ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಅಬ್ರಾಡ್ ಸಂಸ್ಥೆಯಿಂದ ಬಾಣಂತಿ ಮತ್ತು ಗರ್ಭಿಣಿಯರಿಗೆ ನಿತ್ಯ ದಾಸೋಹ.

 

ಚಿತ್ರದುರ್ಗ ಜಿಲ್ಲಾ   ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಅಬ್ರಾಡ್ ಸಂಸ್ಥೆವತಿಯಿಂದ (ಊಟ ವ್ಯವಸ್ಥೆ)
ಅನ್ನ ದಾಸೋಹ ಮಾಡಲಾಗಿತ್ತು.

ಚಿತ್ರದುರ್ಗ ಸರ್ಕಾರಿ ಅಸ್ಪತ್ರೆಯ ಆವರಣದಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಹಾಗೂ ಅವರ ಜೊತೆ ಬಂದಿರುವವರಿಗೆ ಅಬ್ರಾಡ್ ಟೀಮ್,ಭಾರತೀಯ ರೆಡ್ ಕ್ರಾಸ್ ಸಂಸ್ಥೆ,ರೋಟರಿ
,ಜೃೆನ್ ಸಂಘದ ವತಿಯಿಂದ ದಿನಾಂಕ 17-6-2021 ರಂದು ಸಂಜೆ 6 ಗಂಟೆಗೆ ರೂಪ ವಿಶ್ವನಾಥ್ ,ಸವಿತಾ ಮಲ್ಲಿಕಾರ್ಜುನ್ ಇವರ ನೇತೃತ್ವದಲ್ಲಿ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು.

ಹಸಿದವರ ಹೊಟ್ಟೆಗೆ ಅನ್ನ ಕೊಡಿ ತತ್ವದಡಿ ಕಾರ್ಯರೂಪಕ್ಕೆ ತಂದಿರುವ ಈ ಕಾರ್ಯಕ್ರಮ ಕೊರೋನಾ ವೃೆರಸ್ ಹಾವಳಿ ಶುರುವಾದನಿಂದಲೂ ನಿತ್ಯ ಊಟವನ್ನು ಉಚಿತವಾಗಿ ಹಂಚಲಾಗುತ್ತಿದೆ.

ನಿತ್ಯ ಊಟ ಹಂಚುವ ಕಾರ್ಯಕ್ರಮದ ಮುಂದಾಳತ್ವವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಮಂಡಳಿಯ ನಿರ್ದೇಶಕರಾದ  ಗಾಯಿತ್ರಿಶಿವರಾಂ ಮತ್ತು ಶಿವರಾಂ ದಂಪತಿಗಳು ನಿತ್ಯ ಕಾಯಕ ಎಂಬಂತೆ ಕಳೆದ 45 ದಿನಗಳಿಂದ ಮಾಡಿಕೊಂಡು ಬರುತ್ತಿದ್ದಾರೆ.

ಪ್ರತಿ ದಿನ ಸಂಜೆಯ ವೇಳೆಗೆ ಬಿಸಿ,ಬಿಸಿ ಊಟವೂ ಚಿತ್ರದುರ್ಗ ಸಮೀಪದ ಸಿಬಾರ ಬಳಿ ಇರುವ ವಿಶ್ವ ಮಾನವ ವಸತಿ ಶಾಲೆಯಲ್ಲಿ ತಯಾರಾಗಿ ಬರುತ್ತದೆ.
ಪ್ರತಿನಿತ್ಯ ಒಬ್ಬರಲ್ಲ ಒಬ್ಬರು ಜನರಿಗಾಗಿ ಊಟದ ವ್ಯವಸ್ಥೆಯನ್ನು ಮಾಡುವ ಮೂಲಕ ಪ್ರಮಾಣಿಕವಾಗಿ ಜನರಿಗೆ ಸಲ್ಲಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುತ್ತಿರುವುದು ವಿಶೇಷವೇ ಆಗಿದೆ!

ಊಟವನ್ನು ವಿತರಿಸುವ ವೇಳೆ ಜೃೆನ್ ಸಮಾಜ ಸಂಘಟನೆಯವರು ಸ್ವಯಂ ಪ್ರೇರಣೆಯಿಂದ ಊಟ ವಿತರಣೆಯ ಜವಾಬ್ದಾರಿಯನ್ನು ನಿಭಾಯಿಸುವ ಮುಖಾಂತರ ತಮಗೆ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತದೆ.

ಇದೇ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಜರ್,ನರೇನಹಳ್ಳಿ ಅರುಣ್ ಕುಮಾರ್,
ಪ್ರದೀಪ್ ಕುಮಾರ್ ಮುಂತಾದವರು ಹಾಜರಿದ್ದರು

[t4b-ticker]

You May Also Like

More From Author

+ There are no comments

Add yours