ಸ್ವಾವಲಂಬಿ ಜೀವನ ನಡೆಸಲು ವಿಕಲಚೇನರಿಗೆ ಯಂತ್ರಚಾಲಿತ ದ್ವಿಚಕ್ರ ವಿತರಣೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

ಚಿತ್ರದುರ್ಗ: ಸ್ವಾವಲಂಬಿ ಜೀವನ ನಡೆಸಲು ಯಾವುದೇ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ನೀಡಲಾಗುತ್ತಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಜಿಲ್ಲಾ ಪಂಚಾಯತ ‌ಆವರಣದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಡಿಎಂಎಫ್ ಟಿ 45 ಲಕ್ಷ ಅನುದಾನದಲ್ಲಿ 50 ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ (ರೆಟ್ರೋಫಿಟ್ ಮೆಂಟ್ ಸಹಿತ) ವಾಹನಗಳನ್ನು ವಿತರಿಸಿ ಮಾತನಾಡಿದರು.

ವಿಕಲಚೇತನರಿಗೆ ದ್ವಿಚಕ್ರ ವಾಹನಕ್ಕಾಗಿ ನಾನು 50 ಲಕ್ಷ ಅನುದಾನ ನೀಡಿದ್ದು ಅದರಲ್ಲಿ 45 ಲಕ್ಷ ಅನುದಾನಲ್ಲಿ 50 ದ್ವಿಚಕ್ರ ವಾಹನ ನೀಡಲಾಗಿದೆ. ಇಲಾಖೆಯಿಂದ 3-4 ವಾಹನಗಳು ನೀಡುವುದರಿಂದ ಸಾಕಷ್ಟು ಫಲಾನುಭವಿಗಳಿಗೆ ನೀಡಲು ಆಗುತ್ತಿರಲಿಲ್ಲ.ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರ ಜಿಲ್ಲಾ ಕೇಂದ್ರ ಆಗಿರುವುದರಿಂದ ಜಿಲ್ಲೆಯ ವಿವಿಧ ತಾಲೂಕುಗಳಿಂದ ಜೀವನ ನಡೆಸಲು ಜಿಲ್ಲಾ ಕೇಂದ್ರಕ್ಕೆ ಆಗಮಿಸುತ್ತಾರೆ ಅದಕ್ಕಾಗಿ ಡಿಎಂಎಫ್ ಟಿ ಅನುದಾನ ನೀಡಿದ್ದೇನೆ ಎಂದರು.

ನನ್ನ ಕ್ಷೇತ್ರದಲ್ಲಿ ಇನ್ನು 20 ರಿಂದ 30 ದ್ವಿಚಕ್ರ ವಾಹನಗಳ ಅಗತ್ಯ ಇದೆ ಎಂದು ತಿಳಿಸಿದ್ದು ಉಳಿಕೆಯಾದ ಅನುದಾನದಲ್ಲಿ 5-6 ದ್ವಿಚಕ್ರ ವಾಹನಗಳನ್ನು ನೀಡಲಾಗುವುದು. ವಿಕಲಚೇತನರ ಎಲ್ಲರಂತೆ ಸ್ವಾವಲಂಬಿ ಬದುಕು ನಡೆಸಲು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವ್ಯವಹಾರ, ವ್ಯಾಪರ, ವಿದ್ಯಾಭ್ಯಾಸ, ಸ್ವಯಂ ಉದ್ಯೋಗ ಮಾಡಲು ತೊಂದರೆಯಾಗದೇ ತಾವೇ ತೆರಳಿ ಎಲ್ಲಾವನ್ನು ನಿಭಾಯಿಸಲು ಅನುಕೂಲವಾಗಲಿ ಎಂದು ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ನೀಡಲಾಗುತ್ತಿದೆ.
ವಿಕಚೇತನರಿಗೆ ಸಾಮಾನ್ಯರಂತೆ ಬೇರೆಡೆಗೆ ತೆರಳಲು ಸಾಧ್ಯವಿಲ್ಲ ಎಂಬ ಕೊರಗು ಬರಬಾರದು ಎಂದರು.

ಸರ್ಕಾರದಿಂದ ವಿಚಕಚೇತನರಿಗೆ ಆಧಾರ್ ಯೋಜನೆಯಲ್ಲಿ ಸಾಲ ಸೌಲಭ್ಯ, ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್, ಬಸ್ ಪಾಸ್ ಸೌಲಭ್ಯ, ವಿವಾಹ ಪ್ರೋತ್ಸಾಹ ಧನ, ಶಿಶುಪಾಲನ ಭತ್ಯೆ, ಗ್ರಾಮೀಣ ಪುನರ್ವಸತಿ ಯೋಜನೆ, ಉದ್ಯೋಗ ಮೀಸಲಾತಿ ಸೇರಿ ಹಲವು ಯೋಜನೆಗಳು ಸರ್ಕಾರದಿಂದ ನೀಡಲಾಗುತ್ತಿದ್ದು ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಬದುಕನ್ನು ಹಸನು ಮಾಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ಗಾಲಿ ಬಿಚ್ಚಿದರೆ ವಾಹನ ವಾಪಸ್: ದ್ವಿಚಕ್ರ ವಾಹನ ವಿಕಲಚೇತನರಿಗೆ ಯಾವುದೇ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ನೀಡಿದ್ದು ಒಂದು ವೇಳೆ ವಾಹನದ ಗಾಲಿ ಬಿಚ್ಚಿ ವಾಹನ ದುರ್ಬಳಕೆ ಆಗುತ್ತಿದ್ದರೆ ವಾಹನ ವಾಪಸ್ ಪಡೆಯಲಾಗುತ್ತದೆ ಎಂದು ಎಚ್ಚರಸಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಜೆ.ವೈಶಾಲಿ ಮಾತನಾಡಿ ಇತಿಹಾಸದಲ್ಲಿ ಮೊದಲ ಬಾರಿಗೆ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕರು ವಿಕಲಚೇತನರ ಮೇಲಿನ ಕಾಳಜಿಯಿಂದ 50 ದ್ವಿಚಕ್ರ ವಾಹನ ನೀಡುತ್ತಿರುವುದಕ್ಕೆ ಧನ್ಯವಾದಗಳು ತಿಳಿಸುತ್ತಿದ್ದೇವೆ. ಇಲಾಖೆಯಲ್ಲಿ 3-4 ವಾಹನಗಳು ಬರುತ್ತಿದ್ದವು ನೂರಾರು ಅರ್ಜಿಗಳು ಬರುತ್ತಿದ್ದವು. ಆದರೆ ಈ ಬಾರಿ ಅತಿ ಹೆಚ್ಚು ಫಲಾನಿಭವಿಗಳಿಗೆ ವಾಹನ ನೀಡಿರುವುದರಿಂದ ದ್ವಿಚಕ್ರ ವಾಹನಗಳ ಒತ್ತಡಕ್ಕೆ ಸ್ವಲ್ಪ ಬ್ರೇಕ್ ಬಿದ್ದಂತೆ ಆಗಿದೆ. ಶಾಸಕರು ನಮ್ಮ ಇಲಾಖೆಯ ಮೇಲೆ ಹೆಚ್ಚಿನ ಕಾಳಜಿ ಇದ್ದು ಸದಾ ನಮಗೆ ಎಲ್ಲಾ ಸಹಕಾರ ನೀಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಭಾರತಿ ಎರ್. ಬಣಕಾರ್, ಮತ್ತು ಫಲಾನುಭವಿಗಳು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours