ಮಕ್ಕಳಿಗೆ ದೈನಂದಿನ ಲಸಿಕೆ ಕಾಲಕಾಲಕ್ಕೆ ಕೊಡಿಸಿ, ಮಾರಕ ರೋಗಗಳಿಂದ ರಕ್ಷಿಸಿ: ಡಾ.ಬಿ.ವಿ.ಗಿರೀಶ್

 

ಚಿತ್ರದುರ್ಗ, ಡಿಸೆಂಬರ್16:
ಮಕ್ಕಳಿಗೆ ಕಾಲಕಾಲಕ್ಕೆ ಸರಿಯಾಗಿ ದೈನಂದಿನ ಲಸಿಕಾ ಸತ್ರಗಳಲ್ಲಿ ಭಾಗವಹಿಸಿ ಲಸಿಕೆಯನ್ನು ಕೊಡಿಸಿ ಮಕ್ಕಳನ್ನು 12 ಮಾರಕ ರೋಗಳಿಂದ ರಕ್ಷಿಸಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಚಿತ್ರದುರ್ಗ ಸಮೀಪದ ಮಠದ ಕುರುಬರಹಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ದೈನಂದಿನ ಲಸಿಕಾ ಕಾರ್ಯಕ್ರಮ ತಾಯಂದಿರ ಸಭೆಯಲ್ಲಿ ಮಾಹಿತಿ ಶಿಕ್ಷಣ ನೀಡಿದರು.
ಜಿಲ್ಲಾ ಪಂಚಾಯಿತಿ ಸಾಮಾಜಿಕ ವರ್ತನೆ ಬದಲಾವಣೆ ಸಂಯೋಜಕ ಸುನಿಲ್ ಮಾತನಾಡಿ, ನಾವಿನ್ನು ಕೋವಿಡ್ ಜೊತೆಯಲ್ಲಿ ಜೀವಿಸುತ್ತಿದ್ದೇವೆ. ಕೋವಿಡ್ ಇನ್ನೂ ಹೋಗಿಲ್ಲ. ಎಲ್ಲರೂ ಕೋವಿಡ್ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಿ ಮಾಸ್ಕ್‍ಧಾರಣೆ, ಸಾಮಾಜಿಕ ಅಂತರ ಕಾಪಾಡುವ ಕೈಗಳನ್ನು ತೊಳೆಯುವುದು ನಿರಂತರವಾಗಿರಲಿ. ತಪ್ಪದೇ ಎಲ್ಲರೂ ಎರಡು ಡೋಸ್ ಲಸಿಕೆ ಪಡೆಯಿರಿ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಮಗು ಹುಟ್ಟಿದ ಅರ್ಧಗಂಟೆಯೊಳಗೆ ತಾಯಿಯ ಹಾಲನ್ನು ಕುಡಿಸಿ ಯಾವುದೇ ಕಾರಣಕ್ಕೂ ಜೇನುತುಪ್ಪ, ಸಕ್ಕರೆ, ತೀರ್ಥ, ಬಂಡಾರ ಧೂತಗಳನ್ನು ನೆಕ್ಕಿಸಬೇಡಿ. ಆರು ತಿಂಗಳವರೆಗೆ ಎದೆ ಹಾಲನ್ನು ಮಾತ್ರ ಕುಡಿಸಿ ಆರು ತಿಂಗಳ ನಂತರ ಎದೆಹಾಲಿನೊಂದಿಗೆ ದಿನಕ್ಕೆ 5 ರಿಂದ 6 ಬಾರಿ ಮೃದುವಾದ ಆಹಾರವನ್ನು ನೀಡಿ ಕಡೇ ಪಕ್ಷ ಎರಡು ವರ್ಷಗಳವರೆಗಾದರೂ ಎದೆಹಾಲು ನೀಡುವುದನ್ನು ಮುಂದುವರೆಸಿ ಸಕಾಲದಲ್ಲಿ ಪೂರಕ ಆಹಾರ ಪ್ರಾರಂಭಿಸಿದರೆ ಮಗು ಅಪೌಷ್ಠಿಕತೆ ತುತ್ತಾಗುವುದಿಲ್ಲ. ಸಮಪರ್ಕ ಆಹಾರ ನೀಡಿದಲ್ಲಿ ಕಾಲಕಾಲಕ್ಕೆ ಲಸಿಕೆಯನ್ನು ಕೊಡಿಸುವುದರಿಂದ ನಿಮ್ಮ ಮಗು ಸೋಂಕು ರೋಗಳಿಂದ ರಕ್ಷಣೆ ಪಡೆಯುತ್ತದೆ. ಇದರಿಂದ ಶಿಶುಮರಣ ಪ್ರಮಾಣ ತಗ್ಗುತ್ತದೆ ಎಂದರು.
ತಾಲ್ಲೂಕು ಆರೋಗ್ಯ ಸುರಕ್ಷಾಧಿಕಾರಿ ಪರ್ವಿನ್ ಮಾತನಾಡಿ, ಲಸಿಕೆಗಳ ಮಹತ್ವ, ಪೌಷ್ಠಿಕ ಪುನಶ್ಚೇತನ ಕೇಂದ್ರಗಳಲ್ಲಿ ದೊರೆಯುವ ಸೇವೆಗಲ ಬಗ್ಗೆ ತಿಳಿಸಿದರು.
ಕಿರಿಯ ಆರೋಗ್ಯ ಸುರಕ್ಷಾಧಿಕಾರಿ ಶಿಲ್ಪಾ, ಸಮುದಾಯ ಆರೋಗ್ಯಾಧಿಕಾರಿ ಜೈಲತಾ ಮಕ್ಕಳಿಗೆ ಲಸಿಕೆ ನೀಡಿ ಗರ್ಭಿಣಿಯರ ತಪಾಸಣೆ ನಡೆಸಿ, ತಾಯಿ ಕಾರ್ಡ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಆಶಾ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

=====

[t4b-ticker]

You May Also Like

More From Author

+ There are no comments

Add yours