ಹೊಸದುರ್ಗ ಶ್ರೀ ಕನಕ ನೌಕರರ ಸಾಂಸ್ಕೃತಿಕ ಸಂಘದಿಂದ ಸರ್ಕಾರಿ ಆಸ್ಪತ್ರೆಗೆ ದೇಣಿಗೆ

 

 

ಹೊಸದುರ್ಗ : ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗೆ ಅಗತ್ಯವಾದ ಸುಮಾರು 69 ಸಾವಿರ ಮೌಲ್ಯದ 2 ವಾಟರ್ ಫಿಲ್ಟರ್ ಹಾಗೂ ಔಷಧಿ ಕಿಟ್ ಗಳನ್ನು ಶ್ರೀ ಕನಕ ನೌಕರರ ಸಾಂಸ್ಕೃತಿಕ ಸಂಘದ ವತಿಯಿಂದ ಇಲ್ಲಿನ ಆರೋಗ್ಯಾಧಿಕಾರಿ ಚಂದ್ರಶೇಖರ್ ಕಂಬಾಳಿ ಮಠ ಅವರಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮ ನೇತೃತ್ವ ವಹಿಸಿ ಮಾತನಾಡಿದ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ಕೋವಿಡ್ -19 ನಿಂದ ಇಡೀ ನಾಡೇ ತತ್ತರಿಸಿ ಹೋಗಿದೆ. ನನ್ನ ತಾಲ್ಲೂಕಿನಲ್ಲಿ ಕೂಡ ಈ ಸೋಂಕಿನಿಂದ ಹಲವಾರು ಮಂದಿ ಪ್ರಾಣ ತೆತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೊಂಕಿತರಿಗೆ ಅತ್ಯವಶ್ಯಕವಾದ ಔಷಧಿ ಕಿಟ್ ಗಳನ್ನು, ಶುದ್ಧ ನೀರು, ತಂಪು ನೀರು ಹಾಗೂ ಬಿಸಿನೀರು ಬರುವ ವಾಟರ್ ಫಿಲ್ಟರ್ ನ್ನೂ ಇಂದು ಸರ್ಕಾರಿ ಆಸ್ಪತ್ರೆಗೆ ನೀಡಿದ್ದೇವೆ ಎಂದರು.

ಆಕ್ಸಿಜನ್ ಕೊರತೆ ಇದ್ದಾಗ ಹಲವಾರು ದಾನಿಗಳು, ಸಂಘಸಂಸ್ಥೆಗಳು ಮುಂದೆ ಬಂದು ಸಾಕಷ್ಟು ಸಂಖ್ಯೆಯಲ್ಲಿ ನೆರವು ನೀಡುತ್ತಿರುವುದು ಸಂತಸದ ವಿಚಾರ. ನಾವು ಕೂಡ ವೈಯಕ್ತಿಕವಾಗಿ ತಾಲ್ಲೂಕಿನ ಬೆಲಗೂರು ಆಸ್ಪತ್ರೆಗೆ 1 ಲಕ್ಷ ಮೌಲ್ಯದ ಆಕ್ಸಿಜನ್ ಸಿಲೆಂಡರ್ ಮತ್ತು ಜಂಬೂ ಸಿಲೆಂಡರ್ ಕೊಡಿಸಿದ್ದು ನಮ್ಮ ಸಹಾಯ ಇಲ್ಲಿಗೆ ನಿಲ್ಲುವುದಿಲ್ಲ. ನಾವು ಸೊಂಕಿತರ ಪರವಾಗಿ ನಿಲ್ಲಲು ಸಿದ್ಧರಿದ್ದೇವೆ. ತಾಲ್ಲೂಕಿನ ಜನತೆ 3 ನೇ ಅಲೆ ಬರುವುದರೊಳಗೆ ಜಾಗೃತರಾಗಿ ಈ ಮಹಾಮಾರಿ ಕೋರೋನಾವನ್ನು ಹಿಮ್ಮೆಟ್ಟಿಸಬೇಕು ಎಂದರು.

ಆರೋಗ್ಯಾಧಿಕಾರಿ ಚಂದ್ರಶೇಖರ್ ಕಂಬಾಳಿ ಮಠ ಮಾತನಾಡಿ ವೈದ್ಯರ ಸಲಹೆ ಮೇರೆಗೆ ಬಿಸಿನೀರು ಮತ್ತು ತಣ್ಣೀರಿನ ವಾಟರ್ ಫಿಲ್ಟರ್ ಹಾಗೂ ಔಷಧಿ ಕಿಟ್ ಗಳನ್ನು ನೀಡಿರುವುದು ರೋಗಿಗಳಿಗೆ ಉಪಯುಕ್ತವಾಗಲಿದೆ ಎಂದರು.

ಜಿ.ಪಂ ಮಾಜಿ ಸದಸ್ಯ ಡಾ.ಕೆ ಅನಂತ್ ಮಾತನಾಡಿ ಮೊದಲನೇ ಅಲೆಯಲ್ಲಿ ನಾನು ಅಧ್ಯಕ್ಷನಾಗಿದ್ದಾಗ ಕೋವಿಡ್ ಸೆಂಟರ್ ಗಳಿಗೆ ಮುನ್ನುಗ್ಗಿ ಹೋಗುತ್ತಿದ್ದೆ. ಆದರೆ ಎರಡನೇ ಅಲೆ ನನಗೆ ಗೊತ್ತಿಲ್ಲದೆ ಸೋಂಕು ತಗುಲಿ ತುಂಬಾ ನೋವು ಅನುಭವಿಸಿದೆ. ನಾವು ಎಷ್ಟೇ ಜಾಗೃತಿ ಆಗಿದ್ದರೂ ಅನುಭವಿಸುವವರಿಗೆ ಮಾತ್ರ ಗೊತ್ತಿದೆ. ಆದ್ದರಿಂದ ಪ್ರತಿಯೊಬ್ಬರು ಮಾಸ್ಕ್ ಸ್ಯಾನಿಟೈಸರ್ ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಕನಕ ನೌಕರರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶಾಂತಕುಮಾರ್, ಗೌರವಾಧ್ಯಕ್ಷ ಓರಗಲ್ಲಪ್ಪ, ಮುಖಂಡರಾದ ಆಗ್ರೋ ಶಿವಣ್ಣ, ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ನಾಗೇನಹಳ್ಳಿ ಮಂಜುನಾಥ್, ಶಾಂತಕುಮಾರ್, ಡಾ. ಸುನೀಲ್ ಮನೋಹರ್ ಹಾಗೂ ಇನ್ನಿತರರು ಇದ್ದರು.

[t4b-ticker]

You May Also Like

More From Author

+ There are no comments

Add yours