ಮಹಿಳೆಯರು ಶಿಸ್ತು ,ಶ್ರದ್ದೆ ಇದ್ದರೆ ಸ್ವಾವಲಂಬಿ ಬದುಕು ಸಾಧ್ಯ:ಡಿ.ಎಸ್.ಪ್ರದೀಪ್

 

ಹೊಸದುರ್ಗ : ಮಹಿಳೆಯರಲ್ಲಿ ಶಿಸ್ತು ,ಶ್ರದ್ದೆ ಮತ್ತು  ಗುರಿ ಇದ್ದಲ್ಲಿ ಸ್ವಾವಲಂಬಿಗಳಾಗಲು ಸಾಧ್ಯ ಹಾಗೂ ಸಣ್ಣ ಸಣ್ಣ ಉದ್ಯಮಗಳು ದೇಶದ ಅಭಿವೃದ್ಧಿಗೆ ಪೂರಕವಾಗಬಲ್ಲವು   ಎಂದು ಸದ್ಗುರು ಆಯುರ್ವೇದ ಉತ್ಪನ್ನಗಳ ಮಾಲೀಕ ಡಿ.ಎಸ್.ಪ್ರದೀಪ್‌ ಹೇಳಿದರು.
ನಗರದ  ರಾಧಕೃಷ್ಣ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಗುವರಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಟಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಪೂಜ್ಯ ವೀರೇಂದ್ರ ಹೆಗ್ಗಡೆ ಅವರು, ಧರ್ಮಸ್ಥಳ ಯೋಜನಾ ಸಂಸ್ಥೆಯ ಮೂಲಕ ಮನೆಗೆ ಸೀಮಿತವಾಗಿರುವ ಸ್ರೀಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಅಕ್ಷರ,ಅರ್ಥಿಕ ಸಬಲ,ವ್ಯವಹಾರದ ಜ್ಞಾನ ಕಲಿಸಿದರು. ಈ ಮೂಲಕ ಮಹಿಳೆಯರು ಕುಟುಂಬ ನಿರ್ವಹಣೆ ಜತೆಗೆ ಆಧಾರವಾಗುವ ಕೌಶಲ ನೀಡಿದರು ಗ್ರಾಮೀಣ ಭಾಗದ ಸಾವಿರಾರು ಕುಟುಂಬಗಳಿಗೆ ಸಂಸ್ಥೆ ಬೆಳಕಿನ ಹಾದಿ ತೋರಿದರು ಎಂದರು.
 ಪ್ರಾರಂಭದಲ್ಲಿ ನಾನು ಒಂದು ಉದ್ಯಮ ಆರಂಭ ಮಾಡಬೇಕೆಂದು ಸಾಲ ನೀಡುವಂತೆ ಕರ್ನಾಟಕ ಬ್ಯಾಂಕ್ ಗೆ ಅರ್ಜಿ ಸಲ್ಲಿಸಿದ್ದೆ, ಬ್ಯಾಂಕ್ನವರು ಧರ್ಮಸ್ಥಳ ಸಂಘದ  ರುಡ್ ಸೆಡ್ ಸಂಸ್ಥೆಯಿಂದ ತರಬೇತಿ ಪಡೆದು ಬನ್ನಿ ನಂತರ ಸಾಲ ಕೊಡುತ್ತೇವೆ ಎಂದು ಹೇಳಿದರು. ನಂತರ ಚಿತ್ರದುರ್ಗದಲ್ಲಿ ರುಡ್ ಸೆಟ್ ಸಂಸ್ಥೆಯ  ಉದ್ಯಮಶೀಲತೆಯ ತರಬೇತಿ ಪಡೆದು ಬಂದೆನು. ಧರ್ಮಸ್ಥಳ ಸಂಘದಿಂದ 15 ದಿನಗಳ ಕಾಲ ಪಡೆದ ತರಬೇತಿ ನನ್ನನ್ನು ಒಳ್ಳೆಯ ಉದ್ಯಮದಾರನ್ನಾಗಿ ಮಾಡಿದೆ. ಒಂದು ಪ್ರಬಲ ಚಿಂತನೆ ದೇಶವನ್ನೇ ಬದಲಾವಣೆ ಮಾಡುತ್ತದೆ ಎನ್ನುವುದಕ್ಕೆ ಡಾ. ವೀರೇಂದ್ರ ಹೆಗ್ಗಡೆ ಅವರು ಸ್ಥಾಪಿಸಿದ ಧರ್ಮಸ್ಥಳ ಯೋಜನಾ ಸಂಸ್ಥೆ ಒಂದು ದೊಡ್ಡ ಉದಾಹರಣೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಬಿಪಿ ಓಂಕಾರಪ್ಪ, ದೊಡ್ಡ ಬ್ಯಾಲದಕೆರೆ ಪ್ರಗತಿ ಬಂಧು ಸ್ವಸಹಾಯ ಒಕ್ಕೂಟ ಅಧ್ಯಕ್ಷೆ ಹೇಮಾ ಮಂಜುನಾಥ್‌, ಜಿಲ್ಲಾ ನಿರ್ದೇಶಕರಾದ ವಿನಯ್‌ ಕುಮಾರ್‌ ಸುವರ್ಣ, ಕ್ಷೇತ್ರ ಯೋಜನಾಧಿಕಾರಿ ಶಿವಣ್ಣ.ಎಸ್‌, ಮಹಿಳಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ದೀಪಿಕಾ ಸತೀಶ್‌,ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಕೆ.ಪಿ.ಸಿಂಧು, ಕಸಾಪ. ಮತ್ತು ಯೋಜನೆಯ ಸಿಬ್ಬಂದಿ ವರ್ಗದವರು ಹಾಗೂ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.
[t4b-ticker]

You May Also Like

More From Author

+ There are no comments

Add yours