ಉದ್ಯಮ ಕ್ಷೇತ್ರದ ಕಡೆ ಯುವ ಸಮೂಹ ಹೆಜ್ಜೆ ಹಾಕಬೇಕು:ಪಿ.ವಿ.ಅರುಣ್ ಕುಮಾರ್

 

ಚಿತ್ರದುರ್ಗ :ನಮ್ಮ  ಪ್ರತಿ ಕೆಲಸದಲ್ಲಿ  ಶ್ರದ್ದೆ ಇದ್ದರೆ ಮಾತ್ರ ನಾವು  ಸಾಧನೆ ಮಾಡುವ ಮೂಲಕ ಗುರಿ ಮುಟ್ಟಬಹುದು,ಯುವ ಸಮೂಹ ಉದ್ಯಮ ಆರಂಭಿಸಲು ಸರ್ಕಾರ ಸಹಕಾರ ನೀಡುತ್ತಿದ್ದು  ನವ ಉದ್ಯಮ ಕ್ಷೇತ್ರದ ಕಡೆ ಗಮನಹರಿಸಿ  ಎಂದು ಅಹೋಬಲ ಟಿ.ವಿ.ಎಸ್ ಮಾಲೀಕ ಪಿ.ವಿ. ಅರುಣ್‌ಕುಮಾರ್  ತಿಳಿಸಿದರು.

ಭಾರತ ಸರ್ಕಾರ,ನೆಹರು ಯುವ ಕೇಂದ್ರ ಚಿತ್ರದುರ್ಗ ಮತ್ತು ಮದಕರಿ ಯುವಕ ಸಂಘ (ರಿ) ಚಿತ್ರದುರ್ಗ ಇವುಗಳ ಸಂಯುಕ್ತಾಶ್ರಯದಲ್ಲಿ ಬಸವೇಶ್ವರ ಟಾಕೀಸ್ ರಸ್ತೆಯ ಸಿಲಿಕಾನ್ ಇನ್ಸಟ್ಯೂಟ್  ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ, ರಾಷ್ಟ್ರೀಯ  ಯುವ ದಿನಾಚರಣೆ ಹಾಗೂ ಯುವ ಸಪ್ತಾಹ ಮತ್ತು ಕೌಶಲ್ಯ ಅಭೀವೃಧ್ದಿ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದಿನಗಗಳಲ್ಲಿ  ಎಲ್ಲಾರಿಗೂ  ಕಂಪ್ಯೂಟರ ಜ್ಞಾನ ಅತಿ ಅಗತ್ಯವಾಗಿದೆ. ಎಲ್ಲಾ ರಂಗದಲಿ  ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ  ಮಾಡಿದ್ದು ಅತ್ಯಾಧುನಿಕ ತಂತ್ರಜ್ಞಾನ ಕಡೆ ನಾವು  ಹಜ್ಜೆ ಹಾಕಬೇಕು.  ಸರ್ಕಾರದ ಯೋಜನೆಗಳನ್ನು ಯುವ ಸಮೂಹ ಸದ್ಬಳಕೆ ಮಾಡಿಕೊಂಡು ಸ್ವಯಂ ಉದ್ಯೋಗ ಕೈಗೊಳ್ಳಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಿಂದ ಉದ್ಯಮ ಆರಂಭಿಸಬಹುದು. ರಾಷ್ಟ್ರೀಯ ಯುವ ಸಪ್ತಾಹ ಒಂದು ವಾರಗಳ ಕಾಲ ನಡೆಯುತ್ತಿದ್ದು ಅತ್ಯಂತ ಉತ್ತಮ ಬೆಳವಣಿಗೆಯಾಗಿದ್ದು ಸ್ವಾಮಿ ವಿವೇಕಾನಂದ ಅವರು ನಮಗೆಲ್ಲ ಸ್ಪೂರ್ತಿ ಆಗಿದ್ದಾರೆ. ನಾವೆಲ್ಲರೂ ಅವರು ಹಾಕಿ ಕೊಟ್ಟ ದಾರಿಯಲ್ಲಿ ನಡೆಯೋಣ ಎಂದರು.

ದೇಶದ ಬಗ್ಗೆ ಅಭಿಮಾನ ಅಗತ್ಯ

ಭಾರತ ಸರ್ಕಾರದ ನೆಹರು ಯುವ ಕೇಂದ್ರದ ಜಿಲ್ಲಾ ಯವಜನ ಅಧಿಕಾರಿಗಳು ಸುಹಾಸ್ ಎನ್ ಮಾತನಾಡಿ, ವಿವೇಕಾನಂದರಂತೆ ಎಲ್ಲಾ ಯುವ ಜನತೆಯೂ ಸಹಾ ದೇಶದ ಬಗ್ಗೆ ಅಭಿಮಾನವನ್ನು ಬೆಳಸಿಕೊಳ್ಳಬೇಕಿದೆ. ವಿವೇಕಾನಂದರು ದೇಶದ ಬಗ್ಗೆ ಆಪಾರವಾದ ಕಾಳಜಿಯನ್ನು ಹೊಂದಿದ್ದರು, ಅಷ್ಟೇ ಪ್ರಮಾಣದಲ್ಲಿ ದೇಶಕ್ಕೆ ಕೊಡುಗೆಯನ್ನು ಸಹಾ ನೀಡಿದ್ದಾರೆ. ಚಲನಚಿತ್ರ ನಟರನ್ನು ಮಾದರಿಯನ್ನಾಗಿ ಇಟ್ಟುಕೊಳ್ಳುವುದಕ್ಕಿಂತ ಸ್ವಾಮಿ ವಿವೇಕಾನಂದರನ್ನು ಮಾದರಿಯನ್ನಾಗ ಇಟ್ಟುಕೊಳ್ಳಿ ಇವರ ಜನ್ಮ ದಿನದ ಅಂಗವಾಗಿ ಜ. ೧೨ ರಿಂದ ೧೯ರವರೆಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಮ್ಮ ನೆಹರು ಯುವ ಕೇಂದ್ರದಿಂದ ಹಮ್ಮಿಕೊಳ್ಳಲಾಗುತ್ತದೆ. ಇದರ ಪ್ರಯೋಜನವನ್ನು ಪಡೆಯಬೇಕಿದೆ ಎಂದರು.

ಇಂದಿನ ದಿನಮಾನದಲ್ಲಿ ಶಿಕ್ಷಣದ ಜೊತೆಗೆ ಯಾವುದಾದರೂ ಕೌಶಲ್ಯ ಹೊಂದಿರುವುದು ಅಗತ್ಯವಾಗಿದೆ, ಕೌಶಳ್ಯ ಇಲ್ಲದಿದ್ದರೆ ಏನು ಪ್ರಯೋಜನವಾಗುವುದಿಲ್ಲ, ನಿಮ್ಮಲ್ಲಿ ಕೌಶಲ್ಯ ಇದ್ದರೆ ಬೇರೆಯವರು ಕರೆದು ಕೆಲಸವನ್ನು ನೀಡುತ್ತಾರೆ. ನಮ್ಮಲ್ಲಿ ಲಕ್ಷಾಂತರ ಮಂದಿ ವಿದ್ಯಾವಂತರಿದ್ದಾರೆ ಆದರೆ ಕೌಶಲ್ಯವನ್ನು ಹೊಂದಿರುವವರ ಸಂಖ್ಯೆ ಕಡಿಮೆ ಇದೆ ಇದರಿಂದ ನಿರುದ್ಯೋಗ ತಾಂಡವಾಡುತ್ತಿದೆ, ಆದರೆ ಕೌಶಲ್ಯವನ್ನು ಹೊಂದಿರುವ ಯಾವ ವ್ಯಕ್ತಿಯೂ ಸಹಾ ನಿರುದ್ಯೋಗಿಯಾಗಿರುವುದಿಲ್ಲ ಆತ ಸ್ವಯಂ ಉದ್ಯೋಗಿಯಾಗಿ ಬೇರೆಯವರಿಗೆ ಕೆಲಸವನ್ನು ನೀಡುವಂತನಾಗಿರುತ್ತಾನೆ ಎಂದು ಸುಹಾಸ್ ತಿಳಿಸಿದರು.

ಕಂಪ್ಯೂಟರ್ ತರಬೇತಿದಾರರಾದ ಜಾವಿದ್ ಉಪನ್ಯಾಸ ನೀಡುತ್ತಾ, ಯುವ ಜನತೆಯಲ್ಲಿ ಇರುವ ಕೌಶಲ್ಯವನ್ನು ಹೊರ ತೆಗೆಯುವ ಕಾರ್ಯವನ್ನು ಕೇಂದ್ರ ಸರ್ಕಾರ ಕೌಶಲ್ಯ ತರಬೇತಿಯನ್ನು ನೀಡುವುದರ ಮೂಲಕ ಮಾಡುತ್ತಿದೆ. ಕೌಶಲ್ಯತೆ ನಿರುದ್ಯೋಗವನ್ನು ದೂರ ಮಾಡುತ್ತದೆ, ಬದುಕನ್ನು ರೂಪಿಸಿಕೊಂಡುತ್ತದೆ. ಯುವ ಜನತೆ ತಮ್ಮಲ್ಲಿನ ಕೌಶಲ್ಯತೆಯನ್ನು ಹೆಚ್ಚಿಗೆ ಮಾಡಿಕೊಳ್ಳಬೇಕಿದೆ, ಇದಕ್ಕಾಗಿ ಇರುವ ತರಬೇತಿಗಳನ್ನು ಪಡೆಯುವಂತೆ ಮನವಿ ಮಾಡಿದರು.

ಇದನ್ನೂ ಓದಿ: ಈ ಹಳ್ಳಿಗಳಲ್ಲಿ ಹೆಂಡತಿಯನ್ನು ಬಾಡಿಗೆ ಪಡೆಯಬಹುದು

ಅಧ್ಯಕ್ಷತೆಯನ್ನು ವಹಿಸಿದ್ದ ಸಿಲಿಕಾನ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿಯ ಸಂಸ್ಥಾಪಕರಾದ ಡಿ ಗೋಪಾಲಸ್ವಾಮಿ ನಾಯಕ ಮಾತನಾಡಿ, ನಿಮ್ಮಲ್ಲಿನ ಕೌಶಲ್ಯವನ್ನು ಅಭೀವೃದ್ದಿ ಪಡಿಸಿಕೊಂಡು ಕೆಲಸವನ್ನು ಪಡೆಯಿರಿ, ಇದೇ ರೀತಿ ಕೌಶಲ್ಯವನ್ನು ಕಾಲ ಕಾಲಕ್ಕೆ ತಕ್ಕಂತೆ ಅಭೀವೃದ್ದಿಯನ್ನು ಮಾಡಿಕೊಳ್ಳಬೇಕು, ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸಿ ಸಾಧ್ಯವಾಗದಿದ್ದರೆ ನಿಮ್ಮಕೌಶಲ್ಯದಿಂದ ಸ್ವಯಂ ಆಗಿ ಕೆಲಸವನ್ನು ಪ್ರಾರಂಭ ಮಾಡಿ ಬೇರೆಯವರಿಗೆ ಕೆಲಸವನ್ನು ನೀಡಿ ಎಂದು ಕರೆ ನೀಡಿದರು.

ಮದಕರಿ ಯುವಕ ಸಂಘದ ಅಧ್ಯಕ್ಷರಾದ ಕೆ ಸೋಮಶೇಖರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

[t4b-ticker]

You May Also Like

More From Author

+ There are no comments

Add yours