ಈ ಬಾರಿ ಏಳು ದಿನಗಳ ಕಾಲ ಶಕ್ತಿ ಗಣಪತಿ ಉತ್ಸವ: ಆರ್. ಪ್ರಕಾಶ್ ಕುಮಾರ್.

 

ಹಿರಿಯೂರು: ” ಶ್ರೀ ಶಕ್ತಿ ಗಣಪತಿ ಪೂಜಾ ಉತ್ಸವವು ಈ ಬಾರಿ ಸರ್ಕಾರದ ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಎಳು ದಿನಗಳ ಕಾಲ ನಗರದ ನೆಹರೂ ಮೈದಾನದಲ್ಲಿರುವ ಅಂಜಿನಪ್ಪ ಬಯಲು ರಂಗಮಂದಿರದಲ್ಲಿ ಏಳು ದಿನಗಳ ಕಾಲ ಉತ್ಸವವನ್ನು ನಡೆಸಲಾಗುವುದು ಎಂದು ಸೋಮವಾರ ನಡೆದ ಶ್ರೀ ಶಕ್ತಿ ಗಣಪತಿ ಪೂಜಾ ಸಮಿತಿಯ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಯಿತು ” ಎಂದು ಸಮಿತಿಯ ನೂತನ ಅಧ್ಯಕ್ಷ ಆರ್. ಪ್ರಕಾಶ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
” ಕಳೆದ ಬಾರಿಯೂ ಸಹ ಕೋವಿಡ್ ಕಾರಣದಿಂದಾಗಿ ಕೇವಲ ಒಂದು ಸರಳವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ,ವಿಸರ್ಜಿಸಲಾಗಿತ್ತು ಈ ಬಾರಿ 50 ನೇ ವರ್ಷದ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲು ಯೋಜನೆ ತಯಾರಿಸಲಾಗಿತ್ತು ಆದರೇ ತಜ್ಞರು ಅಭಿಪ್ರಾಯ ಪಟ್ಟಿರುವಂತೆ ಮೂರನೇ ಅಲೆ ಎದುರಾಗುವ ಪರಿಸ್ಥಿತಿ ಇರುವ ಕಾರಣ ಸರ್ಕಾರವು ಗಣೇಶ ಉತ್ಸವದ ಏನು ಮಾರ್ಗ ಸೂಚಿಗಳನ್ನು ನೀಡುವುದೇ ಜವಾಬ್ದಾರಿಯುತ ನಾಗರೀಕರಾಗಿ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿ ಏಳು ದಿನಗಳ ಕಾಲ ಸರಳವಾಗಿ ಆಚರಿಸಲಾಗುವುದು ” ಎಂದಿದ್ದಾರೆ.
” ಈ ಏಳು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಶ್ರೀ ಶಕ್ತಿ ಗಣಪತಿಯ ಎಲ್ಲಾ ಪೂಜಾ ಸೇವಾ ಕರ್ತರುಗಳಿಗೆ ಮತ್ತು ಸಾರ್ವಜನಿಕರಿಗೆ ಸೇವೆಗೆ ಅವಕಾಶ ಕಲ್ಪಿಸಲಾಗಿದೆ,ದಾನಿಗಳು,ಪ್ರಾಯೋಜಕರು ಹಾಗೂ ಸೇವಾ ಕರ್ತರು ಎಂದಿನಂತೆ ಸಹಕಾರ ನೀಡಬೇಕೆಂದು” ಮನವಿ ಮಾಡಿದ್ದಾರೆ.
ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರಾದ ವೈ.ಎಸ್. ಉಮಾಶಂಕರ್ ಕಾರ್ಯದರ್ಶಿ ಟಿ.ಎಸ್. ಬಸವರಾಜು, ಖಜಾಂಚಿ ಎಂ.ಎಸ್. ರಾಘವೇಂದ್ರ,ಸಹ ಕಾರ್ಯದರ್ಶಿ ಕೇಶವ ಮೂರ್ತಿ,ಎ.ರಾಘವೇಂದ್ರ, ನಿರ್ದೇಶಕರುಗಳಾದ ಗಜಾನನ ತಿಪ್ಪೇಸ್ವಾಮಿ,ಮಹೇಶ್,ಚಂದ್ರಶೇಖರ್,ವೆಂಕಟೇಶ್ ಮಾಮ,ನಾಗೇಶ್,ಡಿ.ಎಸ್. ರಾಜಕುಮಾರ್, ಎಂ.ಆರ್. ರಾಜಶೇಖರ್, ಪ್ರಭಾಕರ್,ಎಂ.ಆರ್. ನಾಗೇಶ್,ಲಕ್ಷ್ಮಿ ನಾರಾಯಣ ಶೆಟ್ಟಿ,ವಿ.ವಿಶ್ವನಾಥ್,ಎಂ.ವಿ.ಹರ್ಷ,ಪ್ರಕಾಶ್ ಮಹದೇವ್,ಗೌಡ್ರು ಪಿ.ಆರ್. ಸತೀಶ್ ಬಾಬು,ಮತ್ತಿರರು ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours