ಜಾತಿ ಲೆಕ್ಕಚಾರದಲ್ಲಿ ಜಾತ್ಯತೀತ ನಾಯಕ ಶಾಸಕ ತಿಪ್ಪಾರೆಡ್ಡಿ ಮರೆತ ಬಿಜೆಪಿ

 

ವಿಶೇಷ ವರದಿ:  ಚಿತ್ರದುರ್ಗ  ಶಾಸಕ  ಜಿ.ಹೆಚ್.ತಿಪ್ಪಾರೆಡ್ಡಿ ಎಂದ ಕೂಡಲೇ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಚಾಣಕ್ಯ ರಾಜಕಾರಣಿ ಎಂದು ಜನ ಹೇಳುತ್ತಾರೆ. ಇಂದು ನಡದ ಸಚಿವ ಸಂಪುಟ ವಿಸ್ತರಣೆಯಲ್ಲಿ ಪಕ್ಕ  ತಿಪ್ಪಾರೆಡ್ಡಿ ಅವರು ಮಂತ್ರಿ ಸ್ಥಾನ ಎಂದು ಹೇಳಲಾಗುತ್ತಿತ್ತು. ಆದರೆ ಮಂತ್ರಿ ಸ್ಥಾನ ಕೈ ತಪ್ಪಿದ್ದು‌ ಶಾಸಕ ತಿಪ್ಪಾರೆಡ್ಡಿ ಅವರು ಮಾತ್ರ ಸಾಕಷ್ಟು ಬೇಸರ ಹೊರಹಾಕಿದ್ದಾರೆ. ತಮ್ಮ ಜೀವನದ ಉದ್ದಕ್ಕೂ ಜಾತ್ಯತೀತ ಮತ್ತು ಹಿಂದುಳಿತ ಜನಾಂಗದ ನಾಯಕರಾಗಿ ಹೊರಹೊಮ್ಮಿ  ಬಡವರ ಕಲ್ಯಾಣಕ್ಕೆ ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಗಳ ನಾಯಕರಾಗಿ ಇವರ ಪರ ಧ್ವನಿಯಾಗಿದ್ದರು.  ಜಾತಿ ರಾಜಕಾರಣದಲ್ಲಿ ತಿಪ್ಪಾರೆಡ್ಡಿ ಅವರು ಇಂದು ಮಂತ್ರಿ ಸ್ಥಾನ ಕೈ ತಪ್ಪಿದೆ.  ಜಿಲ್ಲೆಯಲ್ಲಿ ಕಳೆದ ವಿಧಾನಸಭೆಯಲ್ಲಿ   ಬಿಜೆಪಿಯಲ್ಲಿ ಕೇವಲ ಒಬ್ಬ ಬಿಜೆಪಿ ಶಾಸಕ ಅದು ತಿಪ್ಪಾರೆಡ್ಡಿ ಅವರು ಆಗಿ ಪಕ್ಷ ಕಟ್ಟಿದ್ದರು. ಜಿಲ್ಲಾ ಪಂಚಾಯತ ಸ್ಥಾನ ಮತ್ತು ತಾಲೂಕು ಪಂಚಾಯಿತಿಯಲ್ಲಿ ಹೆಚ್ಚು ಕಮಲ ಕಲಿಗಳು ಹಾರಿಸುವಲ್ಲಿ ಶಾಸಕರ ಶ್ರಮವಿತ್ತು. ಆದರೆ ಇಂದು ಬಿಜೆಪಿ ಬಾವುಟ ಹಾರಿಸಿದ ತಿಪ್ಪಾರೆಡ್ಡಿ ಪಕ್ಷ ನಿಷ್ಠೆಗೆ ಮತ್ತು ಹಿರಿತನಕ್ಕೆ  ಸ್ಥಾನ ನೀಡದೆ ಜಿಲ್ಲೆಗೆ ಮಂತ್ರಿ ನೀಡದೆ ಕೇವಲ ಲಿಂಗಾಯತ, ಒಕ್ಕಲಿಗ ಶಾಸಕರಿಗೆ ಮಣೆ ಹಾಕಿ ಜಾತ್ಯತೀತ ಎಲ್ಲಾ ವರ್ಗಕ್ಕೆ ನ್ಯಾಯ ಎಂಬ ಮಾತನಾಡುವ ಬಿಜೆಪಿ ಇಂದು ಜಾತಿ ಪ್ರೀತಿಯಲ್ಲಿ ಮುಳುಗಿ ಸಾಮಾಜಿಕ ನ್ಯಾಯ ಮರೆತು ವೋಟ್ ಬ್ಯಾಂಕ್ ರಾಜಕಾರಣಕ್ಕೆ ನಾಂದಿಯಾಡಿದ್ದು ತಿಪ್ಪಾರೆಡ್ಡಿ ಅವರ ಮುಂದಿನ ನಡೆ ಕೂತುಹಲ ಮೂಡಿದ್ದು ಶಾಸಕರ ಆಭಿಮಾನಿಗಳು ಮಾತ್ರ ತೀವ್ರ ನಿರಾಸೆ  ಜೊತೆಗೆ ನಿಗಿನಿಗಿ ಕೆಂಡಾವಾಗಿದ್ದಾರೆ.

 

[t4b-ticker]

You May Also Like

More From Author

+ There are no comments

Add yours