ಕೇಂದ್ರ ಸರ್ಕಾರ ಖಾಸಗೀಕರಣ ಮಾಡುವುದನ್ನು ವಿರೋಧಿಸಿ ಸರ್ಕಾರಿ ನೌಕರರ ಪ್ರತಿಭಟನೆ.

 

ಚಳ್ಳಕೆರೆ-03 ಬೆಸ್ಕಾಂ ಕಚೇರಿಯನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡುವುದನ್ನು ವಿರೋಧಿಸಿ ಮಂಗಳವಾರ ಕಚೇರಿ ಮುಂದೆ ಪರಶುರಾಮಪುರ, ತಳಕು, ಹಿರಿಯೂರು, ಚಳ್ಳಕೆರೆ ನೌಕರರು ಪ್ರತಿಭಟನೆ ನಡೆಸಿದರು.
ಕರ್ನಾಟಕ ನೌಕರರ ಸಂಘ ಮತ್ತು ಅಧಿಕಾರಿಗಳ ಅಸೋಸಿಯೇಷನ್ ಗಳ ಒಕ್ಕೂಟ, ಇಂಜಿನಿಯರಿಂಗ್ ಸಂಘ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಕಲ್ಯಾಣ ಸಂಸ್ಥೆ,ಲೆಕ್ಕಾಧಿಕಾರಿಗಳ ಸಂಘ, ಡಿಪ್ಲೊಮಾ ಇಂಜಿನಿಯರ್ ಗಳ ಸಂಘ, ಗುತ್ತಿಗೆದಾರರು ಮತ್ತು ಪದಾಧಿಕಾರಿಗಳ ಸಂಘದ ಸದಸ್ಯರು ಸೇರಿ ಪ್ರತಿಭಟನೆ ನಡೆಸಿದರು. ಕಳೆದ 135 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಬೆಸ್ಕಾಂ, ಚೆಸ್ಕಾಂ,ಎಸ್ಕಾಂ ಸೇರಿದಂತೆ ಹಲವಾರು ಸಂಸ್ಥೆಯಲ್ಲಿ ನೂರಾರು ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ ಅವರ ಪ್ರಾಣವನ್ನು ಲೆಕ್ಕಿಸದೆ ಕಾರ್ಯನಿರ್ವಹಿಸಿದ್ದಾರೆ. ಆದರೆ, ಈಗ ಏಕಾಏಕಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಖಾಸಗೀಕರಣ ಮಾಡುವ ಮೂಲಕ ನಮ್ಮ ಹಕ್ಕಿಗೆ ಚ್ಯುತಿತರುವ ಕಾರ್ಯಮಾಡುತ್ತಿದೆ. ಈ ಖಾಸಗೀಕರಣ ಕಾರ್ಯವನ್ನು ಸರ್ಕಾರಗಳು ಕೈಬಿಡಬೇಕು ಇಲ್ಲವಾದಲ್ಲಿ ಆಗಸ್ಟ್ 10ರಂದು ಎಲ್ಲಾ ನೌಕರರು ಕೆಲಸವನ್ನು ಸ್ಥಗಿತಗೊಳಿಸಿ ಬೀದಿಗಿಳಿದು ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಇಇ ರಾಜು ತಿಳಿಸಿದರು. ಪಾಲಯ್ಯ, ಅರುಣ್ ಕುಮಾರ್, ನಾಗರಾಜು ಮೊದಲಾದವರು ಇದ್ದರು.

[t4b-ticker]

You May Also Like

More From Author

+ There are no comments

Add yours