಪಿಗೆ ಬೇಕು, ಅಧಿಕಾರ ಒಕ್ಕಲಿಗ, ಲಿಂಗಾಯತರಿಗೆ ಸದ್ದಿಲ್ಲದೆ ಇಡೀ ನಾಯಕ ಸಮಾಜ ತುಳಿಯುವ ಷಡ್ಯಂತ್ರ

 

ವಿಶೇಷ ವರದಿ:

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಎರಡು ವರ್ಷ ಪೂರೈಸಿದರು ಸಹ ಸುಳ್ಖಿನ ಚಾಳಿ ಬಿಟ್ಟಿಲ್ಲ. ಸರ್ಕಾರ ರಚನೆ ಮುನ್ನ ಚುನಾವಣಾ ಸಂದರ್ಭದಲ್ಲಿ 7.5% ಭರವಸೆಯನ್ನು ನೀಡುತ್ತೇವೆ ಹಾಗೂ ನಾಯಕ ಸಮಜದ ಶ್ರೀರಾಮುಲು ಅವರಿಗೆ   ಡಿಸಿಎಂ ನೀಡುತ್ತೇವೆ ಎಂಬ ಮಾತುಗಳಾಡಿ ರಾಜ್ಯದ್ಯಾದ್ಯಂತ ರಾಮುಲು ಪ್ರಚಾರ ಮಾಡಿ ನಾಯಕ ಸಮಾಜದ ಮತಗಳನ್ನು ಪಡೆದು ಇಂದು ನಾಯಕ ಸಮಾಜಕ್ಕೆ ವಂಚಿಸುವ ಕೆಲಸ ಆಗಿದೆ ಇಂಗಳದಾಳ  ನಾಯಕ  ಸಮಾಜದ ಮುಖಂಡ ಬಿ.ಅಶೋಕ  ಖಂಡಿಸಿದ್ದಾರೆ.

ನಾಯಕ ಸಮಾಜದ ಶ್ರೀರಾಮುಲು ಅವರನ್ನು ಸರ್ಕಾರ ರಚನೆ ಸಮಯದಲ್ಲಿ ಡಿಸಿಎಂ ಮಾಡಬೇಕಿದ್ದರು ಸಹ ಸೋತವರಿಗೆ  ಡಿಸಿಎಂ ನೀಡಿ ನಾಯಕ ಸಮಾಜಕ್ಕೆ ಅವಮಾನ ಮಾಡಿತ್ತು. ಆದರೆ ತಾಳ್ಮೆಯಿಂದ ಸಮಾಜ ಮುಂದಿನ ದಿನಗಳಲ್ಲಿ ಕಾದು ನೋಡುವ ಅವಕಾಶ ಕೊಡಬಹುದು ಎಂದು ಕಾದು 2 ವರ್ಷ ಕಳೆದರು ಸಹ  ಮತ್ತೆ ಡಿಸಿಎಂ ಸ್ಥಾನ ನೀಡದೆ ಪರ ಜಾತಿ ಲೆಕ್ಕಚಾರ ಸರಿಯಗಿಲ್ಲವೆಂದು ಈ ಬಾರಿ ಡಿಸಿಎಂ ಗಳನ್ನು ಮಾಡದೇ ನಾಯಕ ಸಮಾಜಕ್ಕೆ‌ಅನ್ಯಾಯ ಮಾಡಿದೆ. ಒಂದು ರೀತಿಯಲ್ಲಿ ನಾಯಕ ಸಮಾಜದ ಅವನತಿಗೆ ಬಿಜೆಪಿ ಟೊಂಕ್ ಕಟ್ಟಿ ನಿಂತಿದೆ. ಅನೇಕ ಸರ್ಕಾರಗಳಲ್ಲಿ ಸೆಕ್ಸ್ , ಸಿಡಿ ಪ್ರಕರಣಗಳಲ್ಲಿ ಮೇಲ್ಜಾತಿಯವರು ಮಾಡಿದ ಆರೋಪಗಳಿಗೆ ಸರ್ಕಾರ ಕ್ಲಿನ್ ಚಿಟ್ ನೀಡುತ್ತೆ. ನಾಯಕ ಸಮಾಜ ಮತ್ತು ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಪಾತ್ರ ವಹಿಸಿದ ರಮೇಶ್ ಪ್ರಕರಣವನ್ನು ಅದಷ್ಟು ಶೀಫ್ರವಾಗಿ ತಿರ್ಮಾನ ಮಾಡದ ಮೀನಮೇಷ ಏಣಿಸುತ್ತಿದೆ ಏಕೆಂದರೆ ಸಚಿವ ಸ್ಥಾನ ನೀಡಬೇಕಾಗುತ್ತದೆ ಎಂಬುದು ಎಲ್ಲಾರಿಗೂ ತಿಳಿದಿರಲಿ. ಎಲ್ಲಾಸ ಸರ್ಕಾರಗಳಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆ ಒಂದೇ ಆಗಿ ಒಬ್ಬರ ಬಳಿ ಇರುತ್ತದೆ. ಆದರೆ ಶ್ರೀರಾಮುಲು ಬಳಿ ಇದ್ದ ಖಾತೆ ವಾಪಸ್ಸು ಪಡೆದು ಹಿನ್ನಡೆ ಜೊತೆಗೆ ಅವಮಾನ ಮಾಡಿದ ಬಿಜೆಪಿಗೆ ತಕ್ಕ ಶಾಸ್ತಿ ಮಾಡಬೇಕಿದೆ. ಜಾರಕಿಹೊಳಿ ಕುಟುಂಬಕ್ಕೆ ಮಂತ್ರಿ ಸ್ಥಾನ ನೀಡದೆ ಆ ಭಾಗದಲ್ಲಿ ಬಲಿಷ್ಠ ನಾಯಕ ಸಮಾಜದ ಕುಟುಂಬಕ್ಕೆ ಅವಕಾಶ ನೀಡದೆ ತುಳಿಯಲು ಯತ್ನಿಸುತ್ತಿದೆ.

ಒಕ್ಕಲಿಗರಿಗೆ 7 ,ಲಿಂಗಾಯತರಿಗೆ 8: ರಾಜ್ಯದಲ್ಲಿ ಮೈಸೂರು, ಮಂಡ್ಯ, ಹಾಸನ,ತುಮಕೂರು, ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್ ಪಕ್ಷ ಮತ್ತು ಒಕ್ಕಲಿಗರು ಬಲಿಷ್ಠವಾಗಿದ್ದಾರೆ. 5-6 ಜಿಲ್ಲೆಗಳಲ್ಲಿ ಒಕ್ಕಲಿಗರು ಪಾರುಪತ್ಯ ಸಾಧಿಸಿದ್ದಾರೆ. ಉತ್ತರ ಕರ್ನಾಟಕ ಜೊತೆಗೆ ಅದಷ್ಟು ಲಿಂಗಾಯಿತರು ತಮ್ಮ ಹಿಡಿದ ಹೊಂದಿದ್ದಾರೆ. ಇವರಿಗೆ 7-8 ಸಚಿವ ಸ್ಥಾನ ಇಡೀ ರಾಜ್ಯದಲ್ಲಿ ನಾಲ್ಕನೇ ಅತಿ ದೊಡ್ಡ ಸಮುದಾಯದಲ್ಲಿ ನಾಯಕ ಸಮಾಜ ನಿಲ್ಲುತ್ತಿದ್ದು  ಇವರಿಗೆ ಕೇವಲ 1 ಸಚಿವ ಸ್ಥಾನ ನೀಡಿದೆ. ಡಿಸಿಎಂ ನೀಡದೇ ಅವಮಾನ ಮಾಡಿದ್ದಾರೆ.  ರಾಜ್ಯದಲ್ಲಿ ,3 ಸ್ಥಾನಗಳನ್ನು ನಾಯಕ ಸಮಾಜಕ್ಕೆ ನೀಡದೆ ಅವಮಾನ ಮಾಡಿದೆ ಎಂಬ ಮಾತು ಸಮಾಜದ ವಲಯದಲ್ಲಿ ಮೊಳಗುತ್ತಿದೆ. ಹಾಗಾದರೆ ನಾಯಕ ಸಮಾಜದ ಮತ ಬಿಜೆಪಿಗೆ ಬೇಡ. ಲಿಂಗಾಯತ , ಒಕ್ಕಲಿಗರ ಮತಕ್ಕೆ ಮಣೆಯಾಕಿದರೆ ಸಂಪೂರ್ಣವಾಗಿ ನಾಯಕ ಸಮಾಜ ಬಿಜೆಪಿ ಮತ ಹಾಕದಂತೆ ಶಪಥ ಮಾಡಿ ಬಿಜೆಪಿಗೆ ಬುದ್ದಿ ಕಲಿಸಿದರೆ ಮಾತ್ರ ಸಮಾಜದ ಮಾತನ್ನು ಸರ್ಕಾರಗಳು ಕೇಳುತ್ತವೆ. ಸಮಾಜಕ್ಕೆ ಅನ್ಯಾಯವಾದರು ಸಹ ಸಮಾಜದವರು ಮಲಗಿದಂತೆ ಕಾಣುತ್ತಿದೆ. ಒಕ್ಕಲಿಗರ ಮತಗಳು ಜೆಡಿಎಸ್ ದೇವೇಗೌಡರ ಪರವಾಗಿದೆ. ಆದರೆ ಬಿಜೆಪಿ ಆ ಸಮಾಜಕ್ಕೆ 7 ಸಚಿವ ಸ್ಥಾನ ನೀಡಿದೆ. 10 ಬಿಜೆಪಿ ಶಾಸಕರಿರುವ ಜನಾಂಗಕ್ಕೆ  ಒಂದು ನೀಡಿದೆ ಅದು ಜಿಲ್ಲಾ ಕೋಟ, ರಾಜ್ಯ ಕೋಟ, ಜನಾಂಗ ಕೋಟ ನೀಡಿ ಸಮಾಜ ಕಣ್ಣೊರಿಸುವುದಕ್ಕೆ  ಸಚಿವಾಲಯ ಸಾಕಲ್ವ. ಸಮಾಜ ಇದೇ ರೀತಿಯಲ್ಲಿ ಹೋದರೆ ಕಾಲ. ಕಸವಾಗಿ ತುಳಿದು ಸಮಾಜಕ್ಕೆ ನೆಲೆ ಇಲ್ಲದಂತೆ ಮಾಡುವುದರಲ್ಲಿ ಎರಡು ಮಾತಿಲ್ಲ ಎಂಬುದನ್ನು ಅರಿತು ಹೆಜ್ಜೆ ಹಾಕಿದರೆ ಒಳಿತು. ಈ ಸಂದರ್ಭದಲ್ಲಿ ಜಿ. ತಿಪ್ಪೇಸ್ವಾಮಿ, ಜಿ.ಟಿ.ಓಬಣ್ಣ, ಜಿ.ಟಿ.ನಾಗರಾಜ್,  ಹನುಮಣ್ಣ, ಪಾಲಯ್ಯ ಇದ್ದರು.

[t4b-ticker]

You May Also Like

More From Author

+ There are no comments

Add yours