ಆರ್ಥಿಕವಾಗಿ ಸಾಮಾಜಿಕವಾಗಿ ನೊಂದತ ಮಹಿಳೆಯರ ಪರವಾಗಿ ದಿನದ 24 ಗಂಟೆಗಳ ಕಾಲ ಕಾರ್ಯ: ಆರ್. ಪ್ರಮೀಳಾ ನಾಯ್ಡು

 

ಚಳ್ಳಕೆರೆ-24
ಆರ್ಥಿಕವಾಗಿ ಸಾಮಾಜಿಕವಾಗಿ ನೊಂದತ ಮಹಿಳೆಯರ ಪರವಾಗಿ ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಆರ್ ಪ್ರಮೀಳಾ ನಾಯ್ಡು ಹೇಳಿದರು.

ಅವರು ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಮಾಡಿದವರಿಗೆ ನೀಡು ಭಿಕ್ಷೆ ಎಂಬ ವಾಣಿಯಂತೆ ನೊಂದ ಅಂತಹ ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಕುಗ್ಗಬೇಡ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಹೆಣ್ಣು ಈ ದೇಶದ ಕಣ್ಣು ಆದ್ದರಿಂದ ಪ್ರತಿಯೊಂದು ಮಹಿಳೆ ಮೊದಲನೇ ಸ್ಥಾನದಲ್ಲಿ ಇರಬೇಕು ರಾಜಕೀಯವಾಗಿ ಸಾಮಾಜಿಕವಾಗಿ ಸಮಗ್ರವಾಗಿ ಬೆಳೆಯಲು ಮುಂದಾಗಬೇಕು ಮಹಿಳಾ ಆಯೋಗದ ಹಕ್ಕುಗಳ ಬಗ್ಗೆ ಬರೀ ಮಾತನಾಡುವುದಲ್ಲ ಪ್ರತಿಯೊಬ್ಬ ತಂದೆತಾಯಿಯ ಜವಾಬ್ದಾರಿ ಅತಿಮುಖ್ಯವಾದದ್ದು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಅವರಿಗೆ ಉತ್ತಮವಾದ ಶಿಕ್ಷಣ ನೀಡಿದ್ದಲ್ಲಿ ಉಜ್ವಲವಾದ ಭವಿಷ್ಯವನ್ನು ನೀಡಲು ಮುಂದಾಗಬೇಕು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವಂತೆ ಪೋಷಕರು ಮಕ್ಕಳನ್ನು ಪ್ರಜ್ಞಾವಂತರನ್ನಾಗಿ ಮತ್ತು ಬುದ್ಧಿವಂತರನ್ನಾಗಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಆರ್ ಪ್ರಮೀಳಾ ರಾಯ್ಡು ತಿಳಿಸಿದರು.

ಈಸಂದರ್ಭದಲ್ಲಿ ಜಿಲ್ಲಾ ಮಹಿಳಾ ಆಯೋಗದ ಉಪನಿರ್ದೇಶಕರು ಭಾರತಿ ಬಣಕರ್, ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ ಕಾರ್ಯನಿರ್ವಹಣಾಧಿಕಾರಿ ಎಚ್ ಗಂಗಾಧರಪ್ಪ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ರೂಪ ತಿಪ್ಪೇಸ್ವಾಮಿ ಹಿರೇಹಳ್ಳಿ, ದೇವಸ್ಥಾನ ಸಿಬ್ಬಂದಿ ಎಸ್ ಸತೀಶ್ ಸಹಾಯಕ ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ರಾಮಾಂಜನೇಯ, ನಾಯಕನಹಟ್ಟಿ ವಲಯ ಮೆಲ್ವಿಚಾರಕಿ ಎಂ ಸೌಮ್ಯ, ಹಿರೇಹಳ್ಳಿ ಬೇಡರಹಳ್ಳಿ ವಲಯ ಮೇಲ್ವಿಚಾರಕಿ ಜಯಲಕ್ಷ್ಮಿ, ಅಂಗನವಾಡಿ ಶಿಕ್ಷಕರಾದ ಬಿ ವಿಮಲಾಕ್ಷಿ, ವಿ ರತ್ನಮ್ಮ ,ಮೂಬೀನ ಬಾನು, ಆರ್ ಸರಸ್ವತಿ, ಶೀಲಾ ಬಾಯಿ, ನಿವೃತ್ತ ಅಂಗನವಾಡಿ ಶಿಕ್ಷಕಿ ದೇವಿರಮ್ಮ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours