ಕೈಹಿಡಿದವರ ಕೈಬಿಟ್ಟರೇ ಮುಂದೆ ಪ್ರತಿಫಲ ಗೊತ್ತಗುತ್ತದೆ: ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

 

ಕೈಹಿಡಿದವರ ಕೈಬಿಟ್ಟರೇ ಮುಂದಿನ ದಿನಗಳಲ್ಲಿ ಅದರ ಪ್ರತಿಫಲ ಬಿಜೆಪಿ ಪಕ್ಷ ಅನುಭವಿಸಲಿದೆ ಎಂದು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.
ಭೋವಿಗುರುಪೀಠದಲ್ಲಿ ಬುಧವಾರ ಪತ್ರಿಕಾ ಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ೨೦೦೮ ರಲ್ಲಿ ಬಿಜೆಪಿಗೆ ಬಹುಮತ ಇಲ್ಲದೇ ಇದ್ದಾಗ ಪಕ್ಷೇತರವಾಗಿ ಗೆದ್ದ ಭೋವಿ ಸಮುದಾಯ ಶಾಸಕರು ಸರ್ಕಾರದ ರಚನೆ ಮಾಡಲು ಬಿಜೆಪಿ ಕೈಹಿಡಿದರು. ಬಿಜೆಪಿ ಉತ್ತರಭಾರಕ್ಕೆ ಅಷ್ಟೆ ಎನ್ನುವ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಕೈಹಿಡಿದ ಭೋವಿ ಸಮುದಾಯವನ್ನು ಪಕ್ಷ ಕೈಬಿಡುವುದರಿಂದ ಮುಂದಿನ ದಿನಗಳಲ್ಲಿ ಅದರ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಭೋವಿ ಸಮುದಾಯದ ನಾಲ್ವರು ವಿಧಾನಸಭಾ ಸದಸ್ಯರು ಹಾಗೂ ಒಬ್ಬರು ವಿಧಾನಪರಿಷತ್ ಸದಸ್ಯರು ಇದ್ದರು ಸಹ ಸಚಿವಸ್ಥಾನ ನೀಡಿಲ್ಲ. ಈ ಹಿಂದಿನ ಅವಧಿಯಲ್ಲಿ ೬ ತಿಂಗಳಷ್ಟೆ ಒಬ್ಬರಿಗೆ ಸಚಿವಸ್ಥಾನ ನೀಡಿ ಈ ಸಮುದಾಯಕ್ಕೆ ಮತ್ತು ಇತರೆ ತಳ ಸಮುದಾಯವರಿಗೂ ಸಹ ಸಚಿವ ಸ್ಥಾನವನ್ನು ನೀಡದಿರುವುದು ಪಕ್ಷ ಯಾವ ದಿಕ್ಕಿನಲ್ಲಿ ಸಾಗುತ್ತಿದೆ. ಮತ್ತು ಮಂತ್ರಿಮAಡಲ ಸಾಮಾಜಿಕ ನ್ಯಾಯದಡಿಯಲ್ಲಿ ಪ್ರತಿಯೊಂದು ಸಮುದಾಯಕ್ಕೂ ನ್ಯಾಯಕೊಡುವ ಪಕ್ಷವಾಗಿ ಹೊರಹೊಮ್ಮಬೇಕಾಗಿತ್ತು. ಈಗಾಗಲೇ ಮೇಲ್ಮಜಾತಿ ಪಕ್ಷ ಎಂದು ಹಣೆಪಟ್ಟಿಕಟ್ಟಿಕೊಂಡಿರುವ ಬಿಜೆಪಿ ಈಗಲಾದರೂ ಸಾಮಾಜಿಕ ನ್ಯಾಯದಡಿ ಎಲ್ಲಾ ತಳ ಸಮುದಾಯಗಳಿಗೆ ಸಚಿವ ಸ್ಥಾನ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕಾಗಿತ್ತು.
ಭೋವಿಸಮುದಾಯಕ್ಕೆ ಸಚಿವ ಸ್ಥಾನ ನೀಡದೇ ಹೋದರೆ ಮುಂದಿನ ದಿನಗಳಲ್ಲಿ ಅದರ ಪರಿಣಾಮವನ್ನು ಬಿಜೆಪಿ ಪಕ್ಷ ಉಣಬೇಕಾಗುತ್ತದೆ ಎಂದು ತಿಳಿಸಿದರು. ಪತ್ರಿಕಾ ಘೋಷ್ಠಿಯಲ್ಲಿ ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿ ಹೆಚ್.ಲಕ್ಷö್ಮಣ, ಎಸ್.ಜೆ.ಎಸ್. ಜ್ಞಾನಪೀಠದ ನಿರ್ದೇಶಕರಾದ ಕೆ.ರುದ್ರಪ್ಪ, ಎಸ್.ಎ.ಸ್ವಾಮಿ, ಮಂಜುನಾಥ.ಈ. ತಿಪ್ಪೇಸ್ವಾಮಿ, ಮುಖಂಡರಾದ ರಮೇಶ ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours