ಸಚಿವ ಸಂಪುಟದ ಶಕ್ತಿಕೇಂದ್ರ ದೆಹಲಿಗೆ ಹಾರಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ. ಮಂತ್ರಿಯಾಗಿ ಕೋಟೆ ನಾಡಿಗೆ ಎಂಟ್ರಿ ಕೊಡ್ತಾರಾ?

 

ವಿಶೇಷ ವರದಿ:

ಚಿತ್ರದುರ್ಗ: ರಾಜ್ಯ ರಾಜಕಾರಣದಲ್ಲಿ ಕಳೆದ ಒಂದು ವಾರದಿಂದ ಸಚಿವ ಸಂಪುಟದ ಮಾತು ಸಾರ್ವಜನಕ ವಲಯಲ್ಲಿ  ಹೆಚ್ಚು ಕೇಳಿ ಬರುತ್ತಿದೆ.

ಹೌದು ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಮಂತ್ರಿಗಿರಿಯ ಸದ್ದು ಈ ಬಾರಿ ಸಖತ್  ಜೋರಾಗಿದೆ.  ಜಿಲ್ಲೆಯ ರಾಜಕಾರಣ ನೋಡಿದರೆ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಹಿರಿಯ ಶಾಸಕರು. 5 ಬಾರಿ ಶಾಸಕರಾಗಿ ಒಂದು ಬಾರಿ ವಿಧಾನ ಪರಿಷತ್ ಪ್ರವೇಶ ಪಡೆದಿದ್ದಾರೆ. ಅನೇಕ ಬಾರಿ ಸರ್ಕಾರ ರಚನೆಯ ವಿರುದ್ದವಾಗಿ ತಿಪ್ಪಾರೆಡ್ಡಿ ಅವರು ಗೆಲುವು ಸಾಧಿಸಿದ್ದಾರೆ. ಆದರೆ ಈ ಬಾರಿ ತಮ್ಮದೇ ಸರ್ಕಾರ ರಚನೆಯಾದರು ಸಹ ವಲಸಿಗರಿಗೆ ಅವಕಶ ಎಂಬ ನೆಪ ಹೇಳಿ ಯಡಿಯೂರಪ್ಪ ಕಳೆದ ಬಾರಿ ತಿಪ್ಪಾರೆಡ್ಡಿ ಅವರನ್ನು ನಿಗಮ ನೀಡುವ ಮೂಲಕ ಸಮಾಧಾನಪಡಿಸಲು ಯತ್ನಿಸಿದ್ದರು. ಆದರೆ ತಿಪ್ಪಾರೆಡ್ಡಿ ಅವರು ಮಾತ್ರ ನೇರವಾಗಿ ತಿರಸ್ಕಾರ ಮಾಡಿದ್ದರು. ಹೊಳಲ್ಕೆರೆ ಶಾಕ ಚಂದ್ರಪ್ಪ ಅವರು ಕೆ.ಎಸ್.ಆರ್.ಡಿಸಿ ನಿಗಮ ಪಡೆದಿದ್ದರು.  ತಿಪ್ಪಾರೆಡ್ಡಿಯವರು ಮಾತ್ರ ಆದರೆ ಸಚಿವರಾಗಬೇಕು ಎಂದರು. ಯಡಿಯೂರಪ್ಪ ಸಹ ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸಂಪುಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂಬ ಅಭಯ ನೀಡಿದ್ದರು. ಆದರೆ ಈಗ ಮುಖ್ಯಮಂತ್ರಿ ಬದಲಾವಣೆಯಾಗಿದ್ದು ಮುಖ್ಯಮಂತ್ರಿ   ಬಸವರಾಜ್ ಬೊಮ್ಮಾಯಿ ಅವರು ತಿಪ್ಪಾರೆಡ್ಡಿ ಅವರೊಂದಿಗೆ ಉತ್ತಮ ಸಂಬಂಧವಿದೆ.  ಜಿಲ್ಲೆಯಲ್ಲಿ ಹಿರಿಯರು ಮುಂದಿನ ಬಾರಿಗೆ 75 ವರ್ಷ ಕ್ರಾಸ್ ಆದವರಿಗೆ ಅಧಿಕಾರ ಇಲ್ಲ ಎಂಬ ಬಿಜೆಪಿ ನಿಯಮ ಅನ್ವಯ ಹಾಗೂ ಜಿಲ್ಲೆಯ ಅಭಿವೃದ್ಧಿ ಮತ್ತು ಪಕ್ಷ ಸಂಘಟನೆ. ಮುಂದಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ದೃಷ್ಟಿಯಿಂದ ಶ್ರೀರಾಮುಲು ಜೊತೆಗೆ ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಅನುಭವ ಜೊತೆಗೆ ಜಿಲ್ಲೆಯ ಸಮಸ್ಯೆಗಳನ್ನು ಅರಿತಿರುವುದರಿಂದ  ಮಣೆಯಾಕುತ್ತಾರೆ ಎಂಬ ನಂಬಿಕೆಯ ಜೊತೆಗೆ ತಿಪ್ಪಾರೆಡ್ಡಿ ಅವರು ಈ  ರಾಜ್ಯ ನಾಯಕರ ಜೊತೆಗೆ ರಾಷ್ಟ್ರೀಯ ನಾಯಕರನ್ನು  ಭೇಟಿ ಮಾಡಲು 2 ದಿನಗಳ ಹಿಂದೆ  ದೆಹಲಿಗೆ ಹಾರಿರುವ ಶಾಸಕ ತಿಪ್ಪಾರೆಡ್ಡಿ ಅವರು ವರಿಷ್ಠರಿಗೆ ಎಲ್ಲಾವನ್ನು ಮನವರಿಕೆ ಮಾಡಿಸಿ  ಈ ಬಾರಿ ಸಚಿವಗಿರಿ ಮಿಸ್ ಆಗದಂತೆ ನೋಡಿಕೊಳ್ಳುವ ಎಲ್ಲಾ ಪ್ರಕ್ರಿಯೆ ದೆಹಲಿಯಲ್ಲಿ  ಕುಳಿತು ಪಕ್ಕ ಮಾಡುತ್ತಿದ್ದು. ರಾಷ್ಟ್ರೀಯ ನಾಯಕರ ಗ್ರೀನ್ ಸಿಗ್ನಲ್ ಪಡೆದುಕೊಂಡು  ಬರುತ್ತಾರೆ ಎಂಬ ಮಾತು ಜಿಲ್ಲೆಯಾದ್ಯಂತ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲೆಯಲ್ಲಿ ಮತ್ತು ಚಿತ್ರದುರ್ಗ ತಾಲೂಕಿನಲ್ಲಿ  ಬಿಜೆಪಿಯನ್ನು ಎಮ್ಮರವಾಗಿ ಕಟ್ಟಿ ಬೆಳೆಸಿದ ಶಾಸಕರಿಗೆ  ಮಂತ್ರಿಗಿರಿ ಸಿಕ್ಕರೆ ಜಿಲ್ಲೆಗೆ ಅಭಿವೃದ್ಧಿ ಮತ್ತಷ್ಟು ಪುಷ್ಠಿ ನೀಡಿದಂತಾಗುತ್ತಾದೆ. ಅದು ಏನೇ ಇರಲಿ ಶಾಸಕ ತಿಪ್ಪಾರೆಡ್ಡಿ ಅವರನ್ನು ಒಮ್ಮೆ ಮಂತ್ರಿಯಾಗಿ ನೋಡಬೇಕು ಎಂಬ ಕನಸನ್ನು ಲಕ್ಷಾಂತರ ಅಭಿಮಾನಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಎಲ್ಲದಕ್ಕೂ ಇಂದು ಅಥವಾ ನಾಳೆ ಉತ್ತರ ಸಿಗಬಹುದು ಎಂಬ ಮಾತು ಕೇಳುತ್ತಿದೆ.

[t4b-ticker]

You May Also Like

More From Author

+ There are no comments

Add yours