ಮದುವೆಯಾಗಿ ಒಂದೇ ತಿಂಗಳಿಗೆ ಡೈವೋರ್ಸ್ ಪ್ರಕರಣಗಳು ಹೆಚ್ಚುತ್ತಿವೆ- ಶಶಿಕಲಾ

 

 

ಹೊಸದುರ್ಗ; ಮದುವೆಯಾಗಿ ಒಂದು ತಿಂಗಳು ಕಳೆದಿರುವುದಿಲ್ಲ ಆಗಲೇ ಡೈವೋರ್ಸ್ ಗಾಗಿ ಕೋರ್ಟ್ ಕಟಕಟೆ ಮೆಟ್ಟಿಲೇರುವ ಪ್ರಕರಣಗಳು ಹೊಸದುರ್ಗದಲ್ಲಿ ಹೆಚ್ಚುತ್ತಿವೆ ಎಂದು ಜೆ.ಎಂ.ಎಫ್.ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕುಮಾರಿ ಶಶಿಕಲಾ ಹೇಳಿದರು.

ಪಟ್ಟಣದ ಎಸ್ ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯಲ್ಲಿ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೊಸದುರ್ಗದಲ್ಲಿ ಸಾಕಷ್ಟು ಡೈವೋರ್ಸ್ ಪ್ರಕರಣಗಳು ಬರುತ್ತಿದ್ದು, ಮದುವೆಯಾಗಿ ಒಂದು ತಿಂಗಳು ಕಳೆದಿರುವುದಿಲ್ಲ ಸಣ್ಣ-ಪುಟ್ಟ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಆಗಲೇ ಡೈವೋರ್ಸ್ ಅರ್ಜಿ ಹಾಕುತ್ತಿದ್ದರೆ. ಪತಿ ಪತ್ನಿಯರಲ್ಲಿ ಪರಸ್ಪರ ಹೊಂದಾಣಿಕೆ ಇರಬೇಕು. ಆದರೆ ದೃಶ್ಯ ಮಾಧ್ಯಮ ಮತ್ತು ಅತಿಯಾದ ಮೊಬೈಲ್ ಬಳಕೆಯಿಂದ ಪರಸ್ಪರ ಅನುಮಾನಗಳು ಮೂಡಿ ಡ್ರೈವರ್ಸ್ ತನಕ ಕೇಸ್ ಹೋಗುವ ಪ್ರಕರಣಗಳು ಸಾಕಷ್ಟು ಆಗುತ್ತಿವೆ ಎಂದು ಹೇಳಿದರು.

ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ ಎನ್ನುವಂತೆ ಯಾವುದೇ ಒಂದು ಹೆಣ್ಣು ಮನಸ್ಸು ಮಾಡಿದರೆ ಒಂದು ಕುಟುಂಬವನ್ನು ಬೆಳೆಸಲೂಬಹುದು, ಅಳಿಸಲೂಬಹುದು. ಇಂದು ಕಾನೂನಿನಲ್ಲಿ ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲಿಯೂ ಸಮಾನತೆ ಕಲ್ಪಿಸಲಾಗಿದೆ. ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಅಹಂನಿಂದ ಸುಖ ಸಂಸಾರ ಸಾಧ್ಯವಿಲ್ಲ ಎಂದರು.

ಕಾರ್ಯದರ್ಶಿ ಕೆ.ಎಸ್ ಕಲ್ಮಠ ಮಾತನಾಡಿ, ಮಕ್ಕಳ ಅಭಿವೃದ್ಧಿ, ದೇಶದ ಅಭಿವೃದ್ದಿ ವಿಚಾರವಾಗಿ ಬೆಳಸಬೇಕಾಗಿರುವುದು ಒಬ್ಬ ತಾಯಿ ಮಾತ್ರ. ಪ್ರತಿಯೊಂದು ಮಕ್ಕಳಲ್ಲಿ ಸಂಸ್ಕೃತಿ ಬೆಳೆಸಬೇಕು. ಸಾಮಾಜಿಕವಾಗಿ, ಕೌಟಂಬಿಕವಾಗಿ ಮಹಿಳೆಯರ ಕೆಲಸಗಳು ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ. ತಾಳ್ಮೆ ಎಂಬುದು ಮಹಿಳೆಯರಿಗೆ ಅತೀ ಮುಖ್ಯ. ಆದ್ದರಿಂದ ತಾಳ್ಮೆಗೆ ಹೆಚ್ಚು ಹೊತ್ತು ಕೊಟ್ಟು ಸಮಾಧಾನವಾಗಿ ಸಮಾಜವನ್ನು ಹೆಣ್ಣು ಬೆಳೆಸಬೇಕು ಎಂದರು.

ಈ ವೇಳೆ ವಿದ್ಯಾ ಸಂಸ್ಥೆಯ ಅಧ್ಯಕ್ಷ ‌ಎಂ.ಶಿವಲಿಂಗಪ್ಪ, ಆಡಳಿತ ಮಂಡಳಿಯ ಸದಸ್ಯೆ ಶ್ರೀಮತಿ ವಿಜಯ ಶಿವಲಿಂಗಪ್ಪ, ಶ್ರೀಮತಿ ವೀಣಾ ನಟರಾಜ, ಕಾರ್ಯದರ್ಶಿ ಜಿ.ಬಸವಲಿಂಗಪ್ಪ ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.

[t4b-ticker]

You May Also Like

More From Author

+ There are no comments

Add yours