ಪ್ರಕೃತಿಯಲ್ಲಿ ನಮ್ಮ ಬದುಕಿಗೆ ಅಗತ್ಯವಾಗಿ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳಿವೆ: ಅರುಣ್ ಕುಮಾರ್

 

ಚಿತ್ರದುರ್ಗ ಜು. ೦೪

ಪ್ರಕೃತಿಯಲ್ಲಿ ನಮ್ಮ ಬದುಕಿಗೆ ಅಗತ್ಯವಾಗಿ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳಿವೆ ಅವುಗಳನ್ನು ಉಪಯೋಗ ಮಾಡಿಕೊಂಡವರು ಮರಳಿ ಪ್ರಕೃತಿಗೆ ನಾವು ಏನನ್ನು ಸಹಾ ನೀಡದೆ ಇದ್ದಾಗ ಪ್ರಕೃತಿ ಈ ರೀತಿಯಾದ ಶಿಕ್ಷೆಯನ್ನು ನೀಡುತ್ತದೆ ಇದರ ಬದಲಾಗಿ ಸಸಿಗಳನ್ನು ನೆಡುವುದರ ಮೂಲಕ ಪ್ರಕೃತಿಯನ್ನು ಕಾಪಾಡಬೇಕಿದೆ ಎಂದು ಭಾಜಪದ ಅರುಣ್ ಕುಮಾರ್ ತಿಳಿಸಿದರು.

ನಗರದ ಹೂರ ವಲಯದ ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಇಂದು ಭಾಜಪದವತಿಯಿಂದ ನಡೆದ ಪ್ರಕೃತಿಗೆ ಬೀಜದ ಉಂಡೆಗಳ ಸಮರ್ಪಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮಗೆ ಏನಾದರೂ ಆನಾರೋಗ್ಯ ಕಂಡು ಬಂದರೆ ಚಿಕಿತ್ಸೆ ಪಡೆಯುವ ಮುನ್ನಾ ನಮ್ಮ ಮನೆಯಲ್ಲಿ ಸಿಗುವ ವಿವಿಧ ರೀತಿಯ ಔಷಧಿ ಗುಣವುಳ್ಳ ಸಂಬಾರ ಪದಾರ್ಥಗಳನ್ನು ಉಪಯೋಗ ಮಾಡುವುದರ ಮೂಲಕ ಕಡಿಮೆ ಮಾಡಬಹುದಾಗಿದೆ. ಅಡುಗೆ ನಮ್ಮ ಚಿಕಿತ್ಸೆಗೆ ಪ್ರಥಮ ಔಷಧಾಲಯವಾಗಿದೆ ಎಂದು ತಿಳಿಸಿದರು.

ನಮ್ಮಲ್ಲಿ ಬೆಳೆಯುವಂತ ಸಂಬಾರ ಪದಾರ್ಥಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡುವುದರ ಮೂಲಕ ಉತ್ತಮವಾದ ಆರೋಗ್ಯವನ್ನು ಪಡೆಯಬಹುದಾಗಿದೆ ನಮ್ಮಲ್ಲಿ ಬೆಳೆಯುವ ಎಷ್ಟೊ ಬೆಳೆಗಳು ನಮ್ಮ ಜೀವನಕ್ಕೆ ಅಗತ್ಯವಾಗಿ ಬೇಕಾದ ವಸ್ತುಗಳಾಗಿವೆ ಆದರೆ ಇದರ ಮಹತ್ವ ನಮಗೆ ತಿಳಿದಿಲ್ಲ ಬೇರ ದೇಶದವರು ನಮ್ಮ ಪದಾರ್ಥಗಳನ್ನು ಕಳುಹಿಸಿ ಕೂಡಿ ಎಂದು ಬೇಡುತ್ತಿದ್ದಾರೆ. ಪ್ರಕೃತಿ ನಮಗೆ ಎಲ್ಲಾ ರೀತಿಯ ಸೌಕರ್ಯವನ್ನು ಮಾಡಿಕೊಟಿದ್ದಾಳೆ. ಇದಕ್ಕೆ ಪ್ರತಿಯಾಗಿ ನಾವುಗಳು ಪ್ರಕೃತಿಗೆ ಈ ರೀತಿಯಾದ ಬೀಜದ ಉಂಡೆಗಳನ್ನು ನಿರ್ಮಾಣ ಮಾಡಿ ಅವುಗಳನ್ನು ಮಳೆಗಾಲದಲ್ಲಿ ಅರ್ಪಿಸುವುದರ ಮೂಲಕ ಆಕೆಯನ್ನು ಮತ್ತಷ್ಟು ಔಷಧಿ ಮಹತ್ವನ್ನು ಹೆಚ್ಚಳ ಮಾಡಬೇಕಿದೆ ಎಂದು ಅರುಣ್ ಕುಮಾರ್ ಕರೆ ನೀಡಿದರು.

ಪರಿಸರವನ್ನು ಉಳಿಸುವ ಕೆಲಸ ಸಾಂಕ್ರಾಮಿಕ ರೋಗದ ರೀತಿಯಲ್ಲಿ ಆಗಬೇಕಿದೆ ಸಾಂಕ್ರಾಮಿಕ ಪದವನ್ನು ಬರೀ ರೋಗಕ್ಕೆ ಮಾತ್ರವೇ ಬಳಸದೇ ಈ ರೀತಿಯಾದ ಉತ್ತಮವಾದ ಕಾರ್ಯಕ್ರಮಗಳಿಗೂ ಸಹಾ ಬಳಕೆ ಮಾಡಿ ಸಸಿಯನ್ನು ಬೆಳಸುವ ಕಾರ್ಯವಾಗಬೇಕಿದೆ. ನಮ್ಮ ಪಕ್ಷದ ಮೂಲ ಪುರುಷರಾದ ಶ್ರೀ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಸ್ಮರೋಣೋತ್ಸವ ನಿಮಿತ್ತ ಜೂನ್ ೨೩ ರಿಂದ ೬ ರವರೆಗೂ “ಸೇವಾ ಹೀ ಸಂಘಟನ್” ಎನ್ನುವುದರ ಮುಖಾಂತರ ಭಾರತೀಯ ಜನತಾ ಪಕ್ಷದ ಚಿತ್ರದುರ್ಗ ಜಿಲ್ಲಾವತಿಯಿಂದ ೨೧೦೦೦ಕ್ಕೂ ಅಧಿಕ ಬೀಜದ ಉಂಡೆಗಳನ್ನು (ಸೀಡ್ ಬಾಲ್) ಸತತವಾಗಿ ೭ ದಿನಗಳ ಕಾಲ ನಗರ ಅಕ್ಕಮಹಾದೇವಿ ಸಮಾಜದ ಆವರಣದಲ್ಲಿ ಬಿಜೆಪಿಯ ಎಲ್ಲಾ ಪದಾಧಿಕಾರಿಗಳು ಮತ್ತು ಶಾಸಕರು ಸಂಸದರು ಭಾಗವಹಿಸಿ ತಯಾರಿಸುವ ಕಾರ್ಯ ನಡೆದಿದ್ಧಾರೆ ಇದರಲ್ಲೂ ಮಹಿಳಾ ಘಟಕದವರು ಹೆಚ್ಚಿನ ಪಾತ್ರವನ್ನು ವಹಿಸಿ ಕಾರ್ಯವನ್ನು ಮಾಡಿದ್ದಾರೆ ಎಂದು ಪಕ್ಷದ ಕಾರ್ಯಕರ್ತರ ಕಾರ್ಯವನ್ನು ಶ್ಲಾಘೀಸಿದರು.

ನಮ್ಮಲ್ಲಿ ಸದಾ ಕೈಗೆ ಸಿಗುವಂತ ನುಗ್ಗೆ ಸೂಪ್ಪು, ವೀಳದೈಲೆ ಹಾಗೂ ತುಳಸಿ ಇವು ಮಾನವ ಆರೋಗ್ಯವನ್ನು ಕಾಪಾಡುವ ಪ್ರಕೃತಿಯ ಔಷಧಿಗಳಾಗಿದೆ ಇವುಗಳಲ್ಲಿ ಇರುವ ಗುಣಗಳಿಂದ ನಮ್ಮ ದೇಹಕಕೆ ಉತ್ತಮವಾದ ಖನಿಜಾಂಶಗಳು ದೂರೆಯತ್ತವೆ. ಮಾತ್ರಗಳನ್ನು ಪಡೆಯುವುದಕ್ಕಲೂ ಮುನ್ನಾ ಔಷಧಿಯ ಗುಣವುಳ್ಳ ಸಂತ್ ಭರಿತವಾದ ಸಂಬಾರ ಮತ್ತು ಸೊಪ್ಪುಗಳನ್ನು ಸೇವನೆ ಮಾಡಿ ಇದಕ್ಕು ಮುನ್ನಾ ಇವುಗಳು ಬೆಳೆಯುವುದಕ್ಕೆ ವಾತಾವರಣವನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಅರುಣ್ ಕುಮಾರ್ ತಿಳಿಸಿದರು.

ರವಿಕುಮಾರ್ ಮಾತನಾಡಿ, ಇತ್ತೀಚಿನ ದಿನದಲ್ಲಿ ಮರಗಳ ಪ್ರಮಾಣ ಕಡಿಮೆಯಾಗಿ ಆಮ್ಲಜನಕವನ್ನು ಬೇರೆ ಕಡೆಯಿಂದ ತರಿಸುವ ಕಾರ್ಯವನ್ನು ಮಾಡಬೇಕಾಯಿತು. ಇದರ ಬದಲು ನಮ್ಮಲ್ಲಿ ಉತ್ತಮವಾದ ಪರಿಸರ ಇದಿದ್ದರೆ ಉತ್ತಮವಾದ ಗಾಳಿಯನ್ನು ಪಡೆಯುವುದರ ಮೂಲಕ ಆರೋಗ್ಯವನ್ನು ಸುಧಾರಿಸಬಹುದಾಗಿತೆಂದು ತಿಳಿಸಿ, ನಗರ ಪ್ರದೇಶದಲ್ಲಿ ಶುದ್ದವಾದ ಪರಿಸರ ಸಿಗುವುದು ಕಷ್ಟವಾಗಿದೆ ಸಾಧ್ಯವಾದಷ್ಟು ಮನೆಯ ಮುಂದೆ ಗಿಡಗಳನ್ನು ನಡೆವುದರ ಮೂಲಕ ಉತ್ತಮವಾದ ಪರಿಸರ ನಿರ್ಮಾಣಕ್ಕೆ ನಮ್ಮ ಕೂಡುಗೆಯನ್ನು ನೀಡಬೇಕಿದೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಮುರುಳಿ ಮಾತನಾಡಿ, ಕಳೆದ ೧ ವಾರದಿಂದ ಬೀಜದ ಉಂಡೆಗಳನ್ನು ಪರಿಸರ ಬೆಳೆಸುವ ಹಾಗೂ ಪ್ರಾಣಿ- ಪಕ್ಷಿಗಳ ಸಂತುಲಗಳಿಗೆ ಮುಂದಿನ ದಿನಗಳಲ್ಲಿ ಆಹಾರದ ಅನುಕೂಲವಾಗುವ ಮೂಲ ಉದ್ದೇಶದಿಂದ ತಯಾರಿಸಲಾಗಿದೆ. ಈ ಬೀಜದ ಉಂಡೆಗಳನ್ನು ಜೋಗಿಮಟ್ಟಿ, ಆಡುಮಲ್ಲೇಶ್ವರ,, ಇಂಗಾಳ್ ದಾಳ್ ಕಣಿವೆ,, ಚಂದ್ರವಳ್ಳಿ ಸುತ್ತ ಮುತ್ತಲಿನ ಪ್ರದೇಶದಲ್ಲಿ ಎಸೆಯುವ ಕಾರ್ಯ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸದ ನಾರಾಯಣಸ್ವಾಮಿ, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶೀ ಕೆ.ಎಸ್.ನವೀನ್, ಸಿದ್ಧೇಶ್ ಯಾದವ್, ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬದರಿನಾಥ್, ಸದಸ್ಯರಾದ ಶ್ರೀಮತಿ ರೇಖಾ, ನಗರಾಧ್ಯಕ್ಷ ಶಶಿಧರ್, ವೆಂಕಟೇಶ್ ಯಾದವ್ ಶಿವಣ್ಣಾಚಾರ್, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶೈಲಜಾ ರೆಡ್ಡಿ, ಶ್ರೀಮತಿ ರತ್ನಮ್ಮ, ನಗರಸಭಾ ಸದಸ್ಯರಾದ ಹರೀಶ್, ಸುರೇಶ್, ಶ್ರೀನಿವಾಸ್, ಪಕ್ಷದ ವಕ್ತಾರರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

.

[t4b-ticker]

You May Also Like

More From Author

+ There are no comments

Add yours