ಜಲ ಜೀವನ ಮಿಷನ್ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಸಿಇಓ ಎಂ.ಎಸ್.ದಿವಾಕರ್

 

ಚಿತ್ರದುರ್ಗ: ಜಿಲ್ಲಾ ಪಂಚಾಯತ  ಮುಖ್ಯಕಾರ್ಯನಿರ್ವಾಹಕ  ಅಧಿಕಾರಿಗಳ ಎಂ.ಎಸ್.ದಿವಾಕರ್ ಅವರ  ಅಧ್ಯಕ್ಷತೆಯಲ್ಲಿ ಮಂಗಳವಾದಂದು  ಜಲ ಜೀವನ್ ಮಿಷನ್ ಯೋಜನೆ ಹಾಗೂ ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದಿದರು.

ಈ ಸಂದರ್ಭದಲ್ಲಿ ಮಾಹಿತಿ ಪಡೆದುಕೊಂಡ ಸಿಇಓ ಎಂ..ಎಸ್‌.ದಿವಾಕರ್ ಮಾತನಾಡಿ ನಾವು  ನಾಲ್ಕು ವಿಭಾಗಗಳಾಗಿ ಮಾಡಿ ಜಲ ಜೀವನ್ ಮಿಷನ್ ಕಾಮಗಾರಿ ಮಾಡುತ್ತಿದ್ದೇವೆ. ವೇಗವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 189 ಗ್ರಾಮ ಪಂಚಾಯತಿಗಳು ಇದ್ದ 1662 ಗ್ರಾಮಗಳಿಗೆ ಈ ಯೋಜನೆ ಅನುಕೂಲ ಪಡೆಯಲಿದ್ದು 3.80.983 ಮನೆಗಳಿಗೆ ಜಿಲ್ಲೆಯಲ್ಲಿ  ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುತ್ತದೆ ಎಂದರು.

ಈ ನಾಲ್ಲು ಬ್ಯಾಚ್ ನಲ್ಲಿ ಮೊದಲನೇ ಬ್ಯಾಚ್ ನಲ್ಲಿ  ಚಿತ್ರದುರ್ಗ ಮತ್ತು ಹೊಳಲ್ಕೆರೆ ತಾಲುಕಿನ 29 ಗ್ರಾಮಗಳು ಮಾಡಿದ್ದು ಎಲ್ಲಾ ಗ್ರಾಮದಲ್ಲಿ ಕೆಲಸ ಪೂರ್ಣಗೊಂಡಿದೆ.‌

ಎರಡನೇ ಬ್ಯಾಚ್ ನಲ್ಲಿ 630 ಗ್ರಾಮಗಳನ್ನು ತೆಗೆದುಕೊಂಡಿದ್ದು ಅದರಲ್ಲಿ ಚಿತ್ರದುರ್ಗ, ಹೊಳಲ್ಕೆರೆ, ಮೊಳಕಾಲ್ಮುರು, ಚಳ್ಳಕೆರೆ, ಹಿರಿಯೂರು ತಾಲುಕಿನ  ಹಳ್ಳಿಗಳಲ್ಲಿ  121 ಹಳ್ಳಿಗಳಲ್ಲಿ ಕೆಲಸ ಪೂರ್ಣಗೊಂಡಿದ್ದು ಉಳಿದ ಗ್ರಾಮದಲ್ಲಿ ಕೆಲಸ ಪ್ರಗತಿಯಲ್ಲಿದೆ.

3 ನೇ ಬ್ಯಾಚ್ ನಲ್ಲಿ  111 ಗ್ರಾಮದಲ್ಲಿ ಈಗ  8 ಗ್ರಾಮದಲ್ಲಿ ನೀರಿನ ಸಂಪರ್ಕ ಪೂರ್ಣಗೊಂಡಿದೆ.

 

4 ನೇ ಬ್ಯಾಚ್ ನಲ್ಲಿ 849 ಗ್ರಾಮಗಳು ಪಡೆದುಕೊಂಡಿದ್ದು 473 ಗ್ರಾಮಗಳ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಈ ಎಲ್ಲಾವನ್ನು  ಪ್ರಗತಿ ಪರಿಶೀಲನೆ ಮಾಡಿದ್ದು ವೇಗವಾಗಿ ಕೆಲಸ ಮಾಡಲು ತಿಳಿಸಿದ್ದೇನೆ

ಇದರ  ಜೊತೆಗೆ ಆಧಾರ ಕಾರ್ಡ್ ಸಂಗ್ರಹಣೆ, ಸಮುದಾಯ ವಂತಿಕೆ ಸಂಗ್ರಹಣೆ. ಹರ್ ಘರ್ ಜಲ್ ಘೋಷಣೆ ವಿಚಾರವಾಗಿ ಚರ್ಚಿಸಲಾಗಿದೆ ಎಂದು ತಿಳಿಸಿದರು.

ಉಪಕಾರ್ಯದರ್ಶಿಗಳು ಜಿಲ್ಲಾ ಪಂಚಾಯಿತಿ ಚಿತ್ರದುರ್ಗ.
ಅಧೀಕ್ಷಕ ಅಭಿಯಂತರರು ವೃತ್ತ ಕಛೇರಿ ದಾವಣಗೆರೆ.
ಕಾರ್ಯಪಾಲಕ ಅಭಿಯಂತರರು ಗ್ರಾ.ಕು.ನೀ&ನೈ ವಿಭಾಗ.
ಆರು ತಾಲ್ಲೂಕಿನ ಸಹಾಯಕ ಕಾರ್ಯಪಾಲಕ ಅಭಿಯಂತರರು.ಸಹಾಯಕ ಅಭಿಯಂತರರು.ಕಿರಿಯ ಅಭಿಯಂತರರು.ಸಪೋರ್ಟ್ ಇಂಜಿನಿಯರ್.ಜಿಲ್ಲಾ ಯೋಜನಾ ವ್ಯವಸ್ಥಾಪಕರು ಮತ್ತು ಜಿಲ್ಲಾ ಎಂಐಎಸ್ ಸಮಾಲೋಚಕರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours