ಬಾಗೂರಿನಲ್ಲಿ ಸಂಭ್ರಮದ ಶ್ರೀ ಚನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸವ

 

 

ಹೊಸದುರ್ಗ ; ತಾಲೂಕಿನ ಕಸಬಾ ಹೋಬಳಿಯ ಐತಿಹಾಸಿಕ ಬಾಗೂರು ಗ್ರಾಮದ ಶ್ರೀ ಪ್ರಸನ್ನ ಚನ್ನಕೇಶವಸ್ವಾಮಿ ಬ್ರಹ್ಮ ರಥೋತ್ಸವ ಗುರುವಾರ ಮಧ್ಯಾಹ್ನ ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಜರುಗಿತು.

ಪ್ಲವ ಸಂವತ್ಸರದ ಪುಬ್ಬ ನಕ್ಷತ್ರದಲ್ಲಿ ಮಧ್ಯಾಹ್ನ ನಡೆದ ರಥೋತ್ಸವಕೆ ಭಕ್ತರು ಶ್ರದ್ಧಾ ಭಕ್ತಿಯಿಂದ ಆಗಮಿಸಿ ಪುನೀತರಾದರು .ಕಳೆದ ಐದಾರು ದಿನಗಳಿಂದ ನಡೆಯುತ್ತಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಯಲ್ಲಿ ಇಂದು, ಹೂಗಳಿಂದ ಅಲಂಕರಿಸಲಾಗಿತ್ತು. ಅಲಂಕೃತ ರಥದಲ್ಲಿ ಶ್ರೀ ಪ್ರಸನ್ನ ಚನ್ನಕೇಶವಸ್ವಾಮಿ ಮೂರ್ತಿಯನ್ನು ಭಕ್ತರು ದರ್ಶನ ಮಾಡಿದರು.

ರಥೋತ್ಸವದಲ್ಲಿ ಅರ್ಚಕರಾದ ಹರೀಶ್ ಅಯ್ಯಂಗಾರ್ ಅವರ ಜೊತೆಗೂಡಿ ತಹಶೀಲ್ದಾರ್ ಮಲ್ಲಿಕಾರ್ಜುನ್ ಅವರು ಧಾರ್ಮಿಕ ಸಂಪ್ರದಾಯದ ಪ್ರಕಾರ ರಥೋತ್ಸವಕ್ಕೆ ಚಾಲನೆ ನೀಡಿದರು.

ಐತಿಹಾಸಿಕ ಪುರಾತನ ದೇಗುಲವಾದ ಶ್ರೀ ಪ್ರಸನ್ನ ಚನ್ನಕೇಶವಸ್ವಾಮಿ ರಥೋತ್ಸವ ದೇವರ ದರ್ಶನಕ್ಕೆ ಸುತ್ತಲು ಹಲವು ಹಳ್ಳಿಗಳಿಂದ ಆಗಮಿಸಿದ ಭಕ್ತರು ರಥವನ್ನು ಎಳೆದು ದೇವರ ದರ್ಶನ ಪಡೆದು ಕೃಪೆಗೆ ಪಾತ್ರರಾದರು.

ರಥೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಜಾನಪದ ಕಲಾ ಮೇಳಗಳು ಆಗಮಿಸಿ ಜನರನ್ನು ರಂಜಿಸಿದವು. ರೈತರ ಪಾನಕ ಗಾಡಿಗಳು ಬೇಸಿಗೆಯ ಬಿಸಿಲನ್ನು ಮರೆಸಿ ತಂಪಾದ ಪಾನಕವನ್ನು ಜನರಿಗೆ ನೀಡಲಾಯಿತು. ರಥೋತ್ಸವಕ್ಕೆ ಆಗಮಿಸಿದ ಸಕಲ ಭಕ್ತರಿಗೂ ದೇವಸ್ಥಾನದ ವತಿಯಿಂದ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಅರ್ಚಕರಾದ ಹರಿಶ್ ಅಯ್ಯಂಗಾರ್ , ನರೋತ್ತಮ ಭಟ್ಟರು , ನಾಡಿಗ್ ಮೂರ್ತಿ, ರಾಘವ ಭಟ್ಟರು ಅವರು ಸೇರಿದಂತೆ ದೇವರ ಸಂಪ್ರದಾಯಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಗ್ರಾಮ ಲೆಕ್ಕಾಧಿಕಾರಿ ದೇವಸ್ಥಾನದ ಆಡಳಿತಾಧಿಕಾರಿ ಲಕ್ಷ್ಮೀಕಾಂತ್, ಗ್ರಾ.ಪಂ.ಅಧ್ಯಕ್ಷ ಗಂಗಮ್ಮ, ಉಪಾಧ್ಯಕ್ಷ ಬಸವರಾಜ್ ಹಾಜರಿದ್ದರು.

 

[t4b-ticker]

You May Also Like

More From Author

+ There are no comments

Add yours