ಜಿಲ್ಲಾ ಕ್ರೀಡಾಂಗಣದಲ್ಲಿ 6500ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ:ಸಿಇಓ ಎಂ.ಎಸ್.ದಿವಾಕರ್

 

ಚಿತ್ರದುರ್ಗ ಜ. 05(ಕರ್ನಾಟಕ ವಾರ್ತೆ) : ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಹಿನ್ನಲೆಯಲ್ಲಿ ರಾಷ್ಟಿçÃಯ ಯುವ ಸಪ್ತಾಹದ ಅಂಗವಾಗಿ ಜ.15 ರಂದು ಗಿನ್ನಿಸ್ ದಾಖಲೆಯ ಯೋಗ ಪ್ರದರ್ಶನಕ್ಕೆ ದೇಶಾದ್ಯಂತ ಸಿದ್ದತೆಗಳು ಆರಂಭವಾಗಿವೆ. ಚಿತ್ರದುರ್ಗ ನಗರದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸುವ  ಯೋಗ ಪ್ರದರ್ಶನದಲ್ಲಿ  ನಗರದ 6500 ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಇದರ ಜೊತೆ 500 ಜನ ಸಂಪ್ರದಾಯ ಯೋಗ ಪಟುಗಳು, ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯ 250, ನೆಹರು ಯುವ ಕೇಂದ್ರದ 100, ನರ್ಸಿಂಗ್ ಕಾಲೇಜುಗಳ 300 ಸೇರಿದಂತೆ ಪದವಿ ವಿದ್ಯಾರ್ಥಿಗಳು ಯೋಗಥಾನ್ ಭಾಗವಹಿಸಲಿದ್ದಾರೆ.

ಯೋಗಥಾನ್ ಕಾರ್ಯಕ್ರಮ ಆಯೋಜನೆ ಕುರಿತು ಬುಧವಾರ ಜಿ.ಪಂ. ಸಿಇಓ ಕಚೇರಿ ಸಭಾಂಗಣದಲ್ಲಿ ಸಿಇಓ ದಿವಾಕರ್.ಎಂ.ಎಸ್. ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಜರುಗಿತು.( M.S.Divakar )

ಈ ಸಂದರ್ಭದಲ್ಲಿ ಮಾತನಾಡಿದ ಸಿಇಓ ದಿವಾಕರ್.ಎಂ.ಎಸ್. ಯೋಗಥಾನ್ ಕಾರ್ಯಕ್ರಮ ಆಯೋಜಿಸಲು ವಿವಿಧ ಇಲಾಖೆಗಳ ಅಧಿಕಾರಿಗಳಯ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಸಂಕ್ರಾಂತಿ ಹಬ್ಬದ ಹಿನ್ನಲೆಯಲ್ಲಿ ಗ್ರಾಮೀಣ ಭಾಗದ ಮಕ್ಕಳು ಯೋಗಥಾನ್‌ನಲ್ಲಿ ಪಾಲ್ಗೊಳ್ಳಲು ಅಡಚಣೆಯಾಗಬಹುದು. ಹಿನ್ನಲೆಯಲ್ಲಿ ನಗರ ಪ್ರದೇಶದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ( chitradurga) ಪಾಲ್ಗೊಳ್ಳುವಂತೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಪಿಯು ಉಪನಿರ್ದೆಶಕರು ಕ್ರಮಕೈಗೊಳ್ಳಬೇಕು. ಯೋಗಥಾನ್ ಕಾರ್ಯಕ್ರಮದಲ್ಲಿ( yoga day) ಸಾವಿರಾರು ಜನರು ಪಾಲ್ಗೊಳ್ಳುವುದರಿಂದ ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಲು ಎನ್.ಎಸ್.ಎಸ್. ಎನ್.ಸಿ.ಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬೇಕು. ಯೋಗ ಮಾಡಲು ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣವನ್ನು ಸ್ವಚ್ಛಗೊಳಸಿ ಗ್ರೀನ್ ಮ್ಯಾಟ್ ಹೊದಿಸಬೇಕು. ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ಪ್ರತಿಯೊಬ್ಬರಿಗೂ ಸ್ಥಳಗಳನ್ನು ಮೊದಲೇ ಗುರುತಿಸಬೇಕು. ಲಘು ಉಪಹಾರ, ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಶಾಲಾ ಕಾಲೇಜುಗಳಲ್ಲಿ ಮೊದಲೇ ಶಿಷ್ಟಾಚರದ ಅನ್ವಯ ಯೋಗದ ಕುರಿತು ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು. ಪ್ರತಿ 500 ರಿಂದ 1000 ಜನರಿಗೆ ಯೋಗಥಾನ್‌ನಲ್ಲಿ ಯೋಗ ಪ್ರದರ್ಶಿಸಲು ಯೋಗ ಗುರುಗಳನ್ನು ನೇಮಿಸಬೇಕು ಎಂದರು.

ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ಡಿ.ಡಿ.ಪಿ.ಐ ರವಿಂಶಕರ್ ರೆಡ್ಡಿ, ಪಿಯುಡಿಡಿ ರಾಜು, ಡಿಹೆಚ್‌ಓ ಡಾ.ರಂಗನಾಥ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ, ನೆಹರು ಯುವ ಕೇಂದ್ರದ ಅಧಿಕಾರಿ ಸುಹಾಸ್, ಪತಂಜಲಿ ಯೋಗ ಸಂಸ್ಥೆಯ ಪ್ರತಿನಿಧಿಗಳು, ಆಯುಷ್ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours