ಚಳ್ಳಕೆರೆಯಲ್ಲಿ ಕೇಂದ್ರ ಸರ್ಕಾರದ ಪೆಟ್ರೋಲ್,ಡೀಸೆಲ್ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ.

 

ವರದಿ: ಚಳ್ಳಕೆರೆ ವೀರೇಶ್  

ಚಳ್ಳಕೆರೆ:  ಕೇಂದ್ರ ಸರ್ಕಾರದ ಬೆಳೆ ಏರಿಕೆ‌ ವಿರುದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೆಂಗಳೂರು ರಸ್ತೆಯ ನರಹರಿ ನಗರದ ಬಳಿಯ ಪೆಟ್ರೋಲ್ ಬಂಕ್‌ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಘೋಷಣೆ ಕೂಗಿದ ಕಾರ್ಯಕರ್ತರು ಬಡ, ಸಾಮಾನ್ಯ ವರ್ಗದ ಜನರ ಜೀವನದ ಹಾಸುಹೊಕ್ಕಾಗಿರುವ ತರಕಾರಿ, ಅಗತ್ಯ ವಸ್ತು, ವಿದ್ಯುತ್ , ಗ್ಯಾಸ್, ಪೆಟ್ರೋಲ್, ಡಿಸೇಲ್ ಗಳ ಬೆಲೆ ಗಗನಕ್ಕೇರಿವೆ. ಸಾಮಾನ್ಯರು ಕೊಂಡು ತಿನ್ನುವ ಪರಿಸ್ಥಿತಿ ಇಂದು ಇಲ್ಲ. ಇಂತಹ ಕೊರೋನಾ ಸಂಕಷ್ಟದಲ್ಲಿ ಜನರಿಗೆ ವ್ಯಾಪಾರವಿಲ್ಲ, ದುಡಿಮೆ ಇಲ್ಲ, ಯಾವುದೇ ದುಡಿಮೆ ಇಲ್ಲದ ಸಂದರ್ಭವನ್ನು ನೋಡಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿನಿತ್ಯವೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಲೇ ಇದ್ದಾರೆ. ಜನರಿಗೆ ಸಮಸ್ಯೆಯನ್ನು ಉಂಟು ಮಾಡಿ ಅಚ್ಚೇದಿನ್ ಎಂದು ಹೇಳುವ ಸರ್ಕಾರ ಬೆಳೆ ಕಡಿಮೆ ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಪ್ರಸನ್ನ ಕುಮಾರ್, ನಗರಂಗೆರೆ ಗ್ರಾಪಂ ಸದಸ್ಯ ಮಂಜುನಾಥ, ಸಿದ್ದಾಪುರ ಶೇಖರಪ್ಪ, ಮಹೇಶ್, ಸಿ.ಟಿ.ರಾಘವೇಂದ್ರ, ಹನುಮಂತಪ್ಪ, ಬಾಬು ಮುಂತಾದವರು ಇದ್ದರು.

 

[t4b-ticker]

You May Also Like

More From Author

+ There are no comments

Add yours