ಕವಿ ಸಿದ್ದಲಿಂಗಯ್ಯ ನಿಧನಕ್ಕೆ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಂತಾಪ

 

ಹೊಸದುರ್ಗ ; ಹಿರಿಯ ಕವಿ ಸಿದ್ದಲಿಂಗಯ್ಯನವರು ನಿಧನಕ್ಕೆ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

ತಾಲ್ಲೂಕಿನ ಸಾಣೇಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಸಿದ್ದಲಿಂಗಯ್ಯ ಅವರ ನಿಧನದ
ವಿಚಾರ ತಿಳಿದು ತುಂಬಾ ವೇದನೆಯಾಯಿತು. ಶ್ರೀಯುತರು ವಿದ್ಯಾರ್ಥಿಗಳ ಮೆಚ್ಚಿನ ಅಧ್ಯಾಪಕರಾಗಿದ್ದರು. ಅವರ ಕವನಗಳು ಒಂದು ಕಾಲದಲ್ಲಿ ದಲಿತ ಮತ್ತು ಬಂಡಾಯಗಾರ ಬಾಯಲ್ಲಿ ಮೂಡಿ ಬರುತ್ತಿದ್ದವು. ಇಕ್ರಲಾ, ಒದಿರಲಾ ಎನ್ನುವ ಹಾಡನ್ನು ಕೇಳದವರು ವಿರಳ. ಅವರ ಹೊಲೆಮಾದಿಗರ ಹಾಡು ಬಂಡಾಯದ ಧ್ವನಿಯನ್ನು ಇಡೀ ಕರ್ನಾಟಕ ತುಂಬಾ ಎಬ್ಬಿಸಿದ್ದವು. ಅವರು ತಮ್ಮ ಜೀವನದುದ್ದಕ್ಕೂ ದಲಿತರಿಗಾಗಿ ಮಿಡಿದವರು. ಶೋಷಿತ ಸಮುದಾಯದ ಧ್ವನಿಯಾಗಿದ್ದವರು. ಚಳುವಳಿಗಳಿಗೆ ಕ್ರಾಂತಿಗೀತೆಯನ್ನು ಬರೆದವರು. ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಹಿತಿಯ ಮನ್ನಣೆ ಗಳಿಸಿದವರು. ಶ್ರೀಯುತರು ಎರಡು ಸಲ ಎಮ್ ಎಲ್ ಸಿ ಆಗಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರ ಮತ್ತಿತರ ಅಕಾಡಮಿ ಅದ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದವರು. ನಮ್ಮ ಜೊತೆ ಅತ್ಯಂತ ಆತ್ಮೀಯ ಒಡನಾಟವಿಟ್ಟುಕೊಂಡಿದ್ದರು ಎಂದರು.

ಸಾಣೇಹಳ್ಳಿಯ ವಿವಿಧ ಕಾರ್ಯಕ್ರಮಗಳಿಗೆ ಆಗಮಿಸಿ ಸಂದರ್ಭೋಚಿತವಾಗಿ ಮಾತನಾಡಿದ್ದು ಈಗ ನೆನಪು ಮಾತ್ರ. ಅವರು ಹಲವಾರು ಪ್ರಸಸ್ತಿ ಪಡೆದಿದ್ದರು. ಸಾಹಿತ್ಯ ಸಮ್ಮೇಳನದ ಅದ್ಯಕ್ಷರಾಗಿದ್ದರು. ಅವರ ಊರು ಕೇರಿ ಆತ್ಮಕಥನ ಅವರ ಜನಾಂಗದ ಕತೆಯನ್ನು ತೆರೆದಿಡುವುದು. ಅಂಥವರು ಕೊರೋನಕ್ಕೆ ಬಲಿಯಾಗಿದ್ದು ತುಂಬಾ ನೋವಿನ ಸಂಗತಿ. ಅವರ ಅಗಲುವಿಕೆಯಿಂದ ಆಗಿರುವ ದುಖಃವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಬಸವಾದಿ ಶಿವಶರಣರು ಅನುಗ್ರಹಿಸಲಿ ಎಂದು ಹಾರೈಸುತ್ತೇವೆ.

[t4b-ticker]

You May Also Like

More From Author

+ There are no comments

Add yours