ಚಳ್ಳಕೆರೆ ರಘುಮೂರ್ತಿಗೆ ಟಿಕೆಟ್ ಫಿಕ್ಸ್, ಮೊಳಕಾಲ್ಮುರು ಕ್ಷೇತ್ರಕ್ಕೆ ಅಚ್ಚರಿ‌ ಅಭ್ಯರ್ಥಿ ಸಾಧ್ಯತೆ, ಹೊಳಲ್ಕೆರೆ, ಹಿರಿಯೂರು, ಚಿತ್ರದುರ್ಗ, ಹೊಸದುರ್ಗ ಕ್ಷೇತ್ರಗಳ ಟಿಕೆಟ್ ಗೆ ಯಾರೆಲ್ಲ ಸರ್ಕಸ್ ಮಾಡತ್ತಿದ್ದಾರೆ?

 

ವಿಶೇಷ ವರದಿ: ನ್ಯೂಸ್19ಕನ್ನಡ 

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಚುನಾವಣೆ ಕಾವು ಏರುತ್ತಿದೆ‌. ರಾಜಕೀಯ ವಿದ್ಯಾಮಾನಗಳು ಭರ್ಜರಿಯಾಗಿ ನಡೆಯುತ್ತಿವೆ.  ಕಾಂಗ್ರೆಸ್ ಪಕ್ಷದ ಅಂತರಿಕ ಸಮೀಕ್ಷೆ ನಡೆಸುವ ಮೂಲಕ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಹಿಡಿದು ಜಿಲ್ಲಾ ಮುಖಂಡರುಗಳ ಜೊತೆ ವಿಭಾಗವಾರು ಚರ್ಚೆ ಆರಂಭಿಸಿದ್ದಾರೆ‌.

ಚಿತ್ರದುರ್ಗ ಜಿಲ್ಲೆಯಲ್ಲಿ  ಕಾಂಗ್ರೆಸ್ ಪಕ್ಷದ ಬೇರುಗಳು ಗಟ್ಟಿ ಇದ್ದರು ಸಹ ನಾಯಕತ್ವ ವಿಚಾರ ಮತ್ತು ಸಂಘಟನೆ ವಿಚಾರದಲ್ಲಿ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ ಎಂಬ ಮಾತು ರಾಜಕೀಯ ಮುಖಂಡರುಗಳು ಹೇಳುತ್ತಾರೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ: ಕೋಟೆ ನಾಡು ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಸಾಕಷ್ಟು ಜನ  ಲಾಭಿ  ನಡೆಸುತ್ತಿದ್ದು ದೊಡ್ಡ ಪಟ್ಟಿಯೇ ತಯಾರಾಗಿದೆ. ಹನುಮಲಿ ಷಣ್ಮುಖಪ್ಪ, ವೀರೇಂದ್ರ ಪಪ್ಪಿ, ರಘು ಆಚಾರ್ಯ, ಜಿ.ಎಸ್.ಮಂಜುನಾಥ್ ,  ಪಕ್ಷದಿಂದ ಹೊರಗಿರುವ ಸೌಭಾಗ್ಯ ಬಸವರಾಜನ್ ಆದರೆ ಚಿತ್ರದುರ್ಗ ವಿಚಾರದಲ್ಲಿ ರಾಜ್ಯ ನಾಯಕರು  ಸ್ವಲ್ಪ ಯೋಚನೆ ಮಾಡುತ್ತಿದ್ದು ಬಲಾಢ್ಯ ಶಾಸಕರ ವಿರುದ್ಧ ಸೂಕ್ತ ಅಭ್ಯರ್ಥಿ ಹುಡುಕುತ್ತಿದ್ದಾರೆ.ಇದರ ಜೊತೆಗೆ ಕಾಂಗ್ರೆಸ್ ಮುಖಂಡರ ಪ್ರಕಾರ ಹಾಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕಾಂಗ್ರೆಸ್ ಕರೆತರಲು ಪ್ರಯತ್ನ ಸಹ ನಡೆಯುತ್ತಿದೆ ಎಂಬ ಮಾತು ಸಹ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರ: ಚಳ್ಳಕೆರೆಯಲ್ಲಿ ಕಾಂಗ್ರೆಸ್ ಹಾದಿ ಸುಗಮವಾಗಿದೆ. ಹಾಲಿ ಶಾಸಕ ಟಿ.ರಘುಮೂರ್ತಿಗೆ ಟಿಕೆಟ್ ಫೈನಲ್ ಆಗಿದೆ. ಸಂಘಟನ ಚತುರನಾಗಿ ಮತ್ತು ಪಕ್ಷದ ಸದಸ್ಯತ್ವ ನೊಂದಣಿಯಲ್ಲಿ 73 ಸಾವಿರ ಮುಟ್ಟಿಸಿ ಪಕ್ಷದ ನೆಲೆ ಗಟ್ಟಿಮಾಡಿಕೊಂಡಿದ್ದು ರಾಜ್ಯ ನಾಯಕರು ಟಿಕೆಟ್ ಪಕ್ಕವಾಗಿದೆ ಜೊತೆಗೆ ನಿರಂತರ ಜನಸಂಪರ್ಕ ಸಹ ಅನುಕೂಲವಾಲಿದೆ  ಅಂತ ಹೇಳಿದ್ದಾರೆ.
ಮೊಳಕಾಲ್ಮುರು ವಿಧಾನ ಸಭಾ ಕ್ಷೇತ್ರ: ಮೊಳಕಾಲ್ಮುರು ವಿಧಾನ ಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಅಂತ ಹೇಳಬಹುದು ಆದರೆ ಶ್ರೀರಾಮುಲು ಎಂಟ್ರಿಯಿಂದ ಕಳೆದ ಬಾರಿ ಬಲಾಢ್ಯ ಅಭ್ಯರ್ಥಿ ಹಾಕದೆ ಸೋಲು ಅನುಭವಿಸಿತ್ತು. ಈ ಬಾರಿ ಕಾಂಗ್ರೆಸ್ ಟಿಕೆಟ್ ಗೆ ಅಭ್ಯರ್ಥಿಗಳು ಸಾಲು ನಿಂತಿದ್ದಾರೆ. ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶ್ ಬಾಬು, ಬಿಜೆಪಿಯಲ್ಲಿರುವ ಶಾಸಕ ಗೋಪಾಲಕೃಷ್ಣ ವಾಪಸ್ ಬರುತ್ತಾರೆ ಎಂಬ ಲೆಕ್ಕಚಾರ ಜೊತೆಗೆ ವಿಶೇಷವಾಗಿ ಆಯಕಟ್ಟು  ಜಾಗದ ಅಧಿಕಾರಿ ಒಬ್ಬರು ಮೊಳಕಾಲ್ಮುರು ಕಣಕ್ಕೆ ಇಳಿದರು ಆಶ್ವರ್ಯಪಡಬೇಕಾಗಿಲ್ಲ ಅಂತಹ ವಾತವರಣ ಮೊಳಕಾಲ್ಮುರು ಕ್ಷೇತ್ರದ್ದಾಗಿದೆ.
ಹೊಳಲ್ಕೆರೆ ವಿಧಾನ ಕ್ಷೇತ್ರ: ಹೊಳಲ್ಕೆರೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಮಾಜಿ ಸಚಿವ ಹೆಚ್.ಆಂಜನೇಯಗೆ ಟಿಕೆಟ್ ಅಂತ ಹೇಳುತ್ತಿದ್ದರು ಸಹ ಒಂದು ಕಾಲದಲ್ಲಿ ಆಂಜನೇಯ ಅಪ್ತ ಬಳಗದ ಮಾಜಿ ಜಿಲ್ಲಾ ಪಂಚಾಯತ ಸದಸ್ಯೆ ಸವಿತಾ ರಘು ಪತಿ ರಘು ಹೊಳಲ್ಕೆರೆ ಕಾಂಗ್ರೆಸ್ ಪ್ರಬಲ ಆಕಾಂಕ್ಷೆ ಆಗಿದ್ದಾರೆ. ಯುವ ಕಾಂಗ್ರೆಸ್ ಕೋಟದಲ್ಲಿ ಟಿಕೆಟ್ ತರುತ್ತೇನೆ ಎಂದು ಒಂದೆರಡು ಸುತ್ತಿನ ಪ್ರಚಾರ ಸಹ ಕೈಗೊಂಡಿದ್ದಾರೆ. ಇದರ ನಡುವೆ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್.‌ಮಂಜುನಾಥ್ ಸಹ ಒಂದು ಕೈ ನೋಡೋಣ ಎಂಬ ಆಸೆಯಲಿದ್ದಾರೆ.ಇವೆಲ್ಲವನ್ನೂ ಎದುರಿಸಿ ಆಂಜನೇಯ  ಟಿಕೆಟ್ ತರಬೇಕಿದೆ. ಪಕ್ಷ ಯಾವ ನಿರ್ಧಾರ ಕೈ ಗೊಳ್ಳುತ್ತದೆ ಕಾದು ನೋಡಬೇಕಿದೆ.
ಹಿರಿಯೂರು ವಿಧಾನ ಸಭಾ ಕ್ಷೇತ್ರ: ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಇಲ್ಲಿಯವರೆಗೂ ಸಹ ಮಾಜಿ ಸಚಿವ ಡಿ.ಸುಧಾಕರ್ ಅವರಿಗೆ ಸ್ವಪಕ್ಷದಲ್ಲಿ  ಯಾವುದೇ ವಿರೋಧವಿರಲಿಲ್ಲ ಟಿಕೆಟ್ ಸಹ ಎಂದು ಹೇಳಲಾಗುತ್ತಿತ್ತು.ಆದರೆ ಈಗ ಪರಿಸ್ಥಿತಿ ಬದಲಾಗಿದ್ದು ತನ್ನದೇ ಪಕ್ಷದ ವಿಧಾನ ಪರಿಷತ್ ಅಭ್ಯರ್ಥಿ ಆಗಿ ಸೋಲು ಅನುಭವಿಸಿದರು ಕ್ಷೇತ್ರ ಬಿಡದೇ ಹಿರಿಯೂರಲ್ಲಿ ಸಖತ್ ರೌಂಡ್ ಮತ್ತು ಮೀಟಿಂಗ್ ಮೇಲೆ ಮೀಟಿಂಗ್ ಮಾಡುತ್ತಿರುವುದು ಮತ್ತು ಫ್ಲೆಕ್ಸ್ ವಿಚಾರದಲ್ಲಿ ಇಬ್ಬರು ಬೆಂಬಲಿಗರ ನಡುವೆ ಗಲಾಟೆ ಆಗಿದ್ದು ಇನ್ನಷ್ಟು ಇಂಬು ನೀಡಿದೆ. ಇದರ ನಡುವೆ ಸುಧಾಕರ್ ಗೆ ಸಂಘಟನೆಗೆ ಟಿಕೆಟ್ ಭಯ ಕಾಡುತ್ತಿದೆ. ಪಕ್ಷ ತಿರ್ಮಾನಕ್ಕೆ ಎಲ್ಲಾ ಲೆಕ್ಕಚಾರ ನಿಂತಿದೆ.
ಹೊಸದುರ್ಗ ವಿಧಾನ ಸಭಾ ಕ್ಷೇತ್ರ: ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ತನ್ನದೇ ಖ್ಯಾತಿ ಹೊಂದಿದೆ.  ಪ್ರತಿ ಚುನಾವಣೆಯಲ್ಲಿ ವಿಭಿನ್ನ ಫಲಿತಾಂಶ ನೀಡುತ್ತ ಬಂದಿದೆ. ಇಲ್ಲಿ ಹಾಲಿ ಬಿಜೆಪಿ ಶಾಸಕರಿದ್ದು ಇಲ್ಲಿ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಕಾಂಗ್ರೆಸ್ ಅಭ್ಯರ್ಥಿ ಎಂಬ ಮಾತು ಸದಾ ಚಾಲ್ತಿಯಲ್ಲಿತ್ತು‌. ಇವರ ಶಿಷ್ಯನೊಬ್ಬ. ಗೋವಿಂದಪ್ಪ ಅವರಿಗೆ ಟಿಕೆಟ್ ಇಲ್ಲ ಈ ಬಾರಿ‌ ನನ್ನದೇ ಎಂದು ಹೇಳುತ್ತಿದ್ದಾರೆ. ಹೀಗೆ
ಜಿಲ್ಲೆಯಲ್ಲಿ  ಅನೇಕ ಬೆಳವಣಿಗೆಗೆಗಳು ನಡೆಯುತ್ತಿದ್ದರು ಸಹ ಚಳ್ಳಕೆರೆ ಹೊರತುಪಡಿಸಿ ಉಳಿದ ಎಲ್ಲೂ ಸಹ ಟಿಕೆಟ್ ಖಾತ್ರಿ ಇಲ್ಲ ಎಂಬ ಮಾತು ರಾಜ್ಯ ನಾಯಕರು ವಿಭಾಗವಾರು ಕರೆದಿದ್ದ ಸಭೆಯಲ್ಲಿ ನಡೆದಿದೆ ಎಂದು ಗುಸುಗುಸು ಚರ್ಚೆ ಜಿಲ್ಲೆಯ ರಾಜಕೀಯ ಪಡಸಾಲೆಯ ಗುಣುಗುಡುತ್ತಿದೆ. ಚಳ್ಳಕೆರೆ ಒಂದು ಕ್ಷೇತ್ರ ಮಾತ್ರ ಪೈನಲ್ ಎಂದು ಮಾತ್ರ ವರಿಷ್ಠರು ಖಚಿತಪಡಿಸಿದ್ದು ರಾಜಕೀಯ ಮೇಲಾಟದಲ್ಲಿ ಟಿಕೆಟ್ ಯಾರ ಕೈ ಸೇರಲಿದೆ ಎಂದು ಈಗಲೇ ಏನು ಹೇಳಲು ಆಗಲ್ಲ. ಎಲ್ಲಾವನ್ನು ಚುನಾವಣೆ ದಿನಾಂಗ ಹೊರಬಿದ್ದ ಮೇಲೆ ಸ್ವಲ್ಪ ಚಿತ್ರಣ ಸಿಗಲಿದೆ ಅಲ್ಲಿಯವರೆಗೂ ಎಲ್ಲಾರೂ ಕಾದು ನೋಡಬೇಕಿದೆ‌
[t4b-ticker]

You May Also Like

More From Author

+ There are no comments

Add yours