ಧರ್ಮಸ್ಥಳ ಸಂಸ್ಥೆ ವತಿಯಿಂದ 60 ಜನ ಪೋಲಿಸ್ ಸಿಬ್ಬಂದಿಗಳಿಗೆ ಮಾಸ್ಕ್, ಸ್ಯಾನಿಟೇಸರ್, ಜೀನಿ ಪೌಡರ್ ವಿತರಣೆ

 

ಹೊಸದುರ್ಗ : ಕೋರೊನಾ ಸಂದರ್ಭದಲ್ಲಿ ಫ್ರಂಟ್ ಲೈನ್ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಹೊಸದುರ್ಗ ತಾಲೂಕಿನ    ಪೊಲೀಸ್ ಸಿಬ್ಬಂದಿಗಳಿಗೆ ತಾಲ್ಲೂಕು ಧರ್ಮಸ್ಥಳ ಸಂಸ್ಥೆ ವತಿಯಿಂದ 60 ಮಂದಿಗೆ ಮಾಸ್ಕ್, ಸ್ಯಾನಿಟೇಸರ್, ಜೀನಿ ಪೌಡರ್ ಗಳನ್ನು ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ವಿತರಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ, ರಾಜ್ಯದಲ್ಲಿ ಕೋವಿಡ್ 19 ಮಹಾಮಾರಿಯಿಂದ ಜನರ ಜೀವನ ಅಸ್ತವ್ಯಸ್ತವಾಗಿದ್ದು, ಕೊರೋನಾ ಮಹಾಮಾರಿಯನ್ನು ತಡೆಗಟ್ಟಲು ಕರ್ನಾಟಕ ಸರ್ಕಾರ ಲಾಕ್ ಡೌನ್ ಜಾರಿ ಮಾಡಿದೆ.

ಇಂತಹ ಸಂದರ್ಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ.ಡಿ ವೀರೇಂದ್ರ ಹೆಗ್ಗಡೆ ಅವರು ಗ್ರಾಮೀಣ ಭಾಗದಲ್ಲಿ ಜೀವನ ನಡಸಲು ಅಸಾಧ್ಯ ಪರಿಸ್ಥಿತಿಯಲಿರುವ ನಿರ್ಗತಿಕರಿಗೆ ಪ್ರತಿ ತಿಂಗಳು ನೀಡಲಾಗುವ ಮಾಸಾಶನವನ್ನು ಸ್ಥಳೀಯ ಕಾರ್ಯಕರ್ತರ ಮೂಲಕ ತಲುಪಿಸುತ್ತಿದ್ದಾರೆ ಹಾಗೂ ರಾಜ್ಯದಲ್ಲಿ ದೈನಂದಿನ ಜೀವನ ನಡಸಲು ಕಷ್ಟದಲ್ಲಿ ಇರುವ ಕುಟಂಬಗಳಿಗೆ ಆಹಾರದ ಕಿಟ್ ಗಳನ್ನು ನೀಡುವ ಕಾರ್ಯ ಇಂದಿಗೂ ಪ್ರಗತಿಯಲ್ಲಿದೆ ಎಂದರು.

ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಕೊರೋನಾ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಸಹಾಯವಾಗಲೆಂದು ಅರೋಗ್ಯ ರಕ್ಷಣಗೆ ರಾಜ್ಯಾದ್ಯಂತ 300 ಆಕ್ಷಿಜನ್ ಕಾನ್ಸಟೇಟರ್, 20 ಮೆಡಿಕಲ್ ವೆಂಟಿಲೇಟರ್, 10 ಆಕ್ಸಿಜೆನ್ ಹೈಫ್ಲೋ ಮೆಷಿನ್ ಗಳನ್ನೂ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಕ್ಷೇತ್ರದ ಮೂಲಕ ನೀಡಿರುತ್ತಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಿಎಸ್ಐ ಶಿವಕುಮಾರ್ ಸಂಸ್ಥೆಯನ್ನು ಗೌರವಿಸಿದರು. ಎಸ್.ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಎಸ್. ಕಲ್ಮಠ, ಅಶೋಕ್ ಕುಮಾರ್, ಬಿಪಿ ಓಂಕಾರಪ್ಪ, ತಾಲೂಕು ಯೋಜನಾಧಿಕಾರಿ ಮೋಹನ್, ತಾಲೂಕು ಕೃಷಿ ಮೇಲ್ವಿಚಾರಕ ಮೋಹನ್ ಹಾಗೂ ವಲಯ ಮೇಲ್ವಿಚಾರಕರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours