ಕ್ರೀಡಾ ಸ್ಪೂರ್ತಿಯೊಂದಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಿ: ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ

 

ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ
********
ಚಿತ್ರದುರ್ಗ(ಕರ್ನಾಟಕ ವಾರ್ತೆ)ಏ.22:
ಸೋಲು-ಗೆಲವುಗಳ ಲೆಕ್ಕಾಚಾರವಿಲ್ಲದೆ ಕ್ರೀಡಾ ಸ್ಫೂರ್ತಿಯೊಂದಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಸರ್ಕಾರಿ ನೌಕರರಿಗೆ ಸಲಹೆ ನೀಡಿದರು.
ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಕಚೇರಿ ಕೆಲಸಗಳನ್ನು ಸ್ವಲ್ಪಕಾಲ ಮರೆತು ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಸರ್ಕಾರಿ ನೌಕರರಿಗೆ ಉತ್ತಮ ಅವಕಾಶ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ನಂದಿನಿದೇವಿ ಮಾತನಾಡಿ, ಕಳೆದ ವರ್ಷ ಜಿಲ್ಲೆಯ ಹಲವು ನೌಕರರು ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಈ ವರ್ಷವೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ಜಿಲ್ಲೆಗೆ ಹೆಸರು ತರಬೇಕು ಎಂದರು.
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕೆ.ಮಂಜುನಾಥ ಮಾತನಾಡಿ, ವಾಡಿಕೆಯಂತೆ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಕಚೇರಿ ಒತ್ತಡಗಳಿಂದ ಮುಕ್ತವಾಗಿ ನೌಕರರು ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ಸರ್ಕಾರ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜನೆಗೆ 5 ಲಕ್ಷ ರೂಪಾಯಿ ಅನುದಾನ ನೀಡಿದೆ. ರಾಜ್ಯ ಮಟ್ಟದ ಆಯೋಜನೆಗೆ ರೂ. 2 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಧಾರವಾಡ ಹಾಗೂ ದಾವಣಗೆರೆಯಲ್ಲಿ ರಾಜ್ಯಮಟ್ಟದ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜನೆ ಮಾಡಲಾಗಿದೆ. ರಾಜ್ಯದಲ್ಲಿ ಮಂಜೂರಾದ 7.50 ಲಕ್ಷ ಹುದ್ದೆಗಳಲ್ಲಿ 5.40 ಲಕ್ಷಗಳು ಹುದ್ದೆಗಳು ಭರ್ತಿ ಇವೆ. ನೌಕರರು ಖಾಲಿ ಹುದ್ದೆಗಳನ್ನು ಸರಿದೂಗಿಸಿಕೊಂಡು ಅಧಿಕ ಕೆಲಸ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ನೌಕರರ ಸಂಕಷ್ಟಕ್ಕೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಹಬ್ಬದ ಮುಂಗಡ ಹೆಚ್ಚಿಸುವ, ಅನಾಮಧೇಯ ಪತ್ರಗಳಿಂದ ನೌಕರರಿಗೆ ಆಗುವ ತೊಂದರೆಗಳನ್ನು ತಪ್ಪಿಸಲು ಸರ್ಕಾರದ ಸೂಕ್ತ ಆದೇಶ ಹೊರಡಿಸುವಲ್ಲಿ ರಾಜ್ಯಾಧ್ಯಕ್ಷರ ಪಾತ್ರ ಪ್ರಮುಖವಾಗಿದೆ. ಸಾಮಾಜಿಕ ಜಾಲತಣಗಳ ಮೂಲಕ ಆದೇಶಗಳನ್ನು ಲಭಿಸುವಂತೆ ಮಾಡಿದ್ದಾರೆ. ಎನ್.ಪಿ.ಎಸ್. ರದ್ದತಿಗೆ ಸಂಘದ ಹೋರಾಟ ಮುಂದುವರಿಯಲಿದೆ ಎಂದರು.
ಸರ್ಕಾರದ ಏಳನೇ ವೇತನ ಆಯೋಗ ಹಾಗೂ ಕೇಂದ್ರ ಸರ್ಕಾರದ ನೌಕರರ ಸರಿ ಸಮಾನ ವೇತನ ನೀಡಲು ಸಮ್ಮತಿಸಿದೆ. ನೌಕರರು ಭಕ್ತಿ ಪೂರ್ವಕವಾಗಿ ಸಾರ್ವಜನಿಕ ಸೇವೆಯ ಕೆಲಸವನ್ನು ಮಾಡಬೇಕು ಎಂದರು.
ಸಮಾರಂಭದಲ್ಲಿ ಕ್ರೀಡೆಗಳ ಚಾಲನೆಯ ಸೂಚಕವಾಗಿ ಪಾರಿವಾಳಗಳನ್ನು ಹಾರಿಬಿಡಲಾಯಿತು. ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೈಗದ ನೌಕರರು ಕ್ರೀಡಾಜ್ಯೋತಿ ಹಿಡಿದು ಮೈದಾನಕ್ಕೆ
ಓಡಿ ಬಂದು ಕ್ರೀಡಾಜ್ಯೋತಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು. ನೌಕರರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ನೌಕರರ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ನೀಡುವಂತೆ ಮನವಿ ಪತ್ರ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ 100.ಮೀ ಓಟದ ಸ್ಪರ್ಧೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಆರ್. ಚಂದ್ರಯ್ಯ, ತಹಶೀಲ್ದಾರ್ ಸತ್ಯನಾರಾಯಣ, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್, ತಾಲ್ಲೂಕು ಮಟ್ಟದ ಅಧ್ಯಕ್ಷರಾದ ಲೋಕೇಶ್, ಜಗನ್ನಾಥ ಡಿ.ಟಿ, ಕೆ.ಈರಣ್ಣ, ಶಿವಕುಮಾರ್, ಶಶಿಧರ ಉಪಸ್ಥಿತರಿದ್ದರು.
=======
ಚಿತ್ರದುರ್ಗ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದ ಫಲಿತಾಂಶ ಪಟ್ಟಿ ಇಂತಿದೆ.
1) ಅಥ್ಲೆಟಿಕ್ಸ್:
ಪುರುಷರ ವಿಭಾಗ (50 ರಿಂದ 60 ವರ್ಷ ಒಳಪಟ್ಟವರ ವಿಭಾಗ)
1) ಗುಂಡುಎಸೆತ
ಪ್ರಥಮ: ಜಿ ರೇವಣ್ಣ, ಜ್ಯೂನಿಯರ್ ಲ್ಯಾಬ್‍ಟೆಕ್ನಿಷಿಯನ್, ಹೊಳಲ್ಕೆರೆ
ದ್ವಿತೀಯ: ಕಾಂತರಾಜ್, ಶಿಕ್ಷಣ ಇಲಾಖೆ, ಹಿರಿಯೂರು
ತೃತೀಯ: ನಾಗಪ್ಪ ಡಿ ಹೆಚ್, ಶಿಕ್ಷಣ ಇಲಾಖೆ, ಮೊಳಕಾಲ್ಮೂರು

2) ಲಾಂಗ್‍ಜಂಪ್
ಪ್ರಥಮ: ಶಿವಪ್ಪ ಬಿ, ಶಿಕ್ಷಣ ಇಲಾಖೆ, ಚಿತ್ರದುರ್ಗ
ದ್ವಿತೀಯ: ಎಂ ವಿ ಚೆನ್ನಯ್ಯ, ಶಿಕ್ಷಣ ಇಲಾಖೆ, ಚಿತ್ರದುರ್ಗ
ತೃತೀಯ: ಮಂಜುನಾಥ ಸ್ವಾಮಿ, ತಾಲ್ಲೂಕು ಪಂಚಾಯತ್, ಚಳ್ಳಕೆರೆ

3) 100 ಮೀ ಓಟ
ಪ್ರಥಮ: ಪಾಂಡುರಂಗಸ್ವಾಮಿ ಬಿ, ಶಿಕ್ಷಣ ಇಲಾಖೆ, ಚಿತ್ರದುರ್ಗ
ದ್ವಿತೀಯ: ಶಿವಪ್ಪ ಬಿ, ಶಿಕ್ಷಣ ಇಲಾಖೆ, ಚಿತ್ರದುರ್ಗ
ತೃತೀಯ: ಮಂಜುನಾಥ ಸ್ವಾಮಿ ಟಿ ಎಂ, ತಾಲ್ಲೂಕು ಪಂಚಾಯತ್, ಚಳ್ಳಕೆರೆ

4) 400 ಮೀ ಓಟ
ಪ್ರಥಮ: ಶಿವಪ್ಪ ಬಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿತ್ರದುರ್ಗ
ದ್ವಿತೀಯ: ಚೆನ್ನಯ್ಯ ಎಂ ವಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿತ್ರದುರ್ಗ
ತೃತೀಯ: ಮಂಜುನಾಥಸ್ವಾಮಿ ಟಿ ಎಂ, ತಾಲ್ಲೂಕುಪಂಚಾಯತ್, ಚಳ್ಳಕೆರೆ

5) 800 ಮೀ ಓಟ
ಪ್ರಥಮ: ಹುಲಿ ಕುಂಟಪ್ಪ, ಜಿ ಬಿ, ನ್ಯಾಯಾಂಗ ಇಲಾಖೆ, ಚಿತ್ರದುರ್ಗತಾ
ದ್ವಿತೀಯ: ತಿಮ್ಮೇಶ್ ಜಿ, ಬಿಸಿಎಂ ಇಲಾಖೆ, ಚಿತ್ರದುರ್ಗ
ತೃತೀಯ: ಜಿ ಬಿ ಗುರುಮೂರ್ತಿ, ಶಿಕ್ಷಣ ಇಲಾಖೆ,

6) ಡಿಸ್ಕಸ್‍ಥ್ರೋ
ಪ್ರಥಮ: ಮಲ್ಲಯ್ಯಎಸ್‍ಆರ್, ಶಿಕ್ಷಣ ಇಲಾಖೆ, ಹೊಸದುರ್ಗ
ದ್ವಿತೀಯ: ಕಾಂತರಾಜ್ ಡಿ, ಶಿಕ್ಷಣ ಇಲಾಖೆ, ಹಿರಿಯೂರು
ತೃತೀಯ: ಪ್ರಕಾಶ್ ಜಿ, ಶಿಕ್ಷಣ ಇಲಾಖೆ, ಹೊಳಲ್ಕೆರೆ

ಪುರುಷರ ವಿಭಾಗ (40 ರಿಂದ 50 ವರ್ಷಒಳಪಟ್ಟವರ ವಿಭಾಗ)
1. ಲಾಂಗ್‍ಜಂಪ್
ಪ್ರಥಮ: ಇಫ್ತೆಖಾರ್‍ಅಹಮ್ಮದ್, ಬೇಗ್ ಹೆಚ್‍ಎಸ್, ಭದ್ರ ಮೇಲ್ದಂಡೆಯೋಜನೆ,
ಚಿತ್ರದುರ್ಗ
ದ್ವಿತೀಯ: ಆರ್‍ಜೆ ಮೊಹಮ್ಮದ್‍ತಾಜೀರ್ ಬಾಷ, ಶಿಕ್ಷಣ ಇಲಾಖೆ, ಚಿತ್ರದುರ್ಗ
ತೃತೀಯ: ತಿಮ್ಮಪ್ಪ, ಶಿಕ್ಷಣ ಇಲಾಖೆ, ಚಳ್ಳಕೆರೆ

2. 100 ಮೀ ಓಟ
ಪ್ರಥಮ: ಇಫ್ತೆಖಾರ್‍ಅಹಮ್ಮದ್, ಬೇಗ್ ಹೆಚ್‍ಎಸ್, ಭದ್ರ ಮೇಲ್ದಂಡೆಯೋಜನೆ,
ಚಿತ್ರದುರ್ಗ
ದ್ವಿತೀಯ: ಲೋಕೇಶ್ ಪಿ, ಶಿಕ್ಷಣ ಇಲಾಖೆ, ಹೊಳಲ್ಕೆರೆ
ತೃತೀಯ: ಸಿ ಎನ್ ಮಾರುತಿ, ತಾಲ್ಲೂಕು ಪಂಚಾಯತ್,

3. 400 ಮೀ ಓಟ
ಪ್ರಥಮ: ವಿರೇಶ್ ಎಂ, ಬಿಸಿಎಂ ಇಲಾಖೆ, ಹೊಸದುರ್ಗ
ದ್ವಿತೀಯ: ಗುರುಮೂರ್ತಿಎಸ್, ಆರೋಗ್ಯ ಇಲಾಖೆ, ಮೊಳಕಾಲ್ಮೂರು
ತೃತೀಯ: ತಿಮ್ಮಪ್ಪ ಜಿ ಆರ್, ಶಿಕ್ಷಣ ಇಲಾಖೆ,

4. 800 ಮೀ ಓಟ
ಪ್ರಥಮ:  ವಿರೇಶ್ ಎಂ, ಬಿಸಿಎಂ ಇಲಾಖೆ, ಹೊಸದುರ್ಗ
ದ್ವಿತೀಯ: ಲೋಕೇಶ್ ಪಿ, ಶಿಕ್ಷಣ ಇಲಾಖೆ, ಹೊಳಲ್ಕೆರೆ
ತೃತೀಯ: ತಿಮ್ಮಪ್ಪ ಜಿ ಆರ್, ಶಿಕ್ಷಣ ಇಲಾಖೆ,

5. ಗುಂಡುಎಸೆತ
ಪ್ರಥಮ: ಮರಿಸ್ವಾಮಿ, ಪಟ್ಟಣ ಪಂಚಾಯತ್, ಮೊಳಕಾಲ್ಮೂರು
ದ್ವಿತೀಯ: ವಸಂತರಾಜ್, ಆರೋಗ್ಯ ಇಲಾಖೆ, ಚಿತ್ರದುರ್ಗ
ತೃತೀಯ: ಯೋಗರಾಜ್, ಶಿಕ್ಷಣ ಇಲಾಖೆ, ಹೊಸದುರ್ಗ

7) ಡಿಸ್ಕಸ್‍ಥ್ರೋ
ಪ್ರಥಮ: ಮರಿಸ್ವಾಮಿ, ಪಟ್ಟಣ ಪಂಚಾಯತ್, ಮೊಳಕಾಲ್ಮೂರು
ದ್ವಿತೀಯ: ಯೋಗರಾಜ್, ಶಿಕ್ಷಣ ಇಲಾಖೆ, ಹೊಸದುರ್ಗ
ತೃತೀಯ: ದಾಸಯ್ಯ  ಸಿ ಬಿ, ಪಶುಪಾಲನೆ ಇಲಾಖೆ

ಪುರುಷರ ವಿಭಾಗ (40 ವರ್ಷ ಒಳಪಟ್ಟವರ ವಿಭಾಗ)
1. ಲಾಂಗ್‍ಜಂಪ್
ಪ್ರಥಮ: ಮಂಜುನಾಥಎಸ್, ಬಿಸಿಎಂ ಇಲಾಖೆ, ಮೊಳಕಾಲ್ಮೂರು
ದ್ವಿತೀಯ: ಲಿಂಗರಾಜ್‍ಎಸ್‍ಇಟಗಿ, ನ್ಯಾಯಾಂಗ ಇಲಾಖೆ,  ಚಳ್ಳಕೆರೆ
ತೃತೀಯ: ವಿಜಯಕುಮಾರ್ ಬಿ ಟಿ, ಹೊಸದುರ್ಗತಾ,

2. 400 ಮೀ ಓಟ
ಪ್ರಥಮ: ಸಾಧ್ವೀಕ್‍ಜೆ, ಶಿಕ್ಷಣ ಇಲಾಖೆ, ಚಿತ್ರದುರ್ಗ
ದ್ವಿತೀಯ: ನಿಂಗಪ್ಪರಾಜರಾಡ್ಕರ್, ಬಿಸಿಎಂ ಇಲಾಖೆ, ಹೊಳಲ್ಕೆರೆ
ತೃತೀಯ: ಸಿದ್ದೇಶ್ ಎಂ, ಸಮಾಜಕಲ್ಯಾಣ ಇಲಾಖೆ,

3. 800 ಮೀ ಓಟ
ಪ್ರಥಮ: ಪ್ರದೀಪ್‍ಕುಮಾರ್ ಕೆ ಟಿ, ಸಮಾಜಕಲ್ಯಾಣ ಇಲಾಖೆ ,ಚಿತ್ರದುರ್ಗತಾ
ದ್ವಿತೀಯ: ಶಶಿಕುಮಾರ್ ಎಂ, ಸಮಾಜಕಲ್ಯಾಣ ಇಲಾಖೆ, ಚಿತ್ರದುರ್ಗ
ತೃತೀಯ: ಲಿಂಗಪ್ಪ, ಬಿಸಿಎಂ ಇಲಾಖೆ, ಹೊಳಲ್ಕೆರೆ
4. ಗುಂಡು ಎಸೆತ
ಪ್ರಥಮ: ಸತೀಶ್, ಆರ್‍ಡಿಪಿಆರ್, ಹೊಸದುರ್ಗ
ದ್ವಿತೀಯ: ಮಹಂತೇಶ್, ಶೀಕ್ಷಣ ಇಲಾಖೆ, ಚಳ್ಳಕೆರೆ
ತೃತೀಯ: ಮಹೇಶ್‍ಆರ್‍ಆರೋಗ್ಯ ಇಲಾಖೆ, ಹಿರಿಯೂರು
6. ಜಾವಲೀನ್‍ಎಸೆತ
ಪ್ರಥಮ: ಮಹಾಂತೇಶ್ ಡಿ, ಶಿಕ್ಷಣ ಇಲಾಖೆ, ಮೊಳಕಾಲ್ಮೂರು
ದ್ವಿತೀಯ: ಶ್ರೀನಿವಾಸ ಜಿ, ಪಟ್ಟಣ ಪಂಚಾಯಿತಿ, ಮೊಳಕಾಲ್ಮೂರು
ತೃತೀಯ: ಸತೀಶ್, ಆರ್‍ಡಿಪಿಆರ್, ಹೊಸದುರ್ಗ
=========

[t4b-ticker]

You May Also Like

More From Author

+ There are no comments

Add yours