ಅನಾಮಧೇಯ ಶವ ಪತ್ತೆ

 

ಚಿತ್ರದುರ್ಗ, ಡಿಸೆಂಬರ್16:
ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆಯಲ್ಲಿ ಸುಮಾರು 45 ರಿಂದ 50 ವರ್ಷದ ಅನಾಮಧೇಯ ಮಹಿಳೆ ಮೃತಪಟ್ಟಿರುವ ಪ್ರಕರಣ ಇದೇ ಡಿಸೆಂಬರ್ 15ರಂದು ಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮೃತ ಅನಾಮಧೇಯ ಹೆಂಗಸಿನ ಚಹರೆ ಇಂತಿದೆ. ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ತಲೆಯಲ್ಲಿ 11 ಇಂಚು ಉದ್ದದ ಕಪು ಕೂದಲು ಇರುತ್ತೆ. ಮೃತರ ಹಣೆಯ ಮಧ್ಯದಲ್ಲಿ ಕುಂಕುಮ ಬೊಟ್ಟಿನಂತಹ ಹಚ್ಚೆ ಗುರುತು ಇರುತ್ತದೆ. ಮೃತೆಯ ಎಡಗೈ ಹೆಬ್ಬೆರಳ ಬಳಿ ಮೂರು ಚುಕ್ಕೆಯಂತಹ ಹಚ್ಚೆ ಗುರುತು ಇರುತ್ತದೆ.
ಮೃತರ ಎಡಗೈ ಒಳಭಾಗದಲ್ಲಿ ಬಸಮ್ಮ, ಲಕ್ಷ್ಮಿ ಎಂಬ ಹಚ್ಚೆಯ ಗುರುತು ಇರುತ್ತದೆ. ಬಲಗೈಯಲ್ಲಿ ಮಣಿಕಟ್ಟಿನ ಬಳಿ ಒಂದು ಚಿತ್ರದ ಹಚ್ಚೆ ಗುರುತು ಮತ್ತು ಹೂವಿನ ಹಚ್ಚೆಯ ಗುರುತು ಇರುತ್ತದೆ. ಸುಮಾರು 5 ಅಡಿ ಎತ್ತರ ಇದ್ದು, ಹಸಿರು ಬಣ್ಣದ ಎಲೆ ಡಿಸೈನ್ ಸೀರೆ, ಗುಲಾಬಿ ಬಣ್ಣದ ಜಾಕೀಟ್, ಬಳಿ ಬಣ್ಣದ ಲಂಗ, ಎರಡು ಕೈಗಳಲ್ಲಿ ಹಸಿರು ಗಾಜಿನ ಬಳೆಗಳು ಇರುತ್ತವೆ.
ಮೃತ ಅನಾಮಧೇಯ ಹೆಂಗಸಿನ ಹೆಸರು, ವಿಳಾಸ ಮತ್ತು ವಾರಸುದಾರರು ಪತ್ತೆಯಾದಲ್ಲಿ ಪೊಲೀಸ್ ನಿರೀಕ್ಷಕರು ಕೋಟೆ ಪೊಲೀಸ್ ಠಾಣೆ-08194-222933, 9480803145, ಪೊಲೀಸ್ ಉಪಾಧೀಕ್ಷಕರು ಚಿತ್ರದುರ್ಗ ಉಪವಿಭಾಗ-08194-222430, 9480803120, ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ 08194-222782 ಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಕೋಟೆಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours