ಒಂದೇ ಗಂಟೆಯಲ್ಲಿ ಶೇಂಗಾ, ತೊಗರಿ ಖಾಲಿ ಎಂದ ಅಧಿಕಾರಿಗಳು ರೈತರು ಮಾಡಿದ್ದೇನು.

 

ಜೆಜಿ ಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆ ವತಿಯಿಂದ ರೈತರಿಗೆ ಉಚಿತವಾಗಿ ಶೇಂಗಾ ಹಾಗೂ ತೊಗರಿಯನ್ನು ನೀಡಲಾಯಿತು ಆದರೆ ಒಂದೇ ಗಂಟೆಯಲ್ಲಿ ಕೇಂದ್ರಕ್ಕೆ ಬಂದಿರುವ ಶೇಂಗಾ ಖಾಲಿಯಾಗಿದೆಯೆಂದು ಅಧಿಕಾರಿಗಳು ತಿಳಿಸಿದರು ಆ ಭಾಗದ ರೈತರು ಹಾಗೂ ರೈತ ಸಂಘದ ಪದಾಧಿಕಾರಿಗಳು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಅಧ್ಯಕ್ಷರಾದ ಕೆ ಟಿ ತಿಪ್ಪೇಸ್ವಾಮಿ ಮಾತನಾಡಿ ಕೇಂದ್ರಕ್ಕೆ ಎಷ್ಟು ಶೇಂಗಾ ಬಂದಿದೆ ಅದು ಒಂದೇ ಗಂಟೆಗೆ ಎಷ್ಟರಮಟ್ಟಿಗೆ ಕಾಲಿಯಾಗಿದೆ ಇದರ ಹಿಂದಿನ ಉದ್ದೇಶವೇನು ಕೃಷಿ ಮಂತ್ರಿಯವರು 5000 ರೈತರಿಗೆ ಉಚಿತವಾಗಿ ಬೀಜ ವಿತರಿಸಲಾಗುವುದು ಎಂದು ಹೇಳಿದ್ದರು ಆದರೆ ಕೆಲವೇ ಜನಗಳಿಗೆ ಅದರಲ್ಲೂ ಕೃಷಿ ಇಲಾಖೆಯ ಒಡನಾಟ ಇಟ್ಟುಕೊಂಡಂತೆ ರೈತರಿಗೆ ಮಾತ್ರ ಸಿಕ್ಕಿದೆ ನಿಜವಾದ ರೈತರಿಗೆ ಬೀಜ ಸಿಕ್ಕಿಲ್ಲ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅವರ ಅವಧಿ ಮುಗಿದು ಎರಡು ತಿಂಗಳಾದರೂ ಅವರ ಶಿಫಾರಸು ಪತ್ರಕ್ಕೆ ಮತ್ತು ಶಾಸಕರ ಪತ್ರಕ್ಕೆ ಎಂದು ಹೆಚ್ಚು ಮಹತ್ವ ಕೊಡುವುದಾದರೆ ಸಾಮಾನ್ಯ ರೈತರಿಗೆ ಇಂತಹ ಕೃಷಿ ಇಲಾಖೆಯ ಪರಿಕರಗಳು ಎಷ್ಟರಮಟ್ಟಿಗೆ ದೊರಕುತ್ತವೆ ಎಂದು ಪ್ರಶ್ನಿಸಿದರು ಹಾಗೂ ಇಲಾಖೆಯಲ್ಲಿ ನೀಡುವ ಅನೇಕ ಉಪಕರಣಗಳು ಕಳಪೆಯಿಂದ ಕೂಡಿರುತ್ತವೆ ಇಂತಹ ಉಪಕರಣಗಳಿಗೆ ಅರ್ಧದಷ್ಟು ಸಬ್ಸಿಡಿ ಇಲಾಖೆಯಿಂದ ನೀಡಿದರು ಪ್ರಯೋಜನವಾಗುತ್ತಿಲ್ಲ ಹೊರಗಡೆ ಉತ್ತಮ ಗುಣಮಟ್ಟ ಹೊಂದಿರುವ ಉಪಕರಣಗಳು ಸ್ವಲ್ಪಜಾಸ್ತಿ ಇರುತ್ತದೆ ಆದ್ದರಿಂದ ರೈತರಿಗೆ ಇಲಾಖೆಯಿಂದ ಯಾವ ಯಾವ ಉಪಕರಣಗಳು ದೊರೆಯುತ್ತವೆ ಯಾವ ದರದಲ್ಲಿ ಬರುತ್ತವೆಂದು ಫಲಕದಲ್ಲಿ ಪ್ರಕಟಿಸಬೇಕು ಮತ್ತು ಎಲ್ಲಾ ಉಪಕರಣಗಳು ಮತ್ತು ಬೀಜ ಇತ್ಯಾದಿ ಕೊಟ್ಟವರಿಗೆ ಕೊಡಬಾರದು ಬೇರೆಬೇರೆ ರೈತರಿಗೂ ಇಲಾಖೆಯ ಸಬ್ಸಿಡಿಗಳು ದೊರೆಯುವಂತಾಗಬೇಕು. ಎಲ್ಲದ ಕೆರೆ ಉಪಕೇಂದ್ರ ಮಾಡುವುದಾಗಿ ಹೇಳುತ್ತಿದ್ದಾರೆ ಆದರೆ ಇದುವರೆಗೂ ಉಪಕೇಂದ್ರ ಪ್ರಾರಂಭವಾಗಲಿಲ್ಲ ಎಲ್ಲದ ಕೆರೆ ದಿಂಡಾವರ ಗೌಡನಹಳ್ಳಿ ರಂಗನಾಥಪುರ ಮತ್ತು ಕಸ್ತೂರ್ ಅಂಗಪ್ಪ ನಹಳ್ಳಿ ಎಲ್ಲಾ ಭಾಗಕ್ಕೂ ಅನುಕೂಲವಾಗಬೇಕು ಕೃಷಿ ಇಲಾಖೆಗೆ ಅನೇಕ ಅನುದಾನ ಬರುತ್ತಿದ್ದು ಇದರ ದುರುಪಯೋಗವಾಗುತ್ತಿದೆ ಗೊಬ್ಬರ ಹಾಗೂ ಕೀಟನಾಶಕ ಮತ್ತು ಬೀಜ ಇವುಗಳನ್ನು ಗುಣಮುಖ ಗುಣಮಟ್ಟದ ಪರೀಕ್ಷಿಸಿ ವಿತರಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಇಲಾಖೆಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದ ತಿಮ್ಮಾರೆಡ್ಡಿ ಶಿವಣ್ಣ ಮಂಜುನಾಥ್ ಕುಮಾರ್ ತಿಮ್ಮಣ್ಣ ಮಹೇಶ್ ಶೌಕತ್ ಸಾಬ್ ಕೃಷ್ಣಮೂರ್ತಿ ತಿರುಮಲೇಶ್ ಸೂಪರ್ ಪೂಜಾರಿ ಪೂಜಾರಿ ಸಣ್ಣಪ್ಪ ವೆಂಕಟಸ್ವಾಮಿ ಲಕ್ಷ್ಮೀದೇವಿ ಹನುಮಂತಗೌಡ ಜಗದೀಶ್ ರಾಮಣ್ಣ ಮಂಜುನಾಥ್ ಉಪಸ್ಥರಿದ್ದರು

[t4b-ticker]

You May Also Like

More From Author

+ There are no comments

Add yours