ಡಾ.ಪುನೀತ್ ರಾಜ್ ಕುಮಾರ್ ನಾಡು ಕಂಡ ಅಪರೂಪದ ವ್ಯಕ್ತಿ – ಟಿ.ಮಂಜುನಾಥ್

 

 

ಹೊಸದುರ್ಗ; ನಯವಿನಯ ಮಾನವೀಯತೆಯ ಮೌಲ್ಯಗಳನ್ನು ಬೆಳೆಸಿಕೊಂಡಿದ್ದ ಡಾ.ಪುನೀತ್ ರಾಜ್ ಕುಮಾರ್ ನಾಡು ಕಂಡ ಅಪರೂಪದ ವ್ಯಕ್ತಿ ಎಂದು ಸಮಾಜ ಸೇವಕ ಟಿ.ಮಂಜುನಾಥ್ ಹೇಳಿದರು.

ಪಟ್ಟಣದ ಕೆನರಾ ಬ್ಯಾಂಕ್ ಮುಂಭಾಗದಲ್ಲಿರುವ ಬಸವೇಶ್ವರ ವೃತ್ತದಲ್ಲಿ ಗುರುವಾರ ಆಯೋಜಿಸಲಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ ಕುಮಾರ್ ಹುಟ್ಟುಹಬ್ಬದ ಆಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಪುನೀತ್ ರಾಜಕುಮಾರ್ ಅವರು ನಗು ಸರಳತೆ ವಿನಯತೆ ಮರೆಯೋಕೆ ಸಾಧ್ಯವಿಲ್ಲ. ಪುನೀತ್ ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದರು. ಚಿಕ್ಕವಯಸ್ಸಿನಲ್ಲಿಯೇ ಚಿತ್ರರಂಗ ಪ್ರವೇಶಿಸಿದ ಅವರು ರಾಷ್ಟ್ರ ಪ್ರಶಸ್ತಿ ಪ್ರಶಸ್ತಿಯನ್ನು ಸಹ ಪಡೆದಿದ್ದರು. ಚಿತ್ರದ ಮೂಲಕ ನಾಯಕನಟನಾಗಿ ಹೊರಹೊಮ್ಮಿದ ಅವರು ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಅವರು ಸಮಾಜಕ್ಕೆ ಉಪಯುಕ್ತ ಸಂದೇಶವನ್ನು ನೀಡಿದ್ದಾರೆ ಎಂದರು.

ಪುನೀತ್ ರಾಜಕುಮಾರ್ ಅವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳ ಬೇಕಿದೆ. ಅವರ ಸೇವಾ ಗುಣವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಮಾಜ ಸೇವೆ ಮಾಡಿದ್ದಾರೆ ಎಂಬುದು ನಾವು ತಿಳಿದಿರಲಿಲ್ಲ. ಹಲವಾರು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದಾರೆ. ರಾಜಕುಮಾರ್ ಅವರ ಹಾದಿಯಲ್ಲಿಯೇ ಪುನೀತ್ ರಾಜಕುಮಾರ್ ಸಾರ್ವಜನಿಕ ಜೀವನದಲ್ಲಿ ಒಬ್ಬ ಉತ್ತಮ ನಾಗರಿಕನಾಗಿ ಬದುಕಿದ್ದರು. ಆದ್ದರಿಂದ ಅವರ ಆದರ್ಶಗಳಂತೆಯೇ ಕೈಲಾದಷ್ಟು ಬಡವರಿಗೆ ಸಹಾಯ ಮಾಡಬೇಕು. ಆಗ ಪುನೀತ್ ಅವರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಹೇಳಿದರು.

ಈ ವೇಳೆ ಡಾ.ಜಯರಾಂ ನಾಯಕ್, ಪುರಸಭಾ ಸದಸ್ಯ ರಾಮಚಂದ್ರಪ್ಪ, ಉದಾ ಮಂಜುನಾಥ್, ಮಾಜಿ ಪುರಸಭಾ ಸದಸ್ಯ ಕೆ.ಆರ್ ಪ್ರವೀಣ್ ಕುಮಾರ್, ಪವರ್ ಸ್ಟಾರ್ ಗೆಳೆಯರ ಬಳಗದ ಅಧ್ಯಕ್ಷ ಪ್ರಸನ್ನ (ಮೂಗ), ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಫಕ್ರುದ್ದೀನ್ , ಕಿಶೋರ್ ಸಿಂಗ್ , ನರಸಪ್ಪ , ಕಂಚೀಪುರ ಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು.

[t4b-ticker]

You May Also Like

More From Author

+ There are no comments

Add yours